ಅಡಿಕೆ ಧಾರಣೆ ಏರಿಕೆಯ ನಡುವೆ ಇರಲಿ ಎಚ್ಚರ | ಗುಜರಾತಲ್ಲಿ ಅಡಿಕೆ ವ್ಯಾಪಾರಿಗೆ 59 ಲಕ್ಷ ರೂಪಾಯಿ ವಂಚನೆಯ ದೂರು |

September 26, 2021
2:46 PM

ಗುಜರಾತಿನ ಅಹಮದಾಬಾದ್‌ ಸಿಂಧುಭವನ್‌ ಪ್ರದೇಶದಲ್ಲಿ ನೀರವ್ ಭರತಭಾಯ್ ಪಟೇಲ್ ಎಂಬವರಿಗೆ ಅಡಿಕೆ ಖರೀದಿ ವ್ಯವಹಾರದಲ್ಲಿ ಸುಮಾರು 59 ಲಕ್ಷ ರೂಪಾಯಿ ವಂಚಿಸಿದ ಬಗ್ಗೆ ಅಹಮದಾಬಾದ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಮಾಧವಪುರದಲ್ಲಿ ಸೌರಾಷ್ಟ್ರ ಟ್ರೇಡರ್ಸ್ ಮೂಲಕ ಅಡಿಕೆ ವ್ಯವಹಾರ ನಡೆಸುತ್ತಿರುವ ಮೆಹುಲ್ ಖೈರಯ್ಯ ಅವರು ವಂಚಿಸಿ ಮುಂಬಯಿಗೆ ತೆರಳಿದ್ದಾರೆ ಎಂದು ದೂರಿನಲ್ಲಿ  ತಿಳಿಸಿದ್ದಾರೆ. ಕಳೆದ 11 ತಿಂಗಳಿನಿಂದ ಅಡಿಕೆ ವ್ಯಾಪಾರ ಮಾಡುತ್ತಿದ್ದ ಮೆಹುಲ್ ಖೈರಯ್ಯ ಅವರು ಅಡಿಕೆ ಖರೀದಿಸಿ ಕೂಡಲೇ ಹಣ ನೀಡುತ್ತಿದ್ದರು. ಒಟ್ಟು ಸುಮಾರು 1.5 ಕೋಟಿ ಮೌಲ್ಯದ ಅಡಿಕೆ ಖರೀದಿಸಿದ ನಂತರ ಆಗಾಗ ಹಣ ಪಾವತಿ ಮಾಡುತ್ತಿದ್ದರು. ಈಚೆಗೆ ಅಡಿಕೆ ಖರೀದಿ ಮಾಡಿದ 59 ಲಕ್ಷ ವಂಚಿಸಿ ಮುಂಬಯಿಗೆ ಪರಾರಿಯಾಗಿದ್ದಾರೆ ಎಂದು ಭರತಭಾಯ್ ಪಟೇಲ್ ದೂರಿನಲ್ಲಿ  ತಿಳಿಸಿದ್ದಾರೆ.

ಅಹಮದಾಬಾದ್‌ ನ ಸಿಂಧುಭವನ್‌ ಪ್ರದೇಶದಲ್ಲಿ ನೀರವ್ ಭರತಭಾಯ್ ಪಟೇಲ್ ಹಲವು ಸಮಯಗಳಿಂದ ಅಡಿಕೆ ವ್ಯಾಪಾರ ನಡೆಸುತ್ತಿದ್ದಾರೆ. ಈಚೆಗೆ ಸುಮಾರು 11 ತಿಂಗಳುಗಳ ಹಿಂದೆ ಮುಂಬಯಿ ಮೂಲದ ಮೆಹುಲ್ ರಮೇಶ್ ಭಾಯ್ ಖೈರಯ್ಯ  ಅವರ ಪರಿಚಯವಾಗಿ ಅಡಿಕೆ ಮಾರಾಟದ ವ್ಯವಹಾರ ಮಾಡುತ್ತಿದ್ದರು. ಆರಂಭದಲ್ಲಿ  ಅಡಿಕೆ ಸ್ಯಾಂಪಲ್‌ ಎಂದು ಖರೀದಿ ಮಾಡಿ ಉತ್ತಮ ರೇಟು ನೀಡಿದ್ದರು. ಇದೀಗ 6  ತಿಂಗಳಿನಿಂದ ವಂಚಿಸಿ ಪರಾರಿಯಾಗಿದ್ದಾರೆ, ಈ ಬಗ್ಗೆ ಹಣ ಪಾವತಿ ಮಾಡುವ ಭರವಸೆಯನ್ನು  ಕಳೆದ ಎರಡು ತಿಂಗಳಿನಿಂದ ನೀಡಿ ಇದೀಗ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ  ತಿಳಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ
September 13, 2026
9:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?
September 13, 2026
12:16 PM
by: ಸಾಯಿಶೇಖರ್ ಕರಿಕಳ
ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು
September 13, 2026
8:13 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror