ತಮಿಳುನಾಡಿನ ರಾಮೇಶ್ವರದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹುಡುಗ ಭಾರತದ ʼಕ್ಷಿಪಣಿಗಳ ಜನಕ’ನಾಗಿ ಪ್ರಸಿದ್ಧರಾದರೆಂದರೆ ಸಣ್ಣ ಸಾಧನೆಯಲ್ಲ. ಈ ಪರಿಶ್ರಮದ ಹಿಂದೆ ಅಪಾರವಾದ ಜೀವನ ಪ್ರೀತಿಯಿದೆ. ಮಾತ್ರವಲ್ಲ ಸದಾ ಕ್ರಿಯಾಶೀಲತೆ, ನಿರಂತರ ಪ್ರಯತ್ನ, ಸ್ಷಷ್ಟವಾದ ಭವಿಷ್ಯದ ಬಗೆಗಿನ ಕನಸುಗಳು ಅವರ ಯಶಸ್ವಿನ ಗುಟ್ಟುಗಳು.
15 ಒಕ್ಟೋಬರ್ 1931 ರಂದು ಜೈನುಲಬ್ದೀನ್ ಹಾಗೂ ಆಶಿಮಾ ದಂಪತಿಗಳ ಪುತ್ರರಾಗಿ ಅಬ್ದುಲ್ ಕಲಾಂರವರು ಜನಿಸಿದರು. ಹೆತ್ತವರ ಬಡತನದ ಅರಿವಿದ್ದ ಕಲಾಂರು ಬೆಳಗ್ಗಿನ ತಮ್ಮ ಅಭ್ಯಾಸವನ್ನು ಮುಗಿಸಿ ಪತ್ರಿಕಾ ವಿತರಣೆಯನ್ನು ಮಾಡಿ ಶಾಲೆಗೆ ಹೋಗುತ್ತಿದ್ದರು.
ಮೂಲತಃ ಅವರೊಬ್ಬ ವಿಜ್ಞಾನಿ. ಅಂತರಿಕ್ಷಯಾನ ವಿಜ್ಞಾನಿ. ಅವರಲ್ಲೊಬ್ಬ ಉಪನ್ಯಾಸಕನಿದ್ದ, ಗಣಿತಜ್ಞ, ತಮಿಳು ಕವಿ, ಲೇಖಕ, ವೀಣಾವಾದಕ. ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ DRDO ಹಾಗೂ ಇಸ್ರೋ ಸಂಸ್ಥೆಗಳ ಹೆಮ್ಮೆಯ ವಿಜ್ಞಾನಿ ನಮ್ಮ ಅಬ್ದುಲ್ ಕಲಾಂ. ಭಾರತದ ಮೊದಲ ಉಪಗ್ರಹ ಉಡಾವಣೆಯ ಯೋಜನಾ ನಿರ್ದೇಶಕರಾಗಿ ಯಶಸ್ವಿಯಾದವರು. ಭಾರತದ ಅಣುಬಾಂಬ್ ಹಾಗೂ ಕ್ಷಿಪಣಿಗಳ ಜನಕನೆಂದೇ ಖ್ಯಾತ ರಾದವರು. 1998 ರಲ್ಲಿ ಪೋಖ್ರಾನ್ 2 ನ್ಯೂಕ್ಲಿಯರ್ ಪರೀಕ್ಷೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದವರು ಕಲಾಂರವರು. 1997 ರಲ್ಲಿ ಅರ್ಹವಾಗಿಯೇ ಭಾರತರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಮ್ಮ ದೇಶ ಕಂಡ ಕೆಲವೇ ಕೆಲವು ಕ್ರಿಯಾಶೀಲ ರಾಷ್ಟ್ರಪತಿಗಳಲ್ಲಿ ಅಬ್ದುಲ್ ಕಲಾಂರವರು ಒಬ್ಬರು. ತಮ್ಮ ಎಂದಿನ ಸರಳತೆಯನ್ನು ರಾಷ್ಟ್ರಪತಿಯಾಗಿದ್ದಾಗಲೂ ನಿಭಾಯಿಸಿ ಜನಮನ್ನಣೆಗೆ ಪಾತ್ರರಾಗಿದ್ದರು. ತಮ್ಮ ಭಾಷಣಗಳಿಂದ , ಉಪನ್ಯಾಸಗಳಿಂದ ಖ್ಯಾತರಾಗಿದ್ದರು. ತಮ್ಮ ಕೊನೆಯ ಉಸಿರನ್ನು ಕೂಡ ಭಾಷಣ ಮಾಡುತ್ತಿದ್ದಂತೆ ವೇಧಿಕೆಯಲ್ಲೇ ಪ್ರಾಣ ತ್ಯಾಗ ಮಾಡಿದರು.
ಮಕ್ಕಳ ಪ್ರೀತಿಯ ಕಲಾಂ ಅಜ್ಜ ಆಗಿದ್ದರು. ಇಂದು ಅವರ ಹುಟ್ಟು ಹಬ್ಬ. ಅವರ ಹುಟ್ಟುಹಬ್ಬವನ್ನು ಮಕ್ಕಳ ಹಬ್ಬವಾಗಿ ಆಚರಿಸುವುದರಲ್ಲಿ ನಿಜವಾಗಿಯೂ ಒಂದು ಅರ್ಥವಿದೆಯಲ್ಲವೇ.?!
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…