ಜುಲೈ 2025 ರಲ್ಲಿ ದೇಶಾದ್ಯಂತ ಮಾಸಿಕ ಸರಾಸರಿ ಮಳೆ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ, ಇದು ದೀರ್ಘಾವಧಿಯ ಸರಾಸರಿಯ ಶೇ 106 ರಷ್ಟಿರುತ್ತದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪತ್ರಿಕಾಗೋಷ್ಠಿಯಲ್ಲಿ, ಹವಾಮಾನ ಇಲಾಖೆಯ ಮಹಾನಿರ್ದೇಶಕ ಡಾ. ಮೃತ್ಯುಂಜಯ ಮೊಹಾಪಾತ್ರ, ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.ಆದರೆ, ಈಶಾನ್ಯ ಮತ್ತು ಪೂರ್ವ ಭಾರತದ ಹೆಚ್ಚಿನ ಭಾಗಗಳು ಮತ್ತು ವಾಯುವ್ಯ ಭಾರತದ ಕೆಲವು ಪ್ರದೇಶಗಳು ಈ ವರ್ಷದ ಜುಲೈನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ನೈಋತ್ಯ ಮಾನ್ಸೂನ್ ಕೇರಳದಲ್ಲಿ ಮೇ 24 ರಂದು ಆರಂಭವಾಗಿತ್ತು, ಇದು 2009 ರಲ್ಲಿ ಮೇ 23 ರಂದು ಆರಂಭವಾಗಿದ್ದ ಮುಂಗಾರು, ಆ ಬಳಿಕ 17 ವರ್ಷಗಳಲ್ಲಿ ಬೇಗನೆ ಮುಂಗಾರು ಆರಂಭಗೊಂಡಿತ್ತು. ನೈಋತ್ಯ ಮಾನ್ಸೂನ್ ಜೂನ್ 29 ರಂದು ಇಡೀ ದೇಶವನ್ನು ಆವರಿಸಿದೆ. ಜುಲೈ 8 ರಂದು ಸಾಮಾನ್ಯವಾಗಿ ಇಡೀ ದೇಶವನ್ನು ಆವರಿಸುತ್ತಿತ್ತು. ಹೀಗಾಗಿ ನಿಗದಿತ ದಿನಕ್ಕಿಂದ ಒಂಬತ್ತು ದಿನಗಳ ಮುಂಚಿತವಾಗಿ ದೇಶದಾದ್ಯಂತ ಮುಂಗಾರು ಆವೃತವಾಗಿದೆ.
ಈ ವರ್ಷದ ಜೂನ್‌ನಲ್ಲಿ ದೇಶಾದ್ಯಂತ ಒಟ್ಟಾರೆಯಾಗಿ 180 ಮಿಲಿಮೀಟರ್ ಮಳೆಯಾಗಿದೆ, ಇದು ಸಾಮಾನ್ಯವಾಗಿ 165.3 ಮಿಲಿಮೀಟರ್ ಇರುತ್ತದೆ ಎಂದು ಡಾ. ಮೊಹಾಪಾತ್ರ ಹೇಳಿದರು. ಆದರೆ, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ, ಸಾಮಾನ್ಯವಾಗಿ 328.4 ಮಿಮೀ ಮಳೆಯಾಗುತ್ತದೆ ಈ ಬಾರಿ ಕೇವಲ 272.9 ಮಿಮೀ ಮಳೆಯಾಗಿದೆ ಎಂದು ಅವರು ಹೇಳಿದರು.
ಜುಲೈ 2025 ರಲ್ಲಿ, ಈಶಾನ್ಯ ಭಾರತ ಮತ್ತು ವಾಯುವ್ಯ, ಪೂರ್ವ ಮತ್ತು ದ್ವೀಪದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ಅನೇಕ ಪ್ರದೇಶಗಳಲ್ಲಿ ಮಾಸಿಕ ಸರಾಸರಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಜುಲೈ 5 ರಿಂದ ಆರು ದಿನಗಳಲ್ಲಿ ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದ ಹಲವು ಭಾಗಗಳಲ್ಲಿ ಮುಂಗಾರು ವಾತಾವರಣ ಸಕ್ರಿಯವಾಗಿ ಮುಂದುವರಿಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಒಡಿಶಾದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಹರಿಯಾಣ, ಪಂಜಾಬ್, ದೆಹಲಿ, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಪೂರ್ವ ರಾಜಸ್ಥಾನ, ಗುಜರಾತ್ ರಾಜ್ಯ, ಜಾರ್ಖಂಡ್‌ನಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ.
ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಿಹಾರ, ಆಂಧ್ರಪ್ರದೇಶದ ಕರಾವಳಿ ಮತ್ತು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಮುಜಫರಾಬಾದ್‌ನಲ್ಲಿ ಕೆಲವು ಸ್ಥಳಗಳಲ್ಲಿ ಮಿಂಚು ಮತ್ತು ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.