Advertisement
MIRROR FOCUS

ಕೃಷಿಯಲ್ಲಿ ಮಹಿಳಾ ಡ್ರೋನ್​​ ಪೈಲಟ್​ಗಳ ಸಾಧನೆ | ಕೃಷಿಯಲ್ಲಿ ಹೊಸತನ ಮತ್ತು ಉದ್ಯೋಗಾವಕಾಶ ಸೃಷ್ಟಿ |

Share

ಇತ್ತೀಚಿನ ದಿನಗಳಲ್ಲಿ ಮಹಿಳೆಯರು(Women) ಸಾಧನೆ ಮಾಡದ ಕ್ಷೇತ್ರಗಳೇ ಇಲ್ಲ. ಎಲ್ಲಾ ಮಜಲುಗಳಲ್ಲು ಆಕೆ ಸೈ ಅನ್ನಿಸಿಕೊಂಡಿದ್ದಾಳೆ. ಇದೀಗ ವೈಯಕ್ತಿಕ ಆಕಾಂಕ್ಷೆ ಮತ್ತು ತಾಂತ್ರಿಕ ಆವಿಷ್ಕಾರದ(technological innovation) ಪರಿಣಾಮವಾಗಿ ಭೀಮ್​ರೆಡ್ಡಿ ಮಾಧವಿ ಮತ್ತು ನಿಶಾ ಡ್ರೋನ್​ ತಂತ್ರಜ್ಞಾನದಿಂದ(Drone technology)  ಪ್ರೇರಣೆಗೊಂಡು ಕೃಷಿ ಕ್ಷೇತ್ರದಲ್ಲಿ(Agricultural sector) ಇದರ ಬಳಕೆಗೆ ಮುಂದಾಗಿದ್ದಾರೆ. ಮೊದಲ ಮಹಿಳಾ ಡ್ರೋನ್​​​​​​ ಪೈಲಟ್​ಗಳಾಗಿರುವ(Female drone Pilot) ಇವರ ಪ್ರಯಾಣವು ಕುಟುಂಬ ಮತ್ತು ಸಮುದಾಯಗಳು ಸವಾಲುಗಳಿಂದ ಕೂಡಿದ್ದು, ಇವೆಲ್ಲವನ್ನು ಮೀರಿ ಸಾಧನೆ ಮಾಡಿದ್ದಾರೆ.

Advertisement
Advertisement
Advertisement

ಕೃಷಿಯಲ್ಲಿ ಹೊಸತನ ಮತ್ತು ಉದ್ಯೋಗವಕಾಶ ಸೃಷ್ಟಿ: ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಮಾಧವಿ, ಕೃಷಿಕರಾದ ತಂದೆಯ ಕಷ್ಟಗಳನ್ನು ಕಣ್ಣಾರೆ ಕಂಡಿದ್ದಾರೆ. ಕೃಷಿಕರ ಸಂಕಷ್ಟಗಳನ್ನು ನಿವಾರಿಸಲು ಪಣತೊಟ್ಟು ಅದಕ್ಕಾಗಿ ಎದುರಾದ ಸಾಮಾಜಿಕ ಕಟ್ಟುಪಾಡುಗಳನ್ನು ಬದಿಗಿರಿಸಿದ್ದಾರೆ. ಇದೀಗ ಅವರು ರಾಜ್ಯದ ಮೊದಲ ಮಹಿಳಾ ಡ್ರೋನ್​​​ ಪೈಲಟ್​​ ಆಗುವ ಮೂಲಕ ಈ ಕ್ಷೇತ್ರದಲ್ಲಿನ ಲಿಂಗ ತಾರತಮ್ಯವನ್ನು ಹೋಗಲಾಡಿಸಿದ್ದಾರೆ. ಆವಿಷ್ಕಾರದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದ ಮಾಧವಿ ತಮ್ಮ ತಂದೆಯಂತೆ ಕೃಷಿಯಲ್ಲಿ ತೊಡಗುವ ಕೊತೆಗೆ ಡ್ರೋನ್​ ಪೈಲಟ್​ ಆಗಿ ಪರಿವರ್ತನೆಗೊಂಡಿದ್ದಾರೆ. ಕೃಷಿಯಲ್ಲಿ ತಂತ್ರಜ್ಞಾನದ ಸಾಮರ್ಥ್ಯದ ಸ್ಫೂರ್ತಿ ಮತ್ತು ಮೌಲ್ಯೀಕರಣದಿಂದ ಎರಡು ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸಿದೆ. ಡ್ರೋನ್​​ ತಂತ್ರಜ್ಞಾನದ ಕಲಿಕೆಯನ್ನು ಸರಳವಾಗಿ ಕಲಿತ ಮಾಧವಿ, ಇದರಿಂದ ಕೃಷಿ ಪದ್ಧತಿ ಉತ್ತಮಗೊಳಿಸುವ ಜೊತೆಗೆ ಗ್ರಾಮೀಣ ಭಾಗದಲ್ಲಿ ಹೊಸ ಉದ್ಯೋಗಾವಕಾಶವನ್ನು ಸಹ ಸೃಷ್ಟಿಸಿದ್ದಾರೆ.

Advertisement

ರೈತರಿಗೆ ಸಹಾಯ ಮಾಡಬೇಕೆಂಬ ತುಡಿತ : ಹರಿಯಾಣದ ಜುಜ್ಜರ್​ನ ನಿಶಾ ತಂದೆ ಸೈನ್ಯದಲ್ಲಿ ಕಾರ್ಯ ನಿರ್ವಹಿಸಿದವರು. ಬಾಲ್ಯದಲ್ಲಿಯೇ ಪೈಲಟ್​​ ಆಗುವ ಜೊತೆಗೆ ಕೃಷಿಯ ಜೀವನೋಪಾಯವನ್ನು ಹೊಂದಬೇಕು ಎಂಬ ಕನಸನ್ನು ಕಂಡಿದ್ದರು. ಡ್ರೋನ್​ ತಂತ್ರಜ್ಞಾನದಲ್ಲಿ ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮುಗಿಸಿರುವ ಇವರು ಇದನ್ನೇ ವೃತ್ತಿಯಾಗಿ ತೆಗೆದುಕೊಳ್ಳಲು ನಿರ್ಧರಿಸಿದರು. ತಮ್ಮ ಅನುಭವದ ಜೊತೆಗೆ ರೈತರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ನಿಶಾ, ಐಸಿಎಂಆರ್​​ನಿಂದ ಅನುಮೋದಿತ ಕೀಟನಾಶಕ ಸಿಂಪಡಣೆ, ನೀರಿನ ಸಂರಕ್ಷಣೆ ಮತ್ತು ರೈತ ಶಿಕ್ಷಣಕ್ಕಾಗಿ ಡ್ರೋನ್​​ ಬಳಕೆಗೆ ಮುಂದಾದರು. ತಮ್ಮ ಗುರಿಯತ್ತ ಹೊಂದಿದ್ದ ಸಮಪರ್ಣೆಯಿಂದ ಇಂದು ಅವರು ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ. ತಮ್ಮ ಈ ಸಾಧನೆಯ ಹಾದಿಯಲ್ಲಿ ಅನೇಕ ಸಾಮಾಜಿಕ ಗ್ರಹಿಕೆಯನ್ನು ಕೂಡ ಇವರು ಎದುರಿಸಿದ್ದಾರೆ.

ಎಲ್ಲಾ ಕಟ್ಟುಪಾಡುಗಳ ನಡುವೆ ಮಾಧವಿ ಮತ್ತು ನಿಶಾ, ತಮ್ಮ ದೂರದೃಷ್ಟಿ ಮತ್ತು ಸಬಲೀಕರಣದಿಂದ ಕೃಷಿ ಕ್ಷೇತ್ರದಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದ್ದಾರೆ. ಹಳೆಯ ಸವಾಲನ್ನು ಎದುರಿಸಿ, ಗ್ರಾಮೀಣ ಜೀವನದ ಸಾಂಪ್ರದಾಯಿಕ ಪದ್ಧತಿಯಲ್ಲಿ ತಂತ್ರಜ್ಞಾನದ ಪರಿವರ್ತಕರಾಗಿ ಮಾಧವಿ ಮತ್ತು ನಿಶಾ ರೂಪುಗೊಂಡಿದ್ದಾರೆ.
As a result of personal aspiration and technological innovation, Bhimreddy Madhavi and Nisha are inspired by drone technology (Drone) to use it in the field of agriculture. Their journey as the first female drone pilots has been full of challenges with family and communities, and they have overcome all of them.

-ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

7 hours ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

11 hours ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

11 hours ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

3 days ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

3 days ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

4 days ago