ಮರಳಿ ಬಾರದೂರಿಗೆ ಹೋದ ನಟ ವಿಜಯ್ ರಾಘವೇಂದ್ರ ಪತ್ನಿ | ಸ್ಪಂದನಾ ಹೃದಯಾಘಾತದಿಂದ ನಿಧನ |

August 7, 2023
12:55 PM
ಆರೋಗ್ಯವಾಗಿದ್ದ ಸ್ಪಂದನಾ ಏಕಾಏಕಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಸ್ಪಂದನಾ ಹಾಗೂ ವಿಜಯ್ ಅವರು ವಿವಾಹ ವಾರ್ಷಿಕೋತ್ಸವದ ಹೊಸ್ತಿಲಲ್ಲಿ ಇದ್ದರು. ಅದಕ್ಕೂ ಮೊದಲೇ ಸ್ಪಂದನ ಮೃತಪಟ್ಟಿದ್ದಾರೆ.

ಚಿನ್ನಾರಿ ಮುತ್ತಾ  ಎಂದೆ ಖ್ಯಾತಿ ಪಡೆದ ನಟ ವಿಜಯ್ ರಾಘವೇಂದ್ರ #Vijay Raghavendra ಸದಾ ನಗುಮೊಗದ ನಟ. ಸದಾ ತನ್ನ ಪತ್ನಿಯ ಬೆಂಬಲದೊಂದಿಗೆ ಜೀವನ ನಡೆಸುತ್ತಿದ್ದ ವಿಜಯ್‌ ಅವರಿಗೆ ದೊಡ್ಡ ಶಾಕ್‌ ಆಗಿದೆ. ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

Advertisement
Advertisement

ಸ್ಪಂದನ ಸಾವು ಅನೇಕರಿಗೆ ಶಾಕ್ ತಂದಿದೆ. ಆರೋಗ್ಯವಾಗಿದ್ದ ಸ್ಪಂದನಾ ಏಕಾಏಕಿ ನಿಧನ ಹೊಂದಿದ್ದು ನಿಜಕ್ಕೂ ದುಃಖದ ವಿಚಾರ. ಈ ಸುದ್ದಿ ತಿಳಿದು ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅಭಿಮಾನಿಗಳಿಗೂ ಈ ವಿಚಾರವನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಸ್ಪಂದನಾ ಹಾಗೂ ವಿಜಯ್ ಅವರು ವಿವಾಹ ವಾರ್ಷಿಕೋತ್ಸವದ ಹೊಸ್ತಿಲಲ್ಲಿ ಇದ್ದರು. ಅದಕ್ಕೂ ಮೊದಲೇ ಸ್ಪಂದನ ಮೃತಪಟ್ಟಿದ್ದಾರೆ.

ಮಾಜಿ ಪೊಲೀಸ್ ಅಧಿಕಾರಿ ಬಿಕೆ ಶಿವರಾಮ್ ಅವರ ಮಗಳು ಸ್ಪಂದನಾ. ವಿಜಯ್ ಹಾಗೂ ಸ್ಪಂದನಾ ಅವರದ್ದು ಪ್ರೇಮ ವಿವಾಹ. 2007ರ ಆಗಸ್ಟ್ 26ರಂದು ಇವರು ಹಸಮಣೆ ಏರಿದ್ದರು. ವಿಜಯ್ ಹಾಗೂ ಸ್ಪಂದನಾ ಬ್ಯಾಂಕಾಕ್​​ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸ್ಪಂದನಾಗೆ ಹೃದಯಾಘಾತ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ. ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್​​ನಲ್ಲೇ ನಡೆಯಲಿದೆ. ಮಂಗಳವಾರ (ಆಗಸ್ಟ್​​ 8) ಅವರ ಮೃತದೇಹ ಬೆಂಗಳೂರಿಗೆ ಬರಲಿದೆ.

 

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಜ್ಯದ ನೇರಳೆಹಣ್ಣು ಜಾಗತಿಕ ಮಾರುಕಟ್ಟೆಗೆ ಲಗ್ಗೆ | ಮೊದಲ ಬಾರಿಗೆ ಲಂಡನ್‌ಗೆ ರಫ್ತು
June 25, 2025
11:39 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳ
June 23, 2025
11:40 AM
by: The Rural Mirror ಸುದ್ದಿಜಾಲ
ಫಸಲ್ ವಿಮಾ ಯೋಜನೆ | ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ
June 23, 2025
11:32 AM
by: The Rural Mirror ಸುದ್ದಿಜಾಲ
ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತ ಕನಿಷ್ಠ 1 ಮೀಟರ್ ರಸ್ತೆ  ಬ್ಲಾಕ್ ತೆರವಿಗೆ ಆದೇಶ
June 22, 2025
11:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror