ಕೃಷಿಕರ ತೋಟದಲ್ಲಿ ಬಿದ್ದು ಮೊಳಕೆಯೊಡೆದಿರುವ ತೆಂಗಿನಕಾಯಿಗೂ ಮೌಲ್ಯ ಇದೆ. ಆದರೆ ಅದನ್ನು ಮಾರುಕಟ್ಟೆ ಮಾಡುವ, ಮೌಲ್ಯವರ್ಧನೆ ಮಾಡುವ ಕಲೆ ತಿಳಿದಿರಬೇಕು ಅಷ್ಟೇ. ಅಂದ ಹಾಗೆ, ಮೊಳಕೆ ಒಡೆದಿರುವ ತೆಂಗಿನ ಕಾಯಿಯ ಒಳಗಿನ ಹೂವನ್ನೇ ಮಾರುಕಟ್ಟೆ ಮಾಡುತ್ತಿರುವ ಯುವಕ ಬೆಂಗಳೂರಿನಲ್ಲಿದ್ದಾರೆ. ಅದಕ್ಕೆಂದೇ ಕಂಪನಿ ಸ್ಥಾಪಿಸಿ ಆ ಮೂಲಕ ತೆಂಗಿನ ಮೌಲ್ಯವರ್ಧನೆ ನಡೆಯುತ್ತಿದೆ. “ಕೊಕೋನಟ್ ಆಪಲ್” ಎಂದು ಕರೆಯಲ್ಪಡುವ ತೆಂಗಿನ ಈ ಹೂವು ಪೌಷ್ಟಿಕಾಂಶಯುಕ್ತ ಆಹಾರವೂ ಹೌದು.…..ಮುಂದೆ ಓದಿ….
ಮೂಲತ: ರಾಯಚೂರಿನ ಯುವಕ ಸುನಿಲ್ ಕುಮಾರ್. ತಮಿಳು ಮೂಲ ಭಾಷೆ. ಬಿಕಾಂ ಓದಿನ ಬಳಿಕ ಸುಮಾರು 16 ವರ್ಷಗಳ ಹಿಂದೆ ಬೆಂಗಳೂರು ಸೇರಿದ ಯುವಕ. ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಕೆಲಸದ ಒತ್ತಡದ ಕಾರಣದಿಂದ ಉದ್ಯೋಗ ಬಿಟ್ಟು ಸ್ವಂತದ್ದಾದ ಏನಾದರೊಂದು ಉದ್ಯಮ ಮಾಡಬೇಕು, ಉದ್ಯೋಗ ಮಾಡಬೇಕು ಎಂದು ಯೋಚಿಸುತ್ತಿದ್ದರು. ಅದುವರೆಗೆ ಬೇರೆ ಬೇರೆ ವಸ್ತುಗಳ ಮಾರುಕಟ್ಟೆ, ಮಾರಾಟ ಅಂದರೆ ಮಾರ್ಕೆಟಿಂಗ್ ಮಾಡುತ್ತಿದ್ದರು. ಸುಮಾರು 2 ವರ್ಷದ ಮಾರುಕಟ್ಟೆಯ ನೆಪದಲ್ಲಿ ತಮಿಳುನಾಡಿನ ಸೇಲಂಗೆ ತೆರಳಿದ್ದರು. ಅಲ್ಲಿ ತೆಂಗಿನಕಾಯಿ ಮೊಳಕೆ ಬಂದಿರುವ ಹೂವನ್ನು ಬಸ್ ನಿಲ್ದಾಣದ ಬಳಿ ಮಾರಾಟ ಮಾಡುವುದನ್ನು ನೋಡಿದ್ದರು ಸುನಿಲ್ ಕುಮಾರ್. ಅದನ್ನೇ ಬೆಂಗಳೂರಿನಲ್ಲಿ ಉದ್ಯಮವಾಗಿ ಮಾಡಿದರೆ ಹೇಗೆ ಎಂದು ಯೋಚಿಸಿ ಬೆಂಗಳೂರಿಗೆ ಬಂದು ಹುಡುಕಿದಾಗ ಅಂತಹ ಯಾವ ಉದ್ಯಮಗಳೂ ಬೆಂಗಳೂರಿನಲ್ಲಿ ಸಿಗಲಿಲ್ಲ. ತಕ್ಷಣವೇ ಈ ಬಗ್ಗೆ ಅಧ್ಯಯನ ನಡೆಸಿ ಬೆಂಗಳೂರಿನಲ್ಲಿ ತೆಂಗು ಹೂವಿನ ಮಾರುಕಟ್ಟೆಯನ್ನು ಸೃಷ್ಟಿಸುವ ಬಗ್ಗೆ ಯೋಚಿಸಿ ಕೆಲಸಕ್ಕೆ ಇಳಿದರು. ಇದಕ್ಕಾಗಿ ತನ್ನನ್ನೂ ಸೇರಿಸಿಕೊಂಡು ಮೂವರ ಹೆಸರಿನಲ್ಲಿ ಪುಣೆಯಲ್ಲಿ ಕೊಕೋಸ್ಪ್ರೌಟ್ ಫುಡ್ ಪ್ರೈವೆಟ್ ಲಿಮಿಟೆಡ್ ಎಂಬ ಕಂಪನಿಯನ್ನು 2023 ರಲ್ಲಿ ನೋಂದಾಯಿಸಿ ತೆಂಗಿನ ಕಾಯಿ ಹೂವಿನ ಮಾರುಕಟ್ಟೆ ಇಳಿದರು. ಈಗ ಬೆಂಗಳೂರಿನಲ್ಲಿ ಈ ಉದ್ಯಮಕ್ಕೆ ಇಳಿದಿದ್ದಾರೆ ಸುನಿಲ್. ತಾನೇ ಕಂಪನಿಯ ನಿರ್ದೇಶಕನಾಗಿ ಕಾರ್ಯಕ್ರಮಗಳಲ್ಲಿ ಸ್ಟಾಲ್ ಇರಿಸಿ ಕೊಕೊನಟ್ ಆಪಲ್ ಮಾರುತ್ತಿದ್ದಾರೆ. ಬೆಂಗಳೂರಿನ ಹೊರಮಾವು ಪ್ರದೇಶದಲ್ಲಿ ತನ್ನದಾದ ಕೇಂದ್ರವನ್ನು ಹೊಂದಿದ್ದಾರೆ.…..ಮುಂದೆ ಓದಿ….
ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತೆರಳಿ ಅಲ್ಲಿ ಸ್ಟಾಲ್ ಇರಿಸುತ್ತಾರೆ. ಗ್ರಾಹಕರಿಗೆ ಸ್ಥಳದಲ್ಲಿಯೇ ಮೊಳಕೆಯೊಡೆದ ತೆಂಗಿನ ಕಾಯಿಯನ್ನು ಒಡೆದು ಅದರ ಒಳಗಿನ ಹೂವನ್ನು ತೆಗೆದು ಕತ್ತರಿಸಿ ಅದಕ್ಕೆ ಜೇನು, ಮಸಾಲೆಯನ್ನು ಹಾಕಿ ಗ್ರಾಹಕರಿಗೆ ನೀಡುತ್ತಾರೆ. ಒಂದು ಹೂವಿಗೆ 120 ರೂಪಾಯಿ ದರವನ್ನು ನಿಗದಿ ಮಾಡಿದ್ದಾರೆ. ಬಹಳ ಪೌಷ್ಟಿಕಾಂಶವಾಗಿರುವ ಈ ಆಹಾರಕ್ಕೆ ಬೇಡಿಕೆ ಇದೆ. ಸದ್ಯ ನಗರದ ಬಹುತೇಕ ಮಂದಿಗೆ ಇದು ಏನು ಎಂಬುದೇ ಅರಿವಿಲ್ಲ ಎನ್ನುತ್ತಾರೆ ಸುನಿಲ್. ಅನೇಕರಿಗೆ ಇದೊಂದು ಹೊಸದು. ಕೆಲವರು ,”ಈ ಹೂವನ್ನು ಇದರೊಳಗೆ ಹೇಗೆ ಇರಿಸಿದಿರಿ” ಎಂದು ಕೇಳುತ್ತಾರೆ, ಇನ್ನೂ ಕೆಲವರು ಅಚ್ಚರಿಯಿಂದ ಇದೇನು ಎಂದು ನೋಡುತ್ತಾರೆ… ಎನ್ನುತ್ತಾ ಸುನಿಲ್ ಅವರು ತೆಂಗಿನ ಕಾಯಿಯ ಹೂವಿನ ಬೇಡಿಕೆಯ ಬಗ್ಗೆ ಹೇಳುತ್ತಾರೆ. ಸದ್ಯ ಈ ಮೊಳಕೆಯ ತೆಂಗಿನ ಗಿಡವನ್ನು ತಮಿಳುನಾಡಿನಿಂದ ತರಲಾಗುತ್ತಿದೆ. ಅಲ್ಲಿ ತೆಂಗಿನ ಕಾಯಿಯನ್ನು ಮೊಳಕೆ ಬರಿಸಲು ಇರಿಸುತ್ತಾರೆ. ಅದು ಚಿಕ್ಕದಾದ ಮೊಳಕೆ ಬಂದ ಬಳಿಕ ಸುಲಿದು ಕಳುಹಿಸಿಕೊಡುತ್ತಾರೆ. ಬೆಂಗಳೂರು ಸೇರಿದಂತೆ ವಿವಿದೆಡೆ ನಾವು ಮಾರುಕಟ್ಟೆ ಮಾಡುತ್ತೇವೆ ಎನ್ನುತ್ತಾರೆ ಸುನಿಲ್. ಸದ್ಯ ಯಾವುದೇ ಪ್ರತಿಸ್ಫರ್ಧಿ ಇಲ್ಲ, ತಮ್ಮದೇ ಕಂಪನಿ ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತದೆ. ಕಾರ್ಯಕ್ರಮಗಳಿಗೆ ನಾವು ಒಂದೆರಡು ಜನ ಹೋಗುತ್ತೇವೆ. ಸ್ಥಳದಲ್ಲಿಯೇ ಹೂವು ತೆಗೆದು ಮಾರಾಟ ಮಾಡುತ್ತಿದ್ದಾರೆ. ತಾಜಾತನ ಉಳಿಸಿಕೊಳ್ಳಬೇಕಾದ್ದರಿಂದ ಮೊದಲೇ ಒಡೆದು ಹೂವು ತೆಗೆದಿಡಲು ಬರುವುದಿಲ್ಲ.…..ಮುಂದೆ ಓದಿ….
ಕಳೆದ ಸಲ ಲೂಲೂ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ತೆಂಗಿನ ಕಾಯಿಯ ಹೂವಿಗೆ ಬಹಳ ಬೇಡಿಕೆ ಇತ್ತು. ಆ ಮಾಲ್ ವತಿಯಿಂದ ಈ ಮೌಲ್ಯವರ್ಧನೆಗೆ ನಮಗೂ ಗೌರವ ಸಲ್ಲಿಸಿದ್ದರು. ಲಾಲ್ ಬಾಗ್ ಸೇರಿದಂತೆ ವಿವಿಧ ಕಡೆ ಈಗಾಗಲೇ ಮಾರುಕಟ್ಟೆ ಮಾಡಿದ್ದೇವೆ. ಅನೇಕರು ಬೆಳಗ್ಗೆ ವಾಕಿಂಗ್ ಮಾಡುತ್ತಾ ಬಂದು ಕೊನೆಗೆ ಈ ಹೂವನ್ನು ಸವಿದು ತೆರಳುತ್ತಾರೆ ಎನ್ನುತ್ತಾರೆ ಸುನಿಲ್. ರಾಜ್ಯದ ವಿವಿಧ ಕಡೆಗಳಲ್ಲೂ ಈ ಬಗ್ಗೆ ಪ್ರಯತ್ನಿಸಿ ನೋಡಲಾಗಿದೆ. ಕಳೆದ ಬಾರಿ ಮಂಗಳೂರು ಕಡೆಗೂ ಬರಲಾಗಿದೆ. ಆದರೆ ಕರಾವಳಿ ಭಾಗದಲ್ಲಿ ತೆಂಗಿನ ಈ ಹೂವನ್ನು ತಿನ್ನುವ ಅಭ್ಯಾಸ ಬೆಳೆದಿಲ್ಲ, ಬೆಂಗಳೂರು ಸೇರಿದಂತೆ ತಮಿಳುನಾಡು, ಹೈದರಾಬಾದ್ ಮೊದಲಾದ ನಗರಗಳಲ್ಲಿ ಉತ್ತಮವಾದ ಬೇಡಿಕೆ ಇದೆ ಎನ್ನುತ್ತಾರೆ ಸುನಿಲ್.…..ಮುಂದೆ ಓದಿ….
ತೆಂಗಿನ ಹೂವನ್ನು ತೆಗೆದ ಬಳಿಕ ಅದರಲ್ಲಿ ಇರುವ ತೆಂಗಿನ ಕಾಯಿಯನ್ನು ಸಂಗ್ರಹಿಸಿ ಕೋಲ್ಡ್ ಪ್ರೋಸೆಸ್ ಮೂಲಕ ತೆಂಗಿನ ಎಣ್ಣೆ ತೆಗೆಯುತ್ತೇವೆ, ತೆಂಗಿನ ಕಾಯಿಯ ಹೊರಗಿನ ಚಿಪ್ಪಿಯನ್ನು ಉರುವಲಾಗಿ ಬಳಕೆ ಖರೀದಿ ಮಾಡುತ್ತಾರೆ, ಮೊಳಕೆ ಒಡೆದಿರುವ ಗರಿಯನ್ನು ಆಡು ಹಾಗೂ ಹಸುವಿಗೆ ಮೇವಿಗಾಗಿ ಜನರು ಸಂಗ್ರಹಿಸಿ ಕೊಂಡೊಯ್ಯುತ್ತಾರೆ ಎಂದು ಉದ್ಯಮದ ಬಗ್ಗೆ ವಿವರಿಸುತ್ತಾರೆ ಸುನಿಲ್.…..ಮುಂದೆ ಓದಿ….
ಇಷ್ಟೇ ಅಲ್ಲ, ಈ ಹೂವಿನಲ್ಲಿ ಇನ್ನಷ್ಟು ಪ್ರಯೋಗಗಳನ್ನೂ ಮಾಡಿದೆ ಈ ಕಂಪನಿ. ತೆಂಗಿನ ಮೊಳಕೆಯ ಈ ಹೂವಿನಿಂದ ಹಲ್ವಾ , ಲಡ್ಡು, ಹೋಳಿಗೆಯನ್ನೂ ತಯಾರಿಸಲಾಗಿದೆ. ಅದು ಕೂಡಾ ಅತ್ಯುತ್ತಮವಾಗಿದೆ. ಇದೆಲ್ಲಾ ಆನ್ ಲೈನ್ ಮೂಲಕ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತೆಂಗಿನಕಾಯಿ ಮೊಳಕೆಯೊಡೆದ ಬಳಿಕ ಅದರಿಂದ ಎಲ್ಲಾ ವಸ್ತುಗಳೂ ಬಳಕೆಯಾಗುವಂತೆ ಮಾಡಿದೆ ಕೊಕೋಸ್ಪ್ರೌಟ್ ಫುಡ್ ಕಂಪನಿ.…..ಮುಂದೆ ಓದಿ….
ಇದರ ಜೊತೆಗೇ ರಂಬುಟಾನ್, ಮ್ಯಾಂಗೋಸ್ಟಿನ್ ಸೇರಿದಂತೆ ವಿವಿಧ ಹಣ್ಣುಗಳ ಮಾರಾಟ, ಜೇನು ಮಾರಾಟದ ಕಡೆಗೂ ಸುನಿಲ್ ಅವರ ತಂಡ ಹೆಜ್ಜೆ ಇರಿಸಿದೆ. ಬೆಂಗಳೂರಿನಂತಹ ನಗರದಲ್ಲಿ ಇದಕ್ಕೆಲ್ಲಾ ಬೇಡಿಕೆ ಇದೆ. ಈ ಬೇಡಿಕೆಯ ಶೇ.5 ರಷ್ಟು ಕೂಡಾ ನನಗೆ ತಲುಪಲು ಸಾಧ್ಯವಾಗಿಲ್ಲ, ಅವಕಾಶ ದೊಡ್ಡದಿದೆ ಎನ್ನುತ್ತಾರೆ ಸುನಿಲ್. ಮುಂದೆ ಆನ್‌ಲೈನ್ ಮಾರುಕಟ್ಟೆಯಲ್ಲೂ ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ.…..ಮುಂದೆ ಓದಿ….
ಕೃಷಿಕರ ತೋಟದಲ್ಲಿ ತೆಂಗಿನ ಮರದ ಬುಡದಲ್ಲಿ ಬಿದ್ದು ಹುಟ್ಟಿ ಹಾಳಾಗಿ ಹೋಗುತ್ತಿರುವ ತೆಂಗಿನ ಕಾಯಿಗೂ ಮೌಲ್ಯವರ್ಧನೆಯಾಗಿ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಯುವಕ ಸುನಿಲ್ ಅವರು ಮಾದರಿಯಾಗಿದ್ದಾರೆ. ( ಸುನಿಲ್ ಅವರ ಸಂಪರ್ಕ ಸಂಖ್ಯೆ: 8431603729 )
ತೆಂಗಿನ ಹೂವಿನ ಮಹತ್ವ : ಈ ತೆಂಗಿನ ಕಾಯಿಯ ಹೂವು ಅತ್ಯಂತ ಉತ್ತಮವಾದ ಆಹಾರವಾಗಿದೆ. ತೆಂಗಿನಕಾಯಿ ಸೇಬು ಅಥವಾ ಕೊಕೋನಟ್ ಆಪಲ್ ಅಥವಾ ತೆಂಗಿನ ಭ್ರೂಣಗಳು ಎಂದೂ ಕರೆಯಲ್ಪಡುವ ತೆಂಗಿನಕಾಯಿಗಳು ಭಾರತದಲ್ಲಿ “ನಾರಿಯಾಲ್ ಕಾ ಫಾಲ್” ಎಂದು ಜನಪ್ರಿಯವಾಗಿವೆ. ತೆಂಗಿನ ಬೆಳವಣಿಗೆಯ ಮೊದಲ ಹಂತ ಇದಾಗಿದೆ. ತೆಂಗು ಮೊಳಕೆ ಒಡೆಯುವ ಸಂದರ್ಭ , ಕಾಯಿಯ ಒಳಗಿನ ನೀರು ಹಾಗೂ ಇತರ ವಸ್ತುಗಳು ಜೆಲ್ಲಿಯ ರೂಪಕ್ಕೆ ಬಂದು ಹೂವಿನ ಆಕಾರದಲ್ಲಿ ಬೆಳೆಯುತ್ತದೆ. ಇದು ಅತ್ಯಂತ ಪೌಷ್ಟಿಕಾಂಶವಾಗಿರುತ್ತದೆ.
ಇದರಲ್ಲಿ ವಿಟಮಿನ್‌ಗಳು, ಖನಿಜಗಳು, ಅಮೈನೋ ಆಮ್ಲಗಳು ಒಳಗೊಂಡಂತೆ ಅಗತ್ಯವಾದ ಪೋಷಕಾಂಶಗಳು ಸಮೃದ್ಧವಾಗಿದೆ ಎಂದು ಆಯುರ್ವೇದದ ವರದಿಗಳು ಹೇಳುತ್ತದೆ. ಇಷ್ಟೇ ಅಲ್ಲ, ತೆಂಗಿನ ಕಾಯಿಗೆ ದೇಹವನ್ನು ತಂಪಾಗಿಸುವ ಗುಣವೂ ಹೊಂದಿದೆ, ಹೀಗಾಗಿ ದೇಹವನ್ನು ಸ್ಥಿರತೆಯಲ್ಲಿ ಇಡುತ್ತದೆ. ತೆಂಗಿನಕಾಯಿಯಲ್ಲಿ ಇರುವ ನೈಸರ್ಗಿಕ ಸಕ್ಕರೆಗಳು ಶಕ್ತಿಯನ್ನೂ ನೀಡುತ್ತದೆ.ಇದು ಆಯಾಸ ಕಡಿಮೆ ಮಾಡುತ್ತದೆ. ಇದೆಲ್ಲಾ ಕಾರಣಕ್ಕೆ ಇದೊಂದು ಉತ್ತಮ ಆಹಾರವೂ ಆಗಿದೆ.
ಇಷ್ಟೇ ಅಲ್ಲ, ತೆಂಗಿನ ಕಾಯಿಯ ಈ ಹೂವನ್ನು ಸಲಾಡ್ ಮಾದರಿಯಲ್ಲೂ ಆಹಾರದಲ್ಲಿ ಸೇವಿಸಬಹುದಾಗಿದೆ. ತೆಂಗಿನ ಈ ಹೂವನ್ನು ತುಂಡರಿಸಿ ಅದರ ಜೊತೆಗೆ ಸೌತೆಕಾಯಿ ಮತ್ತು ಇತರ ಹಣ್ಣುಗಳೊಂದಿಗೆ ಸೇರಿಸಿಯೂ ತಿನ್ನಬಹುದಾಗಿದೆ.
ಆದರೆ ಯಾವಾಗಲೂ ಈ ಹೂವನ್ನು ತಿನ್ನುವಾಗ ಆದಷ್ಟು ತಾಜಾತನಕ್ಕೆ ಆದ್ಯತೆ ನೀಡಬೇಕಿದೆ. ಹಾಳಾದ ಅಥವಾ ಹಾಳಾಗಲು ಸಿದ್ಧವಾಗಿರುವ ಹೂವನ್ನು ತಿಂದರೆ ಆರೋಗ್ಯವೂ ಹದಗೆಡುವ ಸಾಧ್ಯತೆ ಇದೆ. ಅದಕ್ಕಾಗಿ ಆದಷ್ಟು ಫ್ರೆಶ್ ಆಗಿದ್ದಾಗಲೇ ತಿನ್ನುವುದು ಹೆಚ್ಚು ಉತ್ತಮ ಎಂದು ಆಯುರ್ವೇದದ ವರದಿಗಳು ಎಚ್ಚರಿಸುತ್ತವೆ.
In many instances, coconuts fall and rot in farmers’ gardens. However, they now hold value as well. It is important to understand the art of marketing and adding value to products. In Bangalore, a young man is marketing the flower found inside sprouted coconuts. By establishing a company, he is adding value to coconuts. This serves as an inspiration for others to explore new opportunities and possibilities for adding value to agricultural products.
Sunil Kumar, a young entrepreneur based in Bangalore, established this organization in 2023 with three directors after gaining experience in various jobs. This is also known as “Coconut Apple” or “coconut sprout food” , as coconut blossom is a nutritious food. Sunil Kumar moved to Bangalore about 16 years ago after completing his B.Com studies.
The coconut is cracked open, the flower inside is extracted and sliced, and then mixed with honey and spices before being served to customers. This nutritious dish is in high demand.
The coconut fruit that falls to the ground in the farmer’s garden and becomes spoiled can also be utilized as a value-added product for consumers. Young Sunil serves as a role model in this aspect.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…