ಏಕಕಾಲಕ್ಕೆ ಎರಡು ಕೈಗಳಿಂದ ಬರೆದ ಬಾಲಕಿ | ಸುಳ್ಯದ ಬಾಲಕಿ ಮಾಡಿದ ವರ್ಲ್ಡ್‌ ರೆಕಾರ್ಡ್‌

September 24, 2020
10:43 PM

 ಒಂದು ಕೈಯಲ್ಲಿ ಈಗ ಬರೆಯುವುದೇ ಕಷ್ಟ. ಆದರೆ ಎರಡೂ ಕೈಗಳಲ್ಲಿ  ಏಕಕಾಲಕ್ಕೆ ಒಂದು ನಿಮಿಷಕ್ಕೆ ೪೦ ಶಬ್ದ ಬರೆದು ಉತ್ತರ ಪ್ರದೇಶದ ಲಾಟಾ ಫೌಂಡೇಶನ್‌ನ ಎಕ್ಸ್‌ಕ್ಲೂಸಿವ್ ವರ್ಲ್ಡ್‌ ರೆಕಾರ್ಡ್‌ ಮಾಡಿದ್ದಾಳೆ ಸುಳ್ಯದ ಬಾಲಕಿ ಆದಿ ಸ್ವರೂಪ.

Advertisement
Advertisement

ವಿಜ್ಞಾನದ ಪ್ರಕಾರ ಒಬ್ಬ ಮನುಷ್ಯ ಒಂದು ನಿಮಿಷದಲ್ಲಿ  ಸಾಧಾರಣವಾಗಿ ೨೦ ಶಬ್ದ ಬರೆಯುತ್ತಾನೆ. ಆದರೆ ಸುಳ್ಯದ ಆದಿ ಸ್ವರೂಪ ತನ್ನ ಎರಡು ಕೈಗಳಿಂದ ಏಕಕಾಲಕ್ಕೆ ೫೦ ಶಬ್ದ ಬರೆದಿದ್ದಾಳೆ. ಅದೂ ವಿರುದ್ಧ ದಿಕ್ಕಿನಲ್ಲಿ.  ಮಾತ್ರವಲ್ಲ ಎರಡು ಭಾಷೆಗಳನ್ನೂ ಏಕಕಾಲಕ್ಕೆ ಬರೆದಿದ್ದಾಳೆ. ಒಂದು ಕೈಯಿಂದ ಕನ್ನಡ ಇನ್ನೊಂದು ಕೈಯಿಂದ ಇಂಗ್ಲಿಷ್‌ ಬರೆಯುತ್ತಾಳೆ. ಹೀಗೇ ವಿವಿಧ ರೀತಿಯಲ್ಲಿ  ವಿಶೇಷವಾಗಿ  ಬರೆಯುತ್ತಾಳೆ ಆದಿ ಸ್ವರೂಪ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮೂಲದ ಆದಿ ಸ್ವರೂಪ ಈ ವಿಶೇಷ ಸಾಧನೆಗೆ  ಉತ್ತರ ಪ್ರದೇಶದ ಲಾಟಾ ಫೌಂಡೇಶನ್‌ನ ಎಕ್ಸ್‌ಕ್ಲೂಸಿವ್ ವರ್ಲ್ಡ್‌ ರೆಕಾರ್ಡ್‌ ಮಾಡಿದ್ದಾಳೆ. ಮುಂದೆ ಗಿನ್ನೆಸ್‌ ವಿಶ್ವ ದಾಖಲೆ ಮಾಡಬೇಕೆಂಬ ಬಯಕೆ ಹೊಂದಿರುವ ಆದಿ ನಿರಂತರ ಅಭ್ಯಾಸದಿಂದ ಈಗ ನಿಮಿಷಕ್ಕೆ 50 ಶಬ್ದಗಳನ್ನು ಬರೆಯಬಲ್ಲಳು. ಕಳೆದ ಎರಡು ವರ್ಷಗಳಿಂದ ಈ ರೀತಿಯ ಬರವಣಿಗೆಯನ್ನು ಅಭ್ಯಾಸ ಮಾಡುತ್ತಿರುವ ಈಕೆ ಒಟ್ಟು 10 ವಿಭಿನ್ನ ರೀತಿಯಲ್ಲಿ ಒಂದೇ ಸಮಯದಲ್ಲಿ ಎರಡು ಕೈ ಉಪಯೋಗಿಸಿಕೊಂಡು ಬರೆಯುವುದನ್ನು ಕರಗತ ಮಾಡಿಕೊಂಡಿದ್ದಾಳೆ.

ಕಲಾವಿದ ಹಾಗೂ ಸ್ವರೂಪ ಅಧ್ಯಯನ ಕೇಂದ್ರದ  ಗೋಪಾಡ್ಕರ್‌ ಅವರ ಮಗಳಾದ ಸ್ವರೂಪ ವಿವಿಧ ಸೃಜನಾತ್ಮಕ ಕೆಲಸಗಳಲ್ಲಿ  ತೊಡಗಿಸಿಕೊಂಡಿದ್ದಾಳೆ.  ಬರಹಗಳಲ್ಲಿ ಯುನಿ ಡೈರೆಕ್ಷನ್, ಲೆಫ್ಟ್ ಹ್ಯಾಂಡ್ ಸ್ಪೀಡ್, ರೈಟ್ ಹ್ಯಾಂಡ್ ಸ್ಪೀಡ್, ರಿವರ್ಸ್ ರನ್ನಿಂಗ್, ಮಿರರ್ ಇಮೇಜ್, ಹೆಟೆರೊ ಟಾಪಿಕ್, ಹೆಟೆರೊ ಲಿಂಗ್ವಿಸ್ಟಿಕ್‌, ಎಕ್ಸ್ಚೇಂಜ್, ಡ್ಯಾನ್ಸಿಂಗ್, ಮತ್ತು ಬ್ಲೈಂಡ್ ಫೋಲ್ಡಿಂಗ್ ಹೀಗೇ ಬೇರೇ ಬೇರೆ ರೀತಿಯಲ್ಲಿ  ಬರೆಯುತ್ತಾಳೆ. ಅದರ ಜೊತೆಗೆ ವಿವಿಧ ಕಲೆ, ಸಾಂಸ್ಕೃತಿಕವಾಗಿಯೂ ತೊಡಗಿಸಿಕೊಂಡಿದ್ದಾಳೆ.

Advertisement
 ಒಂದೂವರೆ ವರ್ಷದವಳಿದ್ದಾಗಲೆ ಓದುತ್ತಿದ್ದಳು, ಎರಡೂವರೆ ವರ್ಷಕ್ಕೆ ದಿನಕ್ಕೆ 30 ಪುಟ ಬರೆಯುತ್ತಿದ್ದಳು ಎನ್ನುತ್ತಾರೆ
ಗೋಪಾಡ್ಕರ್‌. 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |
July 24, 2025
10:48 AM
by: ವಿಶೇಷ ಪ್ರತಿನಿಧಿ
ಆಟಿ ಅಂದರೇ ಪರಿಸರ….! ; ತುಳುನಾಡಿನ ವಿಶೇಷ ಆಚರಣೆ
July 24, 2025
6:39 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಲಕ್ ಪತಿ ದೀದಿ ಯೋಜನೆ | ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿ
July 21, 2025
6:52 AM
by: The Rural Mirror ಸುದ್ದಿಜಾಲ
ಜಾಗತಿಕವಾಗಿ ಹವಾಮಾನ ವೈಪರೀತ್ಯ | ಒಂದೆಡೆ ಭಾರೀ ಮಳೆ- ಇನ್ನೊಂದೆಡೆ ಪ್ರವಾಹ – ಮತ್ತೊಂದೆಡೆ ಕಾಡ್ಗಿಚ್ಚು
July 19, 2025
9:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group