Advertisement
ಸುದ್ದಿಗಳು

ಅಡಿಕೆ ಕೌಶಲ್ಯ ಶಿಬಿರ ಸಮಾರೋಪ | ವಿದ್ಯಾವಂತ ಸಮಾಜ‌ ಕೃಷಿಗೆ ಹೆಚ್ಚು ಬಂದಾಗ ವ್ಯಕ್ತಿಗೂ , ವೃತ್ತಿಗೂ , ಹಣಕ್ಕೂ ಹೆಚ್ಚು ಗೌರವ |

Share

ವಿಟ್ಲ :ಯುವಕರು ಕೃಷಿಯತ್ತ ವಾಲುತ್ತಿರುವುದರಿಂದ ಕೃಷಿಗೆ ಅತ್ಯುತ್ತಮ ಭವಿಷ್ಯವಿದೆ. ಕೃಷಿಕಾರ್ಯದಲ್ಲಿ ವಿದ್ಯಾವಂತರು ಭಾಗವಹಿಸಿದಾಗ ಹೊಸ ಅವಿಷ್ಕಾರಗಳ ಜತೆಗೆ ಮನ್ನಣೆ ಸಿಗಲು ಸಾಧ್ಯ. ವಿದ್ಯಾವಂತ ಸಮಾಜ‌ ಕೃಷಿಗೆ ಬಂದಾಗ ವ್ಯಕ್ತಿಗೂ , ವೃತ್ತಿಗೂ , ಹಣಕ್ಕೂ ಹೆಚ್ಚು ಗೌರವ ಬರುತ್ತದೆ ಎಂದು ಮಲೆನಾಡು ಕೃಷಿಕ ಸಮುದಾಯ ಸಂಘಟನೆ ಅಧ್ಯಕ್ಷ ಸತ್ಯನಾರಾಯಣ ಕೂಳೂರು ಹೇಳಿದರು.

Advertisement
Advertisement
Advertisement
ಅವರು ಬುಧವಾರ ವಿಟ್ಲ ಸಿಪಿಸಿಆರ್‌ ಐ ಯಲ್ಲಿ ಕ್ಯಾಂಪ್ಕೋ, ಅಡಿಕೆ ಪತ್ರಿಕೆ ಹಾಗೂ ಸಿಪಿಸಿಆರ್‌ ಐ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಅಡಿಕೆ ಕೌಶಲ್ಯ ಪಡೆ ತರಬೇತಿ 2022 ಕಾರ್ಬನ್ ಫೈಬರ್ ದೋಟಿ ಮೂಲಕ ಕೊಯ್ಲು – ಸಿಂಪಡಣೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಅಡಿಕೆಗೂ ಭವಿಷ್ಯ ಇದೆ. ಆದರೆ ಅಡಿಕೆ ಹಾನಿಕಾರವಲ್ಲ ಎಂಬುದನ್ನು ವೈಜ್ಞಾನಿಕ ವರದಿಯ ಮೂಲಕ ನ್ಯಾಯಾಲಯದಲ್ಲಿ ದೃಢ ಪಡಿಸುವ ಕಾರ್ಯ ನಡೆಯಬೇಕಾಗಿದೆ.  ಅಡಿಕೆಯ ಮೇಲಿನ ಆರೋಪವು ಅಡಿಕೆಗೆ ಸಂಬಂಧಿಸದ ಸಂಸ್ಥೆಯಿಂದ ನಡೆಯುವ ಸಾಧ್ಯತೆ ಇರುತ್ತದೆ. ‌ಹೀಗಾಗಿ ಅಧ್ಯಯನ ನಂತರ ಸುಪ್ರೀಂಕೋರ್ಟ್ ಮೂಲಕ ಈ ಆರೋಪ ಮುಕ್ತ ಆಗಬಹುದು.ಆದರೆ ಅಡಿಕೆ ಬೆಳೆಗಾರರಿಗೆ ಸೂಕ್ತ ರಕ್ಷಣೆ ಅಗತ್ಯವಾಗಿದೆ. ಅದರಲ್ಲಿ  ಕೊಯ್ಲು ಹಾಗೂ ಸಿಂಪಡಣೆಯೂ ಮುಖ್ಯ ಕೆಲಸಕ್ಕಾಗಿ  ತರಬೇತಿ ನಡೆಯುತ್ತಿರುವುದು  ಕೂಡಾ ಉತ್ತಮ ಬೆಳವಣಿಗೆಯಾಗಿದೆ.ಕಾರ್ಬನ್ ದೋಟಿಗಳ ಮೂಲಕ 75ಅಡಿಯಿಂದಲೂ ಅಡಿಕೆ ಕೊಯಿಲು ಮಾಡಬಹುದಾಗಿದೆ. ದೋಟಿಯ ಮೂಲಕ ಔಷಧಿ ಸಿಂಪಡಣೆ ಕಾರ್ಯ ಮಾಡುವುದರಿಂದ ಔಷಧಿ ಉಳಿತಾಯ ಮಾಡಬಹುದಾಗಿದೆ ಎಂದು ತಿಳಿಸಿದರು.
Advertisement

ಶಿಬಿರ ನಿರ್ದೇಶಕ ಕ್ಯಾಂಪ್ಕೋ ಉಪಾಧ್ಯಕ್ಷ ಶಂ. ನಾ. ಖಂಡಿಗೆ ಮಾತನಾಡಿ ಶಿಬಿರಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯವನ್ನು ಸಂಪನ್ಮೂಲ ವ್ಯಕ್ತಿಗಳು ಮಾಡಿದ್ದಾರೆ. ಅಪಘಾತ ವಿಮೆ ಸೇರಿ ವಿವಿಧ ಸವಲತ್ತುಗಳನ್ನು ಕ್ಯಾಂಪ್ಕೋ ವತಿಯಿಂದ ಶಿಬಿರಾರ್ಥಿಗಳಿಗೆ ಮಾಡಲಾಗಿದೆ. 19ಮಂದಿಯನ್ನು ತರಬೇತಿಗೊಳಿಸಿದ್ದು, ಸಹಕಾರಿ ಸಂಘಗಳು ಇದನ್ನು ಮುಂದುವರಿಸಬೇಕು. ದೋಟಿ ಆಂದೋಲನವಾಗಿ ಎಲ್ಲಾ ಕಡೆ ಪಸರಿಸಬೇಕು ಎಂದು ತಿಳಿಸಿದರು.

Advertisement


ಸಂಪನ್ಮೂಲ ವ್ಯಕ್ತಿ ಮೂರೂರು ಕಲ್ಲಬ್ಬೆಯ ಆರ್. ಜಿ. ಹೆಗಡೆ ಮಾತನಾಡಿ ಅಡಿಕೆ ಕೊಯಿಲು ಹಾಗೂ ಸಿಂಪಡಣೆ ಕಾರ್ಯ ಬಹಳಷ್ಟು ಸವಾಲಿನ ಕಾರ್ಯವಾಗಿದೆ. ಪುತ್ತೂರಿನ ಯಂತ್ರ ಮೇಳದಲ್ಲಿ ದೋಟಿಯನ್ನು ನೋಡಿದ್ದು, ಬಳಿಕದ ದಿನದಲ್ಲಿ ಅದನ್ನು ತಂದು ಪ್ರಯೋಗಗಳನ್ನು ಮಾಡಿದ್ದೇವೆ. ಕೃಷಿಕರು ಹಾಗೂ ಕೃಷಿ ಕಾರ್ಮಿಕರ ನಡುವೆ ಅನ್ಯೋನತೆಯಿಂದ ಕೆಲಸ ನಡೆಯಬೇಕು. ದೋಟಿ ಮೂಲಕ ಕೃಷಿಕರ ಕಣ್ಣೀರೊರಸುವ ಕಾರ್ಯವನ್ನು ಮಾಡಲಾಗಿದೆ ಎಂದರು.
Advertisement

ಶಿಬಿರಾರ್ಥಿಗಳಾದ ಐವರ್ನಾಡು ನಿವಾಸಿ ವಚನ್ ಕುಮಾರ್, ಬೆಳ್ಳಾರೆ ನಿವಾಸಿ ಬಾಲಕೃಷ್ಣ, ಮಂಗಳೂರು ನಿವಾಸಿ ಎರೌನ್ ರೋಶನ್ ಡಿಮೆಲ್ಲೊ ಅಭಿಪ್ರಾಯ ಹಂಚಿಕೊಂಡರು. 19ಮಂದಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಲಾಯಿತು.  ಸಿಪಿಸಿಆರ್‌ಐ ವಿಟ್ಲದ ವಿಜ್ಞಾನಿ ಡಾ. ಎಲ್ವಿನ್ ಅಪ್ಸರಾ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಮೂರೂರು ಕಲ್ಲಬ್ಬೆ ಭಾಗದ ರಾಜೇಶ್ ಭಟ್, ರಾಜು ಶೆಟ್ಟಿ, ರಮೇಶ್ ಭಟ್, ಮೈಕೆ ಗಣೇಶ್ ಭಟ್, ಕ್ಯಾಂಪ್ಕೋ ನಿರ್ದೇಶಕರಾದ ಎಸ್. ಆರ್. ಸತೀಶ್ಚಂದ್ರ, ರಾಘವೇಂದ್ರ ಭಟ್ ಕೆದಿಲ, ಡಾ. ಜಯಪ್ರಕಾಶ ತೊಟ್ಟೆತ್ತೋಡಿ, ಮಹೇಶ್ ಚೌಟ, ಸತ್ಯನಾರಾಯಣ ಪ್ರಸಾದ್, ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಉಪಸ್ಥಿತರಿದ್ದರು.

ಫಾರ್ಮರ್‌ ಫಸ್ಟ್‌ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಶಾಸ್ತ್ರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ವಂದಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?

ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…

4 hours ago

ಮೊಗ್ರದಲ್ಲಿ ಕಾಲಾವಧಿ ನೇಮ

https://youtu.be/YgcAfgYUbGQ?si=vp1TmN5dQYAkVPBy

19 hours ago

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

3 days ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

3 days ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

3 days ago