#Aditya-L1 | ಗಣೇಶ ಹಬ್ಬದಂದೇ ಸಿಹಿಸುದ್ದಿ ಕೊಟ್ಟ ಇಸ್ರೋ | ಸೂರ್ಯನ ಕುರಿತು ಡೇಟಾ ಸಂಗ್ರಹಿಸಲು ಆರಂಭಿಸಿದ ಆದಿತ್ಯ L1 |

September 18, 2023
2:50 PM
ಭೂಮಿಯಿಂದ ಹೊರಟ ಆದಿತ್ಯ ಎಲ್‌-1 ನೌಕೆ ಈಗಾಗಲೇ 4ನೇ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದೆ. ಇದೀಗ ನಿಗದಿತ ಕಕ್ಷೆ ಸೇರುವುದಕ್ಕೂ ಮುನ್ನವೇ ವೈಜ್ಞಾನಿಕ ದತ್ತಾಂಶ ಕಳುಹಿಸಲು ಪ್ರಾರಂಭಿಸಿದೆ.

ಚಂದ್ರಯಾನ ನಂತರ ಇಸ್ರೋ ಎರಡನೇ ಸಾಹಸಕ್ಕೆ ಕೈ ಹಾಕಿದ್ದ ಆದಿತ್ಯ ಎಲ್‌ -1 ಯೋಜನೆ ಯಶಸ್ವಿಯಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಈ ಕುರಿತು ಸೂರ್ಯನ ಬ್ಯಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬ್ಯಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ISRO) ಗಣೇಶ ಚತುರ್ಥಿ(GaneshFestival) ಹಬ್ಬದಂದೇ ಶುಭಸುದ್ದಿ ಕೊಟ್ಟಿದೆ. ಭೂಮಿಯಿಂದ ಹೊರಟ ಆದಿತ್ಯ ಎಲ್‌-1 ನೌಕೆ ಈಗಾಗಲೇ 4ನೇ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದೆ.

Advertisement
Advertisement
ಇದೀಗ ನಿಗದಿತ ಕಕ್ಷೆ (L1 ಪಾಯಿಂಟ್‌) ಸೇರುವುದಕ್ಕೂ ಮುನ್ನವೇ ವೈಜ್ಞಾನಿಕ ದತ್ತಾಂಶ (Scientific Data) ಕಳುಹಿಸಲು ಪ್ರಾರಂಭಿಸಿದೆ. ಈ ಕುರಿತು ಇಸ್ರೋ ತನ್ನ ಎಕ್ಸ್‌ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಕಳುಹಿಸಿರುವ ಆದಿತ್ಯ-ಎಲ್‌1 ವೈಜ್ಞಾನಿಕ ದತ್ತಾಂಶಗಳನ್ನ ಸಂಗ್ರಹಿಸಲು ಪ್ರಾರಂಭಿಸಿದೆ. STEPS ಉಪಕರಣದ ಸಂವೇದಕಗಳು (ಸೆನ್ಸಾರ್‌ಗಳು) ಭೂಮಿಯಿಂದ 50,000 ಕಿಮೀಗಿಂತ ಹೆಚ್ಚಿನ ದೂರದಲ್ಲಿ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಅಳೆಯಲು ಪ್ರಾರಂಭಿಸಿದೆ. ಈ ಡೇಟಾವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನ ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಂಕಿ ಅಂಶವು ಒಂದು ಘಟಕದಿಂದ ಸಂಗ್ರಹಿಸಲಾದ ಶಕ್ತಿಯುತ ಕಣ ಪರಿಸರದಲ್ಲಿ ವ್ಯತ್ಯಾಸಗಳನ್ನೂ ತೋರಿಸುತ್ತದೆ ಎಂದು ತಿಳಿಸಿದೆ.

ಚಂದ್ರಯಾನ-3 ಯಶಸ್ಸಿನ ಬಳಿಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಆದಿತ್ಯ-ಎಲ್‌1 ಬಾಹ್ಯಾಕಾಶ ನೌಕೆಯನ್ನು ಸೆ.2 ರಂದು ಉಡಾವಣೆ ಮಾಡಿತ್ತು. ನೌಕೆಯು ಸೆ.10 ರಂದು 3ನೇ ಕಕ್ಷೆ ಹಾಗೂ ಸೆಪ್ಟೆಂಬರ್‌ 14ರಂದು 4ನೇ ಕಕ್ಷೆಗೆ ಸೇರುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತ್ತು.

Advertisement

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :
May 19, 2024
5:57 PM
by: The Rural Mirror ಸುದ್ದಿಜಾಲ
ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?
May 19, 2024
5:28 PM
by: The Rural Mirror ಸುದ್ದಿಜಾಲ
ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?
May 19, 2024
5:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror