ಪಟ್ಟು ಬಿಡದ ರೈತ ಮಹಿಳೆ | ಸತತ ಹೋರಾಟದ ಫಲವಾಗಿ 93,708 ರೂಪಾಯಿ ಬೆಳೆ ವಿಮೆ ಪಡೆದ ದಿಟ್ಟೆ |

February 27, 2024
12:35 PM

ಸರ್ಕಾರದಿಂದ ಅನೇಕ ಯೋಜನೆಗಳು(Govt Schemes) ಜನಸಾಮಾನ್ಯರಿಗೆ, ರೈತರಿಗಾಗಿ(Farmer) ಜಾರಿಯಾಗುತ್ತದೆ. ಆದರೆ ಅದು ಅವರ ಕೈ ತಲುಪಬೇಕಾದರೆ ಅದಕ್ಕೆ ಸಾವಿರಾರು ಬಾರಿ ಅವರು ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ. ಕೆಲವರು ಈ ಅಲೆದಾಟದ ಕಿರಿಕಿರಿಗೆ ಯೋಜನೆಗಳೇ ಬೇಡ ಎಂದು ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ. ಅಲ್ಲೋ ಇಲ್ಲೋ ಮಾತನಾಡುತ್ತಾ ಸುಮ್ಮನಿರುತ್ತಾರೆ, ಒಂದಷ್ಟು ಜನ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಳ್ಳುತ್ತಾರೆ. ಆದರೆ ಕೊಪ್ಪಳ ಜಿಲ್ಲೆಯ(Koppal) ರೈತ ಮಹಿಳೆಯೊಬ್ಬರು( Farmer Woman) ಪಟ್ಟು ಬಿಡದೆ ಅಧಿಕಾರಿಗಳಿಗೆ ಪತ್ರ ಮೇಲೆ ಪತ್ರ ಬರೆದು ತಮಗೆ ಬರಬೇಕಾದ ಬೆಳೆವಿಮೆಯನ್ನು (Crop Insurance) ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement
Advertisement

ಕೊಪ್ಪಳ ಜಿಲ್ಲೆಯಲ್ಲಿ 2018 ರಲ್ಲಿ ಬರ ಆವರಿಸಿತ್ತು. ರಾಜ್ಯ ಸರಕಾರವು ಸಹ ಆ ವರ್ಷ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿತ್ತು. ಈ ಸಂದರ್ಭದಲ್ಲಿ ತಮ್ಮ ಬೆಳೆಗೆ ಮಾಡಿಸಿರುವ ಬೆಳೆ ವಿಮೆಯನ್ನು ಯುನಿಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯು ಪಾವತಿಸಿರಲಿಲ್ಲ. ಇದಕ್ಕೆ ಕಾರಣ ಕುಷ್ಟಗಿ ತಾಲೂಕಿನ ಕೃಷಿ ಇಲಾಖೆಯ ಅಧಿಕಾರಿಗಳ ತಪ್ಪಿನಿಂದಾಗಿ ರೈತ ಮಹಿಳೆಗೆ ಬೆಳೆ ವಿಮೆ ಜಮಾ ಆಗಿರಲಿಲ್ಲ.

Advertisement

ಕಂತು ಪಾವತಿಸಿದ್ದರೂ ವಿಮೆ ತಿರಸ್ಕೃತ : ಕುಷ್ಟಗಿ ತಾಲೂಕಿನ ಬೊಮ್ಮನಾಳದ ಯಲ್ಲಮ್ಮ ಪಡಚಿಂತಿ ಎಂಬುವವರು 2018 ರಲ್ಲಿ ತಮ್ಮ 5.02 ಎಕರೆ ಭೂಮಿಯಲ್ಲಿ ಮೆಕ್ಕೆಜೋಳವನ್ನು ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಮೆಕ್ಕೆಜೋಳಕ್ಕೆ ಬೆಳೆ ವಿಮೆ ಮಾಡಿಸಿ ತಮ್ಮ ಕಂತು ಪಾವತಿಸಿದ್ದರು. ಆದರೆ ಈ ಬೆಳೆಯು ಮಳೆ ಇಲ್ಲದೆ ಒಣಗಿದ್ದರಿಂದ ಅನಿವಾರ್ಯವಾಗಿ ಮೆಕ್ಕೆಜೋಳ ಕಟಾವು ಮಾಡಿ ಇದೇ ಭೂಮಿಯಲ್ಲಿ ಶೇಂಗಾ ಬಿತ್ತನೆ ಮಾಡಿದ್ದರು. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಮೆಕ್ಕೆಜೋಳದ ಬೆಳೆಗೆ ವಿಮೆ ಹಣ ಬರುತ್ತದೆ ಎಂದುಕೊಂಡಿದ್ದರು. ಆದರೆ ಆ ವರ್ಷ ಅವರಿಗೆ ಬೆಳೆ ವಿಮೆಯನ್ನು ತಿರಸ್ಕೃತಗೊಳಿಸಿದ್ದರು.

ಅಧಿಕಾರಿಗಳ ಬೆನ್ನು ಬಿದ್ದಿದ್ದ ಯಲ್ಲಮ್ಮ : ಬೆಳೆ ವಿಮೆ ಮಾಡಿಸಿ ಬೆಳೆ ಹಾಳಾಗಿದ್ದರೂ ಯಾಕೆ ವಿಮೆ ಬಂದಿಲ್ಲ ಎಂದು ವಿಚಾರಿಸಿದಾಗ ಅಂದು ಕುಷ್ಟಗಿ ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ದರ್ಶಕ ಆ್ಯಪ್‌ನಲ್ಲಿ ಈ ಭೂಮಿಯಲ್ಲಿ ವಿಮೆ ಮಾಡಿಸಿದ ಬೆಳೆ ಇಲ್ಲ ಎಂಬ ವರದಿ ನೀಡಿದ್ದರಿಂದ ಬೆಳೆ ವಿಮೆ ತಿರಸ್ಕೃತಗೊಂಡಿತ್ತು. ತಿರಸ್ಕೃತಗೊಂಡಿದೆ ಎಂದು ಸುಮ್ಮನೆ ಕುಳಿತುಕೊಳ್ಳದೆ ಯಲ್ಲಮ್ಮ ಈ ಕುರಿತು ಕುಷ್ಟಗಿ ಕೃಷಿ ಇಲಾಖೆ ಕೊಪ್ಪಳದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಪತ್ರ ಬರೆದರು. ಆದರೂ ಅವರಿಂದ ಸರಿಯಾದ ಉತ್ತರ ಬಾರದ ಹಿನ್ನೆಲೆಯಲ್ಲಿ ಅವರು ಬೆಳೆ ಯೋಜನಾ ಸಮಿಕ್ಷಾ ಘಟಕಕ್ಕೆ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳಿದರು.

ಕೊನೆಗೂ ಸಿಕ್ಕ ಜಯ: ಮಾಹಿತಿ ಹಕ್ಕಿನಲ್ಲಿ ಬೆಳೆ ಸಮಿಕ್ಷೆ ಯೋಜನಾ ಘಟಕಕ್ಕೆ 2023 ಅಕ್ಟೋಬರ್ 27 ಹಾಗೂ ನವೆಂಬರ್ 28 ರಂದು ಮಾಹಿತಿ ಕೇಳಿ ತಮಗೆ ಬೆಳೆ ವಿಮೆಗಾಗಿ ಮನವಿ ಮಾಡಿಕೊಂಡಿದ್ದರು. ಈ ಕುರಿತು ಬೆಳೆ ಸಮಿಕ್ಷಾ ಯೋಜನಾ ಘಟಕವು ಈ ಪ್ರಕರಣದಲ್ಲಿ ಯಲ್ಲಮ್ಮ ಬೆಳೆ ಹಾಳಾಗಿದೆ. ಇಲ್ಲಿ ಇಲಾಖೆಯವರು ತಪ್ಪು ಮಾಡಿದ್ದಾರೆ. ಹೀಗಾಗಿ ಅವರಿಗೆ ಬೆಳೆ ವಿಮೆ ಹಣ ನೀಡಬೇಕೆಂದು ಸೂಚಿಸಿದ್ದಾರೆ.

Advertisement

93,708 ರೂಪಾಯಿ ವಿಮಾ ಹಣ ಜಮಾ : ಇಲಾಖೆಯ ಸೂಚನೆಯ ಹಿನ್ನೆಲೆಯಲ್ಲಿ 2018 ರ ಮೆಕ್ಕೆಜೋಳ ಬೆಳೆಗೆ ಒಟ್ಟು 93,708 ರೂಪಾಯಿ ವಿಮಾ ಹಣ ಜಮಾ ಆಗಿದೆ. ಇದರಿಂದಾಗಿ ರೈತ ಮಹಿಳೆ ನಿರಂತರ ಪ್ರಯತ್ನದಿಂದ ತಮಗೆ ಬರಬೇಕಾದ ವಿಮಾ ಹಣ ಪಡೆದಿದ್ದಾರೆ. ಇದಕ್ಕೆ ಇತರ ರೈತರು ತಾಳ್ಮೆ ಹಾಗೂ ನಿರಂತರ ಪ್ರಯತ್ನ ಪಟ್ಟರೆ ತಮಗೆ ನ್ಯಾಯ ದೊರಕಿಸಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

– ಅಂತರ್ಜಾಲ ಮಾಹಿತಿ

Advertisement

A farmer woman of Koppal district has succeeded in getting the Crop Insurance due to her by writing letter after letter to the authorities without giving up. Koppal district was hit by drought in 2018. In this case, the crop insurance for their crop was not paid by the United India Insurance Company. The reason for this is due to the mistake of the agriculture department officials of Kushtagi taluk, the crop insurance was not deposited for the farmer woman.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather |12-05-2024 | ಹಲವು ಕಡೆ ಮಳೆಯ ನಿರೀಕ್ಷೆ ಇದೆ |
May 12, 2024
11:56 AM
by: ಸಾಯಿಶೇಖರ್ ಕರಿಕಳ
ಕರ್ನಾಟಕದಾದ್ಯಂತ ಗೋಕೃಪಾಮೃತ ವಿತರಣೆ : ಗೋಕೃಪಾಮೃತ ಇರುವಾಗ ಮಾರುಕಟ್ಟೆಯಲ್ಲಿನ ದುಬಾರಿ ಕೃಷಿ ಗೊಬ್ಬರ & ಕ್ರಿಮಿನಾಶಕಗಳ ಹಂಗೇಕೆ?
May 12, 2024
11:53 AM
by: The Rural Mirror ಸುದ್ದಿಜಾಲ
ಪುತ್ತೂರಿನಲ್ಲಿ ಹಲಸು ಹಣ್ಣು ಮೇಳದ ಏಳನೇ ಆವೃತ್ತಿ : ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ
May 12, 2024
11:34 AM
by: The Rural Mirror ಸುದ್ದಿಜಾಲ
ರಾಜ್ಯದ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆ : ರೈತರ ಮೊಗದಲ್ಲಿ ಸಂತಸ : ಕೆಲವೆಡೆ ಹಾನಿ
May 12, 2024
11:10 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror