ಅಡಿಕೆ ಹಾನಿಕಾರಕವಲ್ಲ – ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಕೆ | ಅರಗ ಜ್ಞಾನೇಂದ್ರ |

Advertisement
Advertisement

ಅಡಿಕೆ ಹಾನಿಕಾರಕವಲ್ಲ, ಅಡಿಕೆಯಲ್ಲಿ ಹಲವು ಉತ್ತಮ ಆರೋಗ್ಯಕರ ಅಂಶವಿದ್ದು, ಈ ಬಗ್ಗೆ ಸಂಶೋಧನಾ ವರದಿಗಳು ಹೊರಬರುತ್ತಿದೆ. ಹೀಗಾಗಿ ಹಲವು ಸಂಶೋಧನೆಗಳನ್ನು ಇರಿಸಿ ಸುಪ್ರಿಂ ಕೋರ್ಟ್ ಗೆ ಅಡಿಕೆ ಹಾನಿಕಾರಕವಲ್ಲ ಎಂದು ಅಫಿಡವಿಟ್ ಸಲ್ಲಿಸಲಿದ್ದೇವೆ ಎಂದು ಗೃಹ ಸಚಿವ, ಅಡಿಕೆ ಟಾಸ್ಕ್‌ಫೋರ್ಸ್‌ ಸಮಿತಿ ಅಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿದರು.

Advertisement

ಶಿರಸಿಯಲ್ಲಿ ರಾಘವೇಂದ್ರ ಮಠದಲ್ಲಿ ಪರಿವಾರ ಸಹಕಾರಿ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ ಅಡಿಕೆಯಲ್ಲಿ ಹಲವು ಉತ್ತಮ ಅಂಶಗಳು ಇವೆ. ಆದರೆ ಇಂಡೋನೇಶಿಯಾ ಸೇರಿದಂತೆ ವಿದೇಶಿ ಅಡಿಕೆ  ಕಳಪೆ ಗುಣಮಟ್ಟದ್ದು ಎಂದು ಕಂಡು ಹಿಡಿದಿದ್ದು ಇದನ್ನು ಸುಪ್ರಿಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದೇವೆ ಎಂದರು.ಹೊರ ದೇಶದ ಅಡಿಕೆ ಆಮದು ಸಂಬಂಧಿಸಿದಂತೆ ಈಗಾಗಲೇ ಕೆಲವು ದೇಶಗಳೊಂದಿಗೆ ಒಪ್ಪಂದ ಇರುವುದರಿಂದ ಬರುತ್ತಿದೆ. ಆದರೆ ಗುಣಮಟ್ಟ ಪರೀಕ್ಷೆ ನಡೆಸಿ ಅದನ್ನು ತಿರಸ್ಕರಿಸುವ ಮೂಲಕ ಅಡಿಕೆ ಬೆಳೆಗಾರರ ರಕ್ಷಣೆ ಮಾಡುತ್ತೇವೆ ಎಂದು ಹೇಳಿದರು.

Advertisement
Advertisement

 

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಅಡಿಕೆ ಹಾನಿಕಾರಕವಲ್ಲ – ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಕೆ | ಅರಗ ಜ್ಞಾನೇಂದ್ರ |"

Leave a comment

Your email address will not be published.


*