ಇರಾನ್ ಗಡಿಯ ಸಮೀಪ ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 2000 ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶನಿವಾರ 6.3 ತೀವ್ರತೆಯ ಭೂಕಂಪವು ಹೆರಾತ್ ನಗರದ ಸಮೀಪವಿರುವ ಕನಿಷ್ಠ 12 ಹಳ್ಳಿಗಳನ್ನು ನಾಶಗೊಳಿಸಿದೆ.
ಅಪ್ಘಾನಿಸ್ತಾನದ ಗ್ರಾಮೀಣ ಪ್ರದೇಶಗಳಿಂದ ಮಾಧ್ಯಮಗಳಿಗೆ ಬಂದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ, ತಾಲಿಬಾನ್ ಸರ್ಕಾರಿ ಇಲಾಖೆಯು 2,000 ಕ್ಕಿಂತ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ತಿಳಿಸಿದೆ.ಕನಿಷ್ಠ 465 ಮನೆಗಳನ್ನು ನೆಲಸಮವಾಗಿವೆ.
ಶನಿವಾರ ಸಂಭವಿಸಿದ ಪ್ರಬಲವಾದ ನಂತರದ ಸುತ್ತಲೂ ಕಟ್ಟಡಗಳು ಕುಸಿದು ಬಿದ್ದಿವೆ ಎಂದು ಬದುಕುಳಿದವರು ತಮ್ಮ ಭಯವನ್ನು ವಿವರಿಸಿದರು. ಘಟನೆಯಿಂದ ಸಾವಿರಾರು ಜನರು ಗಾಯಗೊಂಡಿದ್ದಾರೆ. ಅಸಮರ್ಪಕ ವೈದ್ಯಕೀಯ ಸೌಲಭ್ಯಗಳಿರುವ ದೇಶದಲ್ಲಿ, ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಹೆಣಗಾಡುತ್ತಿವೆ.
ಗ್ರಾಮೀಣ ಭಾಗದಲ್ಲಿನ ಹಳ್ಳಿಗಳಲ್ಲಿ ಇರುವ ಮಣ್ಣಿನ ಮನೆಗಳು ಕುಸಿದವು. “ಮೊದಲ ಅಲುಗಾಡುವಿಕೆಯಲ್ಲಿ ಎಲ್ಲಾ ಮನೆಗಳು ಕುಸಿದವು” ಎಂದು ಹೆರಾತ್ ನಿವಾಸಿ ಬಶೀರ್ ಅಹ್ಮದ್ ಅವರ ಕುಟುಂಬವು AFP ಸುದ್ದಿ ಸಂಸ್ಥೆಗೆ ತಿಳಿಸಿದೆ.
ಹೆರಾತ್ ಇರಾನಿನ ಗಡಿಯ ಪೂರ್ವಕ್ಕೆ 75 ಮೈಲು ದೂರದಲ್ಲಿದೆ. ಇದನ್ನು ಅಫ್ಘಾನಿಸ್ತಾನದ ಸಾಂಸ್ಕೃತಿಕ ರಾಜಧಾನಿ ಎಂದು ಪರಿಗಣಿಸಲಾಗಿದೆ. ಅಂದಾಜು 1.9 ಮಿಲಿಯನ್ ಜನರು ಈ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆಂದು ನಂಬಲಾಗಿದೆ.
ಕಳೆದ ವರ್ಷ ಜೂನ್‌ನಲ್ಲಿ, ಪಕ್ಟಿಕಾ ಪ್ರಾಂತ್ಯವು 5.9 ತೀವ್ರತೆಯ ಭೂಕಂಪದಿಂದ 1,000 ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.ಅನೇಕರು ನಿರಾಶ್ರಿತರಾಗಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…