ತರಕಾರಿ ಬೆಲೆ ಏರಿಗೆ ಅನ್ನೋದು ಹಾವು ಏಣಿ ಆಟ ಇದ್ದಂತೆ. ಇಷ್ಟು ದಿನ ಟೊಮೆಟೋ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ರೆ, ಅದು ಕೊಂಚ ಇಳಿಕೆ ಹಾದಿ ಹಿಡಿದಿದೆ. ಈಗ ಈರುಳ್ಳಿ, ಬೆಳ್ಳುಳ್ಳಿಯ ಸರದಿ. ಇನ್ನೇನು ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ಈ ಸಂಧರ್ಭದಲ್ಲಿ ಈ ರೀತಿ ಬೆಲೆ ಏರಿದರೆ ಹೇಗೆ ಎಂದು ಗೃಹಣಿಯರು ಬೇಸರಿಸಿಕೊಂಡಿದ್ದಾರೆ. ಮುಂದಿನ ದಿನದಲ್ಲಿ ಈರುಳ್ಳಿ ಕೆಜಿಗೆ 50 ರಿಂದ 60 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆಯಂತೆ.
ಟೊಮ್ಯಾಟೋ ತಲೆನೋವು ಇನ್ನೂ ತಣ್ಣಗಾಗಿಲ್ಲ.. ಟೊಮೆಟೋ ಬೆಲೆ ಪೂರ್ತಿಯಾಗಿ ಇಳಿದಿಲ್ಲ.. ಆಗಲೇ ಮತ್ತೆರಡು ತರಕಾರಿಗಳು ಜನರ ಜೇಬಿಗೆ ಕತ್ತರಿ ಹಾಕೋಕೆ ರೆಡಿ ಆಗಿವೆ. ದುಬಾರಿ ದುನಿಯಾದ ಬಿರುಗಾಳಿಗೆ ಬೆಂಗಳೂರಿಗರು ಮತ್ತೊಮ್ಮೆ ಸಿಲುಕುವ ಎಲ್ಲಾ ಲಕ್ಷಣಗಳು ಕಾಣ್ತಿವೆ. ಅದರ ಎಫೆಕ್ಟ್ ಉಳಿದ ಜಿಲ್ಲೆ, ತಾಲೂಕುಗಳಿಗೂ ತಟ್ಟುತ್ತದೆ. ಮಳೆ ಎಫೆಕ್ಟ್ನಿಂದಾಗಿ ಕಳೆದ ಮೂರು ತಿಂಗಳಿನಿಂದ ಟೊಮ್ಯಾಟೋ ಸೆಂಚುರಿ, ಡಬಲ್ ಸೆಂಚುರಿ ಬಾರಿಸಿದ್ದು ಉಂಟು. ಆದ್ರೀಗ ಟೊಮೆಟೋ ಬೆಲೆ ದಿನ ದಿನಕ್ಕೂ ಇಳಿಕೆಯಾಗ್ತಿದೆ. ಜನರು ಕೊಂಚ ನಿಟ್ಟುಸಿರು ಬಿಡ್ತಿದ್ದಾರೆ.
ಹೀಗಿರುವಾಗ ಮಾರ್ಕೆಟ್ನಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಲೆ ದುಬಾರಿಯಾಗ್ತಿದೆ.. ಬೆಂಗಳೂರಿನ ಕೆ.ಆರ್ ಮಾರ್ಕೆಟ್ನಲ್ಲಿ ವಾರದ ಹಿಂದೆ 25 ರೂ. ಇದ್ದ ಕೆಜಿ ಈರುಳ್ಳಿ, ಈಗ 30 ರಿಂದ 40 ರೂ. ಆಗಿದೆ. ಇನ್ನು 80 ರಿಂದ 100 ರೂಪಾಯಿ ಇದ್ದ ಬೆಳ್ಳುಳ್ಳಿ, 200 ರೂ.ಗೆ ಏರಿಕೆಯಾಗಿದ್ದು, ಶ್ರಾವಣ ಮಾಸದ ಆರಂಭದಲ್ಲಿ ಗ್ರಾಹಕರನ್ನ ಕಂಗಾಲಾಗಿಸಿದೆ. ಬೆಲೆ ಏರಿಕೆಗೆ ಬೇಸರ ವ್ಯಕ್ತಪಡಿಸಿದ ಮಹಿಳೆಯರು, ತರಕಾರಿ ಬೆಲೆಗಳು ಕಡಿಮೆ ಇದ್ರೆ ಜನರಿಗೆ ಅನುಕೂಲ.. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಲಿ ಅಂತ ಮನವಿ ಮಾಡ್ತಿದ್ದಾರೆ.
ಇನ್ನು ಮುಂಗಾರು ಕೈಕೊಟ್ಟಿದ್ರಿಂದ ಚಿತ್ರದುರ್ಗ, ದಾವಣಗೆರೆ ಸೇರಿ ಇತರೆ ಕಡೆಯಿಂದ ಈರುಳ್ಳಿ ಲಭ್ಯವಾಗುತ್ತಿಲ್ಲ. ಸದ್ಯ ರಾಜ್ಯದಲ್ಲಿ ಸುಮಾರು 4,000 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆ ಕೊರತೆ ಇದೆ. ಮಳೆ ವಿಳಂಬ ಆಗಿರೋದ್ರಿಂದ ಈರುಳ್ಳಿ ಕೊಯ್ಲು 6 ರಿಂದ 8 ವಾರಗಳ ಕಾಲ ವಿಳಂಬ ಆಗ್ತಿದೆ. ಮಹಾರಾಷ್ಟ್ರದ ನಾಸಿಕ್ನಲ್ಲಿಯೂ ಇದೇ ಸಮಸ್ಯೆ ಇದೆ.. ಹೀಗಾಗಿ ಈರುಳ್ಳಿ ಕೊರತೆಯಿದ್ದು, ಈರುಳ್ಳಿಗೆ ದಿನ ದಿನಕ್ಕೂ ಡಿಮ್ಯಾಂಡ್ ಹೆಚ್ಚಾಗ್ತಿದೆ. ಮುಂದಿನ ದಿನದಲ್ಲಿ ಈರುಳ್ಳಿ ಕೆಜಿಗೆ 50 ರಿಂದ 60 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದ್ಯಂತೆ. ದುಬಾರಿ ದುನಿಯಾದ ಸಂಕೋಲೆಯಲ್ಲಿ ಸಿಲುಕಿರುವ ಸಿಲಿಕಾನ್ ಸಿಟಿ ಜನರಿಗೆ ದರ ಹೊರೆ, ಬರೆ ಎಳೆಯುತ್ತಿರೋದಂತೂ ಸುಳ್ಳಲ್ಲ.
(Source : Agencies )
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…