ಕೃಷಿ ಬೆಲೆ ಕುಸಿತವಾದರೆ ಏನು ಮಾಡಬಹುದು..? ಕೃಷಿಗೆ ಯುವಕರು ಬರುವುದು ಹೇಗೆ..? ಕೃಷಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಹೇಗೆ..? ಇನ್ನೂ ಹತ್ತಾರು ಪ್ರಶ್ನೆಗಳು… ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹೇಗೆ? ಸಾಮೂಹಿಕ ಚಿಂತನೆ ಹೇಗೆ..? ಇದೆಲ್ಲಾ ಮಾತುಕತೆ ನಡೆಸುವುದು ಹಾಗೂ ಕೃಷಿ ಹಬ್ಬವು ಜ.7 ರಂದು ಅಡ್ಯನಡ್ಕ ಬಳಿಯ ಸಾರಡ್ಕದಲ್ಲಿ ನಡೆಯಲಿದೆ.
ಸಾರಡ್ಕದ ಆರಾಧನಾ ಕಲಾಭವನ ಸಾರಥ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹಲವು ಗೋಷ್ಟಿಗಳು, ಸಂವಾದಗಳು ನಡೆಯಲಿದೆ. ಕಾರ್ಯಕ್ರಮವನ್ನು ಕೇಪು ಪಂಚಾಯತ್ ಅಧ್ಯಕ್ಷರಾದ ರಾಘವ ಸಾರಡ್ಕ ನೆರವೇರಿಸಲಿರುವರು ಅಧ್ಯಕ್ಷತೆಯನ್ನು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ವಹಿಸುವರು. ಅತಿಥಿಗಳಾಗಿ ಅಖಿಲ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ ಕಿನಿಲ, ಅಡ್ಯನಡ್ಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಮೊದಲಾದವರು ಭಾಗವಹಿಸುವರು ಎಂದು ಕೃಷಿ ಹಬ್ಬ ಆಯೋಜನಕ ಶಂಕರ್ ಸಾರಡ್ಕ ತಿಳಿಸಿದ್ದಾರೆ.
ಸಭಾಕಾರ್ಯಕ್ರಮದ ಬಳಿಕ ಸಂವಾದ ಕಾರ್ಯಕ್ರಮ ನಡೆಯಲಿದೆ. ಕೃಷಿಯಲ್ಲಿ ಸಾಧನೆಗೈದ ಸಾಧಕರ ಜೊತೆ ಸಂವಾದ ನಡೆಯಲಿದೆ. ಮಧ್ಯಾಹ್ನದ ಬಳಿಕ ಕೃಷಿಕರು ತಯಾರಿಸಿದ ಯಂತ್ರಗಳು ಹಾಗೂ ಅವುಗಳ ಅಭಿವೃದ್ಧಿ , ಕೃಷಿ ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ಸಂವಾದ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಮಳಿಗೆಗಳು ಇರಲಿದೆ ಎಂದು ಶಂಕರ ಸಾರಡ್ಕ ತಿಳಿಸಿದ್ದಾರೆ.
ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…
ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…
ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…
ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…
ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…
ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…