ಜ.7 ಸಾರಡ್ಕದಲ್ಲಿ ಕೃಷಿ ಹಬ್ಬ | ಕೃಷಿ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಚಿಂತನೆ | ಸಂವಾದ-ಗೋಷ್ಠಿ |

January 6, 2024
10:27 AM
ಕೃಷಿ ಹಬ್ಬವು  ಜ.7 ರಂದು ಅಡ್ಯನಡ್ಕ ಬಳಿಯ ಸಾರಡ್ಕದಲ್ಲಿ ನಡೆಯಲಿದೆ. 

 ಕೃಷಿ ಬೆಲೆ ಕುಸಿತವಾದರೆ ಏನು ಮಾಡಬಹುದು..? ಕೃಷಿಗೆ ಯುವಕರು ಬರುವುದು ಹೇಗೆ..? ಕೃಷಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಹೇಗೆ..? ಇನ್ನೂ ಹತ್ತಾರು ಪ್ರಶ್ನೆಗಳು… ಈ ಎಲ್ಲಾ ಪ್ರಶ್ನೆಗಳಿಗೆ  ಉತ್ತರ ಹೇಗೆ? ಸಾಮೂಹಿಕ ಚಿಂತನೆ ಹೇಗೆ..? ಇದೆಲ್ಲಾ ಮಾತುಕತೆ ನಡೆಸುವುದು ಹಾಗೂ ಕೃಷಿ ಹಬ್ಬವು  ಜ.7 ರಂದು ಅಡ್ಯನಡ್ಕ ಬಳಿಯ ಸಾರಡ್ಕದಲ್ಲಿ ನಡೆಯಲಿದೆ. 

ಸಾರಡ್ಕದ ಆರಾಧನಾ ಕಲಾಭವನ ಸಾರಥ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹಲವು ಗೋಷ್ಟಿಗಳು, ಸಂವಾದಗಳು ನಡೆಯಲಿದೆ. ಕಾರ್ಯಕ್ರಮವನ್ನು ಕೇಪು  ಪಂಚಾಯತ್ ಅಧ್ಯಕ್ಷರಾದ ರಾಘವ ಸಾರಡ್ಕ ನೆರವೇರಿಸಲಿರುವರು ಅಧ್ಯಕ್ಷತೆಯನ್ನು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ವಹಿಸುವರು. ಅತಿಥಿಗಳಾಗಿ ಅಖಿಲ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ ಕಿನಿಲ, ಅಡ್ಯನಡ್ಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗೋವಿಂದ ಪ್ರಕಾಶ್‌ ಸಾಯ ಮೊದಲಾದವರು ಭಾಗವಹಿಸುವರು ಎಂದು ಕೃಷಿ ಹಬ್ಬ ಆಯೋಜನಕ ಶಂಕರ್‌ ಸಾರಡ್ಕ ತಿಳಿಸಿದ್ದಾರೆ.

ಸಭಾಕಾರ್ಯಕ್ರಮದ ಬಳಿಕ ಸಂವಾದ ಕಾರ್ಯಕ್ರಮ ನಡೆಯಲಿದೆ. ಕೃಷಿಯಲ್ಲಿ ಸಾಧನೆಗೈದ ಸಾಧಕರ ಜೊತೆ ಸಂವಾದ ನಡೆಯಲಿದೆ. ಮಧ್ಯಾಹ್ನದ ಬಳಿಕ ಕೃಷಿಕರು ತಯಾರಿಸಿದ ಯಂತ್ರಗಳು ಹಾಗೂ ಅವುಗಳ ಅಭಿವೃದ್ಧಿ , ಕೃಷಿ ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ಸಂವಾದ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಮಳಿಗೆಗಳು ಇರಲಿದೆ ಎಂದು ಶಂಕರ ಸಾರಡ್ಕ ತಿಳಿಸಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ
ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ
August 25, 2026
10:30 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror