ಭಾರತದಲ್ಲಿ ಕೃಷಿ ಡಿಜಿಟಲೀಕರಣ | ಕೃಷಿಯಲ್ಲಿ ಹಸಿರು ಕ್ರಾಂತಿಯ ನಂತರ ಈಗ ಡಿಜಿಟಲ್‌ ಕ್ರಾಂತಿ |

October 28, 2022
10:26 AM

ಒಂದೇ ಕ್ಷಣದಲ್ಲಿ  ಸಾವಿರಾರು ರೈತರ ಖಾತೆಗೆ ಸರ್ಕಾರದ ಸಹಾಯಧನ ಬಂದು ಬಿದ್ದಿತು. ಕ್ಷಣ ಮಾತ್ರದಲ್ಲಿ ಕೃಷಿಯ ಸಮಸ್ಯೆಗಳು ವಿಜ್ಞಾನಿಗಳ ಮುಂದೆ ವಿಡಿಯೋ, ಚಿತ್ರ ಸಹಿತ ಬಂದು ನಿಂತು ಪರಿಹಾರವೂ ರವಾನೆಯಾಯಿತು. ಹಸಿರು ಕ್ರಾಂತಿಯಿಂದ ಬದಲಾದ ಭಾರತವು ಈಗ ಕೃಷಿ ಡಿಜಿಟಲೀಕರಣದಿಂದ ಮತ್ತೆ ಕ್ರಾಂತಿಯಾಗುತ್ತಲಿದೆ. ಗ್ರಾಮೀಣ ಭಾರತವೂ ಇದಕ್ಕೆ ತೆರೆದುಕೊಳ್ಳಬೇಕು. ಹಳ್ಳಿಗಳೂ ಡಿಜಿಟಲ್‌ ಕನಸನ್ನು ನನಸು ಮಾಡಲೇಬೇಕು.

Advertisement
Advertisement
Advertisement

ಭಾರತದಲ್ಲಿ ಮೊದಲ ಕೃಷಿ ಕ್ರಾಂತಿಯು 1960 ರ ದಶಕದಲ್ಲಿ ಹಸಿರು ಕ್ರಾಂತಿಯ ರೂಪದಲ್ಲಿ ಬಂದಿತು. ಎರಡನೇ ಕ್ರಾಂತಿಯು 1990 ರ ದಶಕದಲ್ಲಿ ಜೈವಿಕ ತಂತ್ರಜ್ಞಾನ ಕ್ರಾಂತಿಯ ರೂಪದಲ್ಲಿ ಬಂದಿತು, ಇದು ಅಂಗಾಂಶ ಕೃಷಿ ತಂತ್ರಗಳು ಇತ್ಯಾದಿಗಳ ರೂಪದಲ್ಲಿ ನಮ್ಮ ಕೃಷಿಯನ್ನು ಹೊಸ ದಿಕ್ಕಿಗೆ ಕೊಂಡೊಯ್ದಿತು.ಈಗ ಕೃಷಿಯು ಡಿಜಿಟಲ್‌ ಕ್ರಾಂತಿಯನ್ನು ನೋಡುತ್ತಿದೆ. ಡಿಜಿಟಲ್‌ ಕ್ರಾಂತಿಯು ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಮುಂದಿವರಿದಿದೆ. ಕೃಷಿಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯಲ್ಲಿ ಅನುಭವಿಸಿದೆ. ಕೃಷಿಯಲ್ಲಿ ಡಿಜಿಟಲ್  ಪ್ರಭಾವದ ಮೂಲಕ‌ ಅಭಿವೃದ್ಧಿ ಹೊಂದುತ್ತಿರುವ ಭಾರತ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಡತನವನ್ನು ಕಡಿಮೆ ಮಾಡುವ ,ಕೃಷಿಯನ್ನು ಅಭಿವೃದ್ಧಿ ಪಡಿಸುವ  ಸಾಮರ್ಥ್ಯವನ್ನು ಹೊಂದಿದೆ.

Advertisement

ಡಿಜಿಟಲ್‌ ಬೆಳವಣಿಗೆಯ ಮೂಲಕ ಕೃಷಿಯ ಸವಾಲುಗಳನ್ನು ಎದುರಿಸಲು ಸಾಧ್ಯವಿದೆ. ಉದಾಹರಣೆಗೆ ಹವಾಮಾನದ ತಕ್ಷಣ ಬದಲಾವಣೆಗಳು ಈಗ ನಿಖರವಾಗಿ ಹೇಳಲು ಸಾಧ್ಯವಿದೆ, ಮುಂದಿನ ವಾತಾವರಣವೂ ಹೇಳಲು ಸಾಧ್ಯವಿದೆ. ಹವಾಮಾನ ಮತ್ತು ಮಾರುಕಟ್ಟೆ ಮಾಹಿತಿ ರೈತರಿಗೆ  ಅರಿವು ಮೂಡಿಸುವ ಮೂಲಕ ಕೃಷಿಯಲ್ಲಿ ಬಹಳಷ್ಟು ಬೆಳವಣಿಗೆ ಸಾಧಿಸಿದಂತೆಯೇ ಸರಿ. ಇದಕ್ಕೆ ಡಿಜಿಟಲ್‌ ತಂತ್ರಜ್ಞಾನಗಳು ಅಗತ್ಯವಿದೆ. ಡಿಜಿಟಲ್ ತಂತ್ರಜ್ಞಾನಗಳು ಯಾವಾಗ ಮತ್ತು ಯಾವ ಬೆಳೆಗಳನ್ನು ನೆಡಬೇಕು, ಹಾಗೆಯೇ ಆ ಬೆಳೆಗಳನ್ನು ಯಾವಾಗ ಮತ್ತು ಎಲ್ಲಿ ಮಾರಾಟ ಮಾಡಬೇಕು ಎಂಬುದರ ಕುರಿತು ಹೆಚ್ಚು  ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.

ರಸಗೊಬ್ಬರಗಳ ಉದ್ದೇಶಿತ ಅಪ್ಲಿಕೇಶನ್‌ಗಳು, ಕೀಟನಾಶಕಗಳು,  ಡ್ರೋನ್‌ಗಳು, ಮಣ್ಣಿನ ವಿಶ್ಲೇಷಣೆ, ಬೆಳೆ ಇಳುವರಿ ಮೇಲ್ವಿಚಾರಣೆ ಹಾಗೂ ಇತರ ಮಾಹಿತಿಗಳೂ ತಂತ್ರಜ್ಞಾನ ವಿಧಾನಗಳ ಮೂಲಕ ಸಣ್ಣ ರೈತರನ್ನೂ ತಲುಪಬೇಕಾಗುತ್ತದೆ. ಇದಕ್ಕಾಗಿ ತಂತ್ರಜ್ಞಾನಗಳ ಸರಳೀಕರಣವೂ ಅಗತ್ಯ. ಸಾಮಾನ್ಯ ಕೃಷಿಕನೂ ತಂತ್ರಜ್ಞಾನವನ್ನು ಸುಲಭವಾಗಿ ಬಳಸುವಂತಾಗಬೇಕು. ಆಗ ಕೃಷಿಕ,ವಿಜ್ಞಾನಿ,ವ್ಯಾಪರಿ, ಗ್ರಾಹಕ, ಕೃಷಿ ಉದ್ಯಮ ಇವೆಲ್ಲಾ ಒಂದೇ ವೇದಿಕೆಯ ಅಡಿಯಲ್ಲಿ ಕೆಲಸ ಮಾಡುವುದು ಸುಲಭವಾಗುತ್ತದೆ. ಭಾರತದ ಕೃಷಿ ವಿಧಾನಗಳೂ ಬದಲಾಗಲು ಗ್ರಾಮೀಣ ಭಾಗದಿಂದಲೂ ಸಾಧ್ಯವಾಗುತ್ತದೆ.ಇದೆಲ್ಲಾ ಕೃಷಿಯಲ್ಲಿ ಡಿಜಿಟಲೀಕರಣದ ಪ್ರಮುಖ ಭಾಗವಾಗಿದೆ.

Advertisement

ಕೃಷಿಯಲ್ಲಿ ಕೀಟಗಳನ್ನು ನಿಯಂತ್ರಿಸಲು, ಕೃಷಿ ಡೇಟಾವನ್ನು ಸಂಗ್ರಹಿಸಲು, ಆರೋಗ್ಯಕರ ಬೆಳೆಗಳನ್ನು ಉತ್ಪಾದಿಸಲು, ಕೆಲಸದ ಹೊರೆ ಕಡಿಮೆ ಮಾಡಲು ಮತ್ತು ಇತರ ಬೆಳವಣಿಗೆಗೆ  ಡಿಜಿಟಲ್‌ ಆಯಾಮವು ಸಹಾಯ ಮಾಡುತ್ತದೆ. ಕೃಷಿಯಲ್ಲಿ ಹೆಚ್ಚಿನ ಯಾಂತ್ರೀಕರಣವನ್ನು ಒದಗಿಸಿದರೆ ರೈತರು ಹೊಲಗಳಲ್ಲಿ ಇಲ್ಲದಿದ್ದರೂ ಸಹ ತಮ್ಮ ಬೆಳೆಗಳನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಕೃಷಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿಯ ಕಾರಣದಿಂದ ಸ್ವಯಂಚಾಲಿತ ವಿಧಾನಗಳನ್ನು ಅಳವಡಿಸಲು ಸಾಧ್ಯವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ, ಖಾಸಗಿ ವಲಯದ ರೈತ ಉತ್ಪಾದಕ ಸಂಸ್ಥೆಗಳ ಎಫ್‌ ಪಿ ಒ (FPO) ಗಳನ್ನು ಇದೇ ಕಾರಣಕ್ಕೆ ರಚನೆ ಮಾಡಿವೆ.

ಈಗಾಗಲೇ ಕೃಷಿ ಡಿಜಿಟಲೀಕರಣ ಆರಂಭವಾಗಿದೆ. ರೈತರ ಬೆಳೆ ಸರ್ವೆ, ಸಹಕಾರಿ ಸಂಘದ ಜೊತೆ ಲಿಂಕ್‌, ಆಧಾರ್‌ ಲಿಂಕ್‌, ಹೀಗೇ ಸಣ್ಣ ಸಣ್ಣ ಹಂತಗಳು ಆರಂಭವಾಗಿದೆ. ಗ್ರಾಮೀಣ ಭಾಗದಲ್ಲಿ ಆರಂಭದಲ್ಲಿ ಸಮಸ್ಯೆಗಳಾಗುತ್ತಿದೆ. ಈ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಬಲ್ಲ ಸಲಹೆಗಳನ್ನು ನೀಡುವ ತಂಡವೊಂದು ರಚನೆಯಾಗಬೇಕಿದೆ. ಭಾರತದಲ್ಲಿ ಕೃಷಿ ಡಿಜಿಟಲೀಕರಣವಾದರೆ ಅನಗತ್ಯ ಬೆಳೆವಿಸ್ತರಣೆ, ಬೆಳೆಯ ಮಾರುಕಟ್ಟೆ ಹಾಗೂ ಮಾರುಕಟ್ಟೆಯ ಗಾತ್ರವೂ ತಿಳಿಯುತ್ತದೆ. ಕೃಷಿ ಬೆಳವಣಿಗೆಯ ಕಡೆಗೂ ಭಾರತ ಗಮನಹರಿಸಲು ಸಾಧ್ಯವಾಗುತ್ತದೆ. ಅಗನತ್ಯವಾಗಿ ಕೃಷಿಕರು ಸಂಕಷ್ಟಕ್ಕೆ ಸಿಲುಕುವುದು, ಸರ್ಕಾರ ಪರಿಹಾರ ನೀಡುವುದು  ಮೊದಲಾದ ಸಂಕಟಗಳು ತಪ್ಪುತ್ತವೆ.

Advertisement

ಹೀಗಾಗಿ, ಭಾರತೀಯ ಕೃಷಿ ಕ್ಷೇತ್ರವು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಸಮಗ್ರ ಪರಿಸರ ವ್ಯವಸ್ಥೆಯ ವಿಧಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಮುಂಬವರು ದಿನಗಳಲ್ಲಿ ಭಾರತದಲ್ಲಿ ಆಹಾರ ಬೆಳೆಯತ್ತಲೇ ಹೆಚ್ಚು ನಿಗಾ ಇರಿಸುವ ದಿನಗಳ ಬರಲಿದೆ. ಆ ಸಂದರ್ಭದಲ್ಲಿ ಭಾರತದ ಕೃಷಿ ವ್ಯವಸ್ಥೆಯೂ ಬದಲಾಗಬೇಕಾಗುತ್ತದೆ ಹಾಗೂ ಡಿಜಿಟಲೀಕರಣವಾದರೆ ಕೃಷಿ ಇನ್ನಷ್ಟು ಬಲವಾಗುತ್ತದೆ. ಹೀಗಾಗಿ  ದೇಶವು ಮುಂದಿನ 10-15 ವರ್ಷಗಳಲ್ಲಿ ಪರಿವರ್ತನೆಗೆ ಕಾರಣವಾಗುವ ಬದಲಾವಣೆಗೆ ಸಾಕ್ಷಿಯಾಗಲಿದೆ. ಈ ಕಾರಣದಿಂದಲೇ ಕೆಲವು ಬೆಳೆಗಳ ಮೇಲೆ ಸರ್ಕಾರ ನಿಗಾ ಇರಿಸಿದೆ, ನಿಯಂತ್ರಣಕ್ಕೆ ಪರೋಕ್ಷವಾಗಿ ಸೂಚನೆ ನೀಡುತ್ತಿದೆ. ಆದರೆ ರಾಜಕೀಯ ಉದ್ದೇಶಗಳ ಕಾರಣದಿಂದ ಈಗ ಮೌನವಾಗುತ್ತಿದೆ. ಕೆಲವು ನೆರವುಗಳನ್ನು ನೀಡದೆ ಸತಾಯಿಸುತ್ತದೆ. ಇದನ್ನು ಗ್ರಾಮೀಣ ಭಾಗದ ಕೃಷಿ ಕ್ಷೇತ್ರದವರೆಗೂ ತಲಪಿಸುವುದು ಸವಾಲಿನ ಕೆಲಸ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮನೆಯು ಮತ್ತೊಮ್ಮೆ ಮೊದಲ ಪಾಠಶಾಲೆಯಾಗಲಿ
November 20, 2024
8:49 PM
by: ಡಾ.ಚಂದ್ರಶೇಖರ ದಾಮ್ಲೆ
ಅಡಿಕೆಯ ಮೇಲೆ ಕ್ಯಾನ್ಸರ್‌ ಗುಮ್ಮ | 20 ವರ್ಷಗಳಿಂದ ಏನೇನಾಯ್ತು..? | ಮುಂದೇನು ಮಾಡಬಹುದು..?
November 20, 2024
11:27 AM
by: ವಿಶೇಷ ಪ್ರತಿನಿಧಿ
ಕಬ್ಬು ಕಟಾವು ಯಂತ್ರಗಳ ಪ್ರಾತ್ಯಕ್ಷಿಕೆ, ವಿತರಣೆ | ಸಚಿವ ಎನ್. ಚಲುವರಾಯಸ್ವಾಮಿ ಭಾಗಿ
November 19, 2024
7:28 PM
by: The Rural Mirror ಸುದ್ದಿಜಾಲ
ರೈತರು ಕೇವಲ ಒಂದು ಕೃಷಿಗೆ ಸೀಮಿತವಾಗಬಾರದು
November 18, 2024
10:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror