The Rural Mirror ವಾರದ ವಿಶೇಷ

ಭಾರತದ ಕೃಷಿಯಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಆದ್ಯತೆ |

Share

ಕೃಷಿ ಶಿಕ್ಷಣ ಕಾರ್ಯಕ್ರಮಗಳಲ್ಲಿ ಒಟ್ಟು ದಾಖಲಾತಿಯಲ್ಲಿ ಮಹಿಳೆಯರು ಶೇ. 30-40 ರಷ್ಟಿದ್ದರೂ, ಈ ವಲಯದಲ್ಲಿ ಉದ್ಯೋಗಕ್ಕೆ ಪರಿವರ್ತನೆಗೊಳ್ಳುವ ಪ್ರಮಾಣ ಬಹಳ ಕಡಿಮೆ ಎಂದು ಭಾರತದ ಕೃಷಿ ವಲಯದಲ್ಲಿನ ಹೊಸ ವರದಿಯೊಂದು ಗಮನ ಸೆಳೆದಿದೆ. ಕೃಷಿ ಕಾರ್ಯಪಡೆಯಲ್ಲಿ ಮಹಿಳೆಯರು 64.4% ರಷ್ಟಿದ್ದರೂ, ಕೇವಲ 6-10% ಮಾತ್ರ ಉನ್ನತ ಕೃಷಿ ವ್ಯವಹಾರ ಮತ್ತು ಸಂಬಂಧಿತ ಕಂಪನಿಗಳಲ್ಲಿ ಸ್ಥಾನಗಳನ್ನು ಹೊಂದಿದ್ದಾರೆ.
ಭಾರತದ ಕೃಷಿ ವಲಯದಲ್ಲಿನ ತೀವ್ರ ವ್ಯತಿರಿಕ್ತತೆಯ ವರದಿ ಇದು ಎಂದು ವರದಿ ಹೇಳಿದೆ.

Advertisement

“ಕೃಷಿ ವ್ಯವಹಾರದಲ್ಲಿ ಮಹಿಳೆಯರು – ಅವಕಾಶಗಳು ಮತ್ತು ಸವಾಲುಗಳು” ಎಂಬ ಶೀರ್ಷಿಕೆಯ ಈ ವರದಿಯನ್ನು ಗೋದ್ರೇಜ್ ಆಗ್ರೋವೆಟ್ ಲಿಮಿಟೆಡ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್ ಮತ್ತು ಗೋದ್ರೇಜ್  ಲ್ಯಾಬ್ ಸಹಯೋಗದೊಂದಿಗೆ ಆಯೋಜಿಸಿದ್ದ ಎರಡನೇ ಕೃಷಿ ಮಹಿಳಾ ಸಭೆಯಲ್ಲಿ ಈ ವರದಿಯನ್ನು ಅನಾವರಣಗೊಳಿಸಲಾಯಿತು ಹಾಗೂ ವಿಶ್ಲೇಷಿಸಲಾಯಿತು. ಮಹಿಳೆಯರನ್ನು ಕೃಷಿ ಕ್ಷೇತ್ರದಲ್ಲೂ ಸಬಲೀಕರಣಗೊಳಿಸುವ ಮೂಲಕ ಕೃಷಿಯ ಭವಿಷ್ಯವನ್ನು ಇನ್ನಷ್ಟು ಗಟ್ಟಿ ಮಾಡಬಹುದು ಎನ್ನುವುದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.  ಕೃಷಿ ಶಿಕ್ಷಣ ಕಾರ್ಯಕ್ರಮಗಳಲ್ಲಿ ಒಟ್ಟು ದಾಖಲಾತಿಯಲ್ಲಿ ಮಹಿಳೆಯರು ಶೇ. 30-40 ರಷ್ಟಿದ್ದರೂ, ಈ ವಲಯದಲ್ಲಿ ಉದ್ಯೋಗಕ್ಕೆ ಪರಿವರ್ತನೆಗೊಳ್ಳುವ ಪ್ರಮಾಣ ಬಹಳ ಕಡಿಮೆ ಎಂದು ವರದಿ ಗಮನಸೆಳೆದಿದೆ.

ಐಐಎಂಎಯ ಅಧ್ಯಾಪಕ ಸದಸ್ಯೆ ವಿದ್ಯಾ ಅವರು ಈ ಡಾಟಾವು ವಿರೋಧಾಭಾಸವಾಗಿದೆ ಎಂದಿದ್ದಾರೆ. ಕೃಷಿ ಕಾರ್ಯಪಡೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರು ಗುರುತಿಸಿಕೊಂಡರೂ  ಕೃಷಿ  ಉದ್ಯೋಗ ದ ವೇಳೆ ಹಿಂದೆ ಉಳಿಯುವುದರ ಬಗ್ಗೆ ಕಾರಣ ಹುಡುಕಬೇಕಿದೆ ಎಂದಿದ್ದಾರೆ.

ಕೃಷಿಯ ಭವಿಷ್ಯವು ಭಾರತದಲ್ಲಿ ಇನ್ನಷ್ಟು ಗಟ್ಟಿಯಾಗಲು ಮಹಿಳಾ ಪ್ರಾತಿನಿಧ್ಯ ಕೃಷಿಯಲ್ಲೂ ಹೆಚ್ಚಾಗಬೇಕು, ಅದು ಉದ್ಯೋಗವಾಗಿ ಪರಿವರ್ತನೆಯಾಗಬೇಕು, ಅಷ್ಟೇ ಅಲ್ಲ ಕೃಷಿ ಸಂಸ್ಥೆಗಳಲ್ಲೂ ಮಹಿಳೆಯರು ಉದ್ಯೋಗ ಪಡೆಯಬೇಕು.ಈ ಮೂಲಕ ಕೃಷಿಯ ಉಳಿವು ಕೂಡಾ ಸಾಧ್ಯವಿದೆ ಎನ್ನುವುದು ವರದಿಯ ಸಾರಂಶ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ..

4 hours ago

ಭಾರತದಿಂದ ‘ಆಪರೇಷನ್ ಸಿಂಧೂರ್’ | ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ ನಾಶ | 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ |

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ…

5 hours ago

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

1 day ago

ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

1 day ago

ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…

1 day ago