Advertisement
ಅಂಕಣ

ಆತ್ಮಾಭಿಮಾನ ಯಶಸ್ಸಿನ ಮೂಲ | ಕೃಷಿಕನಿಗೂ ಆತ್ಮಾಭಿಮಾನ ಬರುವುದು ಹೀಗೆ….. | ಕೃಷಿಕ ಟಿ ಆರ್‌ ಸುರೇಶ್ಚಂದ್ರ ಬರೆಯುತ್ತಾರೆ…|

Share
ಆತ್ಮಾಭಿಮಾನ ಅನ್ನೋದು ಇದೆಯಲ್ಲಾ, ಅದು ಮನುಷ್ಯನ ಅಂತರಾಳದ  ಮಿಡಿತ,ತುಡಿತಗಳ ಧೀಶಕ್ತಿ. ತಾನು ಮಾಡುತ್ತಿರುವ ಕಸುಬು,ಉದ್ಯೋಗ, ಉದ್ಯಮಗಳ ಬಗ್ಗೆ ತನಗೇ ಹೆಮ್ಮೆ ಇದ್ದಾಗ  ಆತನೊಬ್ಬ ಸಾಧಕನಾಗುತ್ತಾನೆ…. ಹೌದು.
ಇಂದು ಕೃಷಿ ಲೋಕಕ್ಕೊಂದು,ಕೃಷಿ ಬದುಕಿಗೊಂದು ಅಂತಹ ಅಭಿಮಾನದ ಹೊಳಹು ಮೂಡಲೇಬೇಕಿದೆಯಲ್ಲಾ. ಎಸ್…The Abharana people triggered it. Thank you Abharana.
ವಿಷಯ ಏನೂಂದ್ರೆ, ಕೃಷಿ ಅಂದಾಗ, ನಮ್ಮ ಸುತ್ತಲೂ ಒಂದಷ್ಟು ಅಭಿಮಾನ ಶೂನ್ಯತೆ ಎದ್ದು ಕಾಣುತ್ತಿದೆ. ಯಾವ ರೀತಿ ಒಬ್ಬ ಅಧ್ಯಾಪಕ ,ಒಬ್ಬ ವೈದ್ಯ, ಒಬ್ಬ ವಕೀಲ,ಒಬ್ಬ ಇಂಜಿನಿಯರ್ ,ಒಬ್ಬ ಆರ್ಕಿಟೆಕ್ಟ್ ,ಒಬ್ಬ ವ್ಯಾಪಾರಿ ತಾನು ಇಂತಹ ವೃತ್ತಿ ,ಸೇವೆ ಮಾಡುವವನು ಎಂದು ತನ್ನ ಹೆಸರಿನ ಮುಂದೆ ಹಾಕಿಕೊಂಡು ಹೆಮ್ಮೆ ಪಡುವನೋ,ಅಂತಹದ್ದೇ ಹೆಮ್ಮೆ ಕೃಷಿ ಲೋಕದಲ್ಲಿ ಮೂಡಬೇಕಿದೆ. ಉದಾಹರಣೆಗೆ , Advct, Dr, Er ,Ar., Proff.ಮುಂತಾಗಿ ಆಯಾ ವೃತ್ತಿ ನಿರತ ಹೆಮ್ಮೆಯಿಂದ  ಹಾಕಿಕೊಳ್ಳುವನೋ ಅಂತೆಯೇ  ನಾನು “Agri. Sureshchandra  T R. ಅಂತ ಹೆಮ್ಮೆಯಿಂದ ಹಾಕಿಕೊಳ್ಳುವ ದಿನಗಳು ಬರಬೇಕಲ್ಲಾ….. ಹೌದು, ನಾನೊಬ್ಬ ಕೃಷಿಕ ಅಂತ ನಾವು ಯಾವಾಗ ಹೇಳಿಕೊಳ್ಳುವ, ಹೆಮ್ಮೆ ಪಡುವ ದಿನ ಬಂತೋ ಆ ದಿನ ಕೃಷಿ ಲೋಕ ನಳನಳಿಸಿ ಆಕರ್ಷಕವಾಗೋದರಲ್ಲಿ ಸಂಶಯವಿಲ್ಲ.
ಈ ವಿಚಾರ ಯಾಕೆ ಪ್ರಸ್ತಾವಿಸಿದೇ ಅಂತ ಓದುಗರ  ಮನದಲ್ಲಿ ಬಂದಿರಬಹುದಲ್ಲಾ…
ಇದಕ್ಕೆ ಕಾರಣ ನಮ್ಮೂರಿನ  ಅಶೋಕ್ ಕುಮಾರ್ ಕರಿಕ್ಕಳ. ಅವರು, ನಾನು ಅಶೋಕ್ ಕುಮಾರ್ ,ಫಾರ್ಮರ್ ಪ್ರಮ್  ದೊಡ್ಡಬಳ್ಲಾಪುರ ಅಂತ ತಮ್ಮನ್ನು ಪರಿಚಯಿಸಿಕೊಳ್ಳೋದಂತೆ. ಇದು ನಮ್ಮತನದ ಬಗೆಗಿನ ಹೆಮ್ಮೆಯ ವಿಚಾರ ಅಂತ ನನಗನ್ನಿಸಿತು. ಯಾವಾಗ ಕೃಷಿಕ ಹೆಮ್ಮೆ ಪಡುವ ದಿನಗಳು ಬಂತೋ ಆಗ ಕೃಷಿ ಸಂಭಂದೀ ಉದ್ಯೋಗ, ಅಂದರೆ ಕಾರ್ಮಿಕರೂ ನಾನು ಇಂತಹ ಕೃಷಿ ಲೋಕದ ಉದ್ಯೋಗಿ ಎನ್ನಲೂ ಹೆಮ್ಮೆ ಪಟ್ಟಾನು, ಆಗ ಕೃಷಿ ಆಕರ್ಷಕವಾದೀತು,ಕೃಷಿಕ ದೇಶದ ನಿಜ ಬೆನ್ನೆಲುಬಾದಾನು.
ಇಂತಹ ಕೃಷಿ ಬದುಕಲ್ಲೂ ಒಂದು ಜಾಹೀರಾತು ಕೊಡಬಹುದು, ಕೊಡಬೇಕು ಅನಿಸಿತಲ್ಲಾ….ಇದು ನಿಜಕ್ಕೂ ಶ್ಲಾಘನೀಯ…. ಇಂತಹ ಹತ್ತು ಹಲವರು ಕೃಷಿ ಬದುಕಿನತ್ತ ಒಂದು ನೋಟ ಹರಿಸಿದರೆ ಪರೋಕ್ಷವಾಗಿ ಅದು ಆತ್ಮಾಭಿಮಾನ ಜಾಗೃತಿಗೊಂದು ಇಂಬುಕೊಟ್ಟಂತಾದೀತು. ನಾನು ಮಾಡುತ್ತಿರುವ ಕೃಷಿ ಬದುಕಿನ ಮೂಲ ,ಅಡಿಕೆಯನ್ನು ಮುಂದಿಟ್ಟು ಜಾಹೀರಾತು ಕೊಟ್ಟ ಆಭರಣ ಸಂಸ್ಥೆಯ ಮೇಲೆ ನನಗೊಂದು ಖುಷಿ ಅಯಿತಲ್ಲಾ…ಮುಂದೊಂದು ದಿನ ಒಮ್ಮೆಯಾದರೂ ನಾನು ಆಭರಣಕ್ಕೆ ಬೇಟಿ ನೀಡುವಂತೆ ಈ ಜಾಹೀರಾತು ಮಾಡಿಬಿಟ್ಟಿತು.ಅಂತೆಯೇ, ಹತ್ತು ಹಲವು ಕಡೆಯಲ್ಲಿ ಕೃಷಿಕನೂ ಒಬ್ಬ ಜಾಹೀರಾತುದಾರನಾಗುವಂತಾದಾಗ ಅವನ ಲೋಕವೂ ಆಕರ್ಷಕವಾದೀತಲ್ಲಾ…
ಗಮನಿಸೋಣ…, ನಮ್ಮ ಕೆಲಸದ ಬಗ್ಗೆ ನಮಗೇ ಮೊದಲಾಗಿ ಗೌರವ, ಪ್ರೀತಿ, ಹೆಮ್ಮೆ ಮೂಡಿಬರಲಿ, ಆಗ ನಮ್ಮೆಲ್ಲರ ಬದುಕೂ ಹಸನಾದೀತು,ಕೃಷಿತೋ ನಾಸ್ತಿ ದುರ್ಭಿಕ್ಷಂ ಅನ್ನೋ ಮಾತು ಸತ್ಯವಾದೀತು.
ಬರಹ :
ಟಿ ಆರ್‌ ಸುರೇಶ್ಚಂದ್ರ ತೊಟ್ಟೆತ್ತೋಡಿ, ಕಲ್ಮಡ್ಕ
(ಮೇಲಿನ ಜಾಹೀರಾತು ಹೇಗಿದೆ ಎಂದು ಅಶೋಕ ಅಣ್ಣ ನನಗೆ ಕಳುಹಿಸಿದಾಗ ,ಮನದಲ್ಲಿ ಮೂಡಿದ ವಿಚಾರ ಬರಹ ರೂಪಕ್ಕೆ ಇಳಿಸಿರುವೆ. ಅಷ್ಟೇ.)
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?

ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…

1 day ago

ಮೊಗ್ರದಲ್ಲಿ ಕಾಲಾವಧಿ ನೇಮ

https://youtu.be/YgcAfgYUbGQ?si=vp1TmN5dQYAkVPBy

2 days ago

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

3 days ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

3 days ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

4 days ago