ಕಾಡಾನೆ ದಾಳಿಗೆ ಕೃಷಿ ನಾಶ | ಮನಕಲುವ ದೃಶ್ಯ ಇದು | ಕೃಷಿಕರ ಈ ನೋವಿಗೆ ಪರಿಹಾರ ಎಂದು ?

May 13, 2021
9:54 PM

ಕೈ ಕೆಸರಾದರೆ ಬಾಯಿ ಮೊಸರು ಬಹಳ ಹಳೆಯ ಗಾದೆ ಮಾತು. ಈಗ ಕೈ ಕೆಸರಾದರೆ ಬಾಯಿ ಮೊಸರು ಎನ್ನಲು ಕೆಲ ಕಾಲ ಬೇಕಾಗುತ್ತದೆ. ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ  ಕೃಷಿ ಫಲ ನೀಡಿದರೂ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಕೃಷಿ ಉಳಿಸುವುದೇ ಈಗ ಹಲವು ಕಡೆ ಕೃಷಿಕರಿಗೆ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ಕಾಡು ಪ್ರಾಣಿಗಳ ಹಾವಳಿ, ಅದರಲ್ಲೂ ಕಾಡಾನೆ ಹಾವಳಿ.

Advertisement
Advertisement

 

ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ  ಕಾಡಾನೆ ಹಾವಳಿ ಇದೆ. ಮಂಡೆಕೋಲು ಗ್ರಾಮದಲ್ಲಿ ಕಾಡಾನೆ ಹಾವಳಿ ತೀವ್ರವಿದೆ. ಹಗಲು ಹೊತ್ತಿನಲ್ಲಿಯೇ ಕಾಡಾನೆ ಕಾಣ ಸಿಗುತ್ತದೆ. ಈಚೆಗೆ ಆನೆಗಳ ಹಿಂಡೇ ಕಂಡುಬಂದಿತ್ತು.  ಅದೇ ಮಾದರಿಯ ಪರಿಸ್ಥಿತಿ ಈಗ ಕೊಲ್ಲಮೊಗ್ರ , ಬಾಳುಗೋಡು, ಕಲ್ಮಕಾರು, ಕಟ್ಟ ಪ್ರದೇಶದಲ್ಲಿ ಕಂಡುಬಂದಿದೆ. ಕಾಡಾನೆ ಮಾತ್ರವಲ್ಲ ಕಾಡುಕೋಣ, ಕಾಡೆಮ್ಮೆ, ಕಡವೆ, ಮಂಗಗಳ ಕಾಟವೂ ಸುಳ್ಯ ತಾಲೂಕಿನ ಕೃಷಿಕರಿಗೆ ವಿಪರೀತವಾಗಿ ಹಲವು ವರ್ಷಗಳಿಂದ ಬಾಧಿಸುತ್ತಿದೆ. ಇತ್ತೀಚೆಗೆ ಮಂಗಗಳ ಕಾಟಗಳಿಂದ ತೆಂಗಿನಕಾಯಿ ಫಸಲೇ ಕಡಿಮೆಯಾಗಿದೆ. ಈಗ ಆನೆಗಳ ಕಾಟದಿಂದ ಕೃಷಿಕರ ಬದುಕಿನ ಬೆಳೆಯಾದ ಅಡಿಕೆ, ತೆಂಗು ಕೂಡಾ ನಾಶವಾಗುತ್ತಿದೆ.

ಕೊಲ್ಲಮೊಗ್ರ , ಕಟ್ಟ ಪ್ರದೇಶದಲ್ಲಿ ಈಚೆಗ ಕಾಡಾೆನೆಗಳ ಹಾವಳಿ ಹೆಚ್ಚಾಗಿದ್ದು ಚೆನ್ನಾಗಿ ಬೆಳೆದಿರುವ ಕೃಷಿ ಕೈಗೆ ಸಿಗುವ ಮೊದಲೇ ಕಾಡು ಪ್ರಾಣಿಗಳಿಂದ ಹಾನಿಗೊಳಗಾಗುತ್ತಿದೆ. ಕಟ್ಟದ ಶಂಕರ ಭಟ್‌ ಎಂಬವರ ತೋಟಕ್ಕೆ ಈಚೆಗೆ ಕಾಡಾನೆ ದಾಳಿ ಮಾಡಿ ಅಡಿಕೆ, ಬಾಳೆ, ತೆಂಗು ಸಹಿತ ಕೃಷಿಯನ್ನು ನಾಶ ಮಾಡಿದೆ. ಕೃಷಿ ಮಾಡಿ ಫಸಲು ಬರುವ ಹೊತ್ತಿಗೆ ಹೀಗೆ ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿ ನಾಶವಾದರೆ ಕೃಷಿಕನ ವೇದನೆ ಯಾರ ಬಳಿ ಹೇಳುವುದು ? ಕೃಷಿ ನಾಶದ ಚಿತ್ರಣವೇ ಭಯಾನಕವಾಗಿದೆ. ಅನೇಕ ವರ್ಷಗಳ ಶ್ರಮ ವ್ಯರ್ಥವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಇಲಾಖೆಗಳಿಗೆ, ಸರಕಾರಕ್ಕೆ, ಜನನಾಯಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೃಷಿ ನಾಶಕ್ಕೆ ಸೂಕ್ತ ಪರಿಹಾರ ಕ್ರಮದ ಬಗ್ಗೆ ಈಗ ಚಿಂತನೆ ನಡೆಯಬೇಕಿದೆ. ಸುಳ್ಯದ ಸಚಿವರೇ ಈಗ ಇರುವುದರಿಂದ ಸೂಕ್ತ ಕ್ರಮಕ್ಕಾಗಿ ಸರಕಾರವನ್ನು  ಒತ್ತಾಯ ಮಾಡಬೇಕು ಎಂದು ಕೃಷಿಕರು ಹೇಳುತ್ತಾರೆ.

ವಿವಿದೆಡೆ ತೋಟದಲ್ಲಿ ಓಡಾಡುವ ಕಾಡೆಮ್ಮೆ ಹಾಗೂ ಆನೆಗಳು ಹಿಂಡುಗಳ ವಿಡಿಯೋ :

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಣ್ಣ ರೈತರಿಗೆ ಇಲ್ಲಿ ‘ಎಟಿಎಂ’ ಈ ಹಸು ! ಹಾಲಿನಲ್ಲಿ 8.4% ಕೊಬ್ಬು , ತುಪ್ಪದ ರೇಟು ಭರ್ಜರಿ..!
January 31, 2026
10:56 PM
by: ದ ರೂರಲ್ ಮಿರರ್.ಕಾಂ
ಅಸ್ಸಾಂ ಗಡಿಯಲ್ಲೇ ಅಡಿಕೆ ಹಬ್…! 30,000 ಹೆಕ್ಟೇರ್ ಅಡಿಕೆ ಕೃಷಿಗೆ ಬಲ – ಮಿಜೋರಾಂ ಸಿಎಂ ಉದ್ಘಾಟಿಸಿದ ಹೊಸ ಘಟಕ
January 31, 2026
10:13 PM
by: ಮಿರರ್‌ ಡೆಸ್ಕ್
ಗ್ರಾಮೀಣ ಜನರು ಸ್ವಾವಲಂಬಿಗಳಾಗಬೇಕು: ಸಿದ್ದರಾಮಯ್ಯ ಕರೆ
January 31, 2026
2:55 PM
by: ಮಿರರ್‌ ಡೆಸ್ಕ್
ಆಯುಷ್ಮಾನ್ ಚಿಕಿತ್ಸೆ ನಿರಾಕರಿಸುವಂತಿಲ್ಲ‌ | ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಿಗೆ ಡಿಹೆಚ್ಒ ಖಡಕ್ ಸೂಚನೆ
January 31, 2026
6:43 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror