Advertisement
MIRROR FOCUS

2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು

Share

ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬಹುದು, ಈ  ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..

  • ಕೃಷಿ ಯಾಂತ್ರೀಕರಣ: ರೈತರು ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಅನುವು ಮಾಡಿಕೊಡಲು ಹಾಗೂ ಕೂಲಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಸದರಿ ಕೃಷಿ ಯಾಂತ್ರೀಕರಣ ಯೋಜನೆಯಡಿ ಕೃಷಿ ಯಂತ್ರೀಪಕರಣಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.5೦ ಹಾಗೂ ಪ.ಜಾ/ ಪ.ಪಂ ರೈತರಿಗೆ ಶೇ.90 ರಂತೆ ಎಲ್ಲಾ ವರ್ಗಾದ ರೈತರಿಗೆ ಗರಿಷ್ಠ ರೂ 1ಲಕ್ಷ ಕ್ಕೆ ಮಿತಿಗೊಳಪಟ್ಟ ಸಹಾಯಧನವನ್ನು ಒದಗಿಸಲಾಗುತ್ತದೆ ಹಾಗೂ 45 ಪ.ಟಿ.ಒ ಹೆಚ್.ಪಿ ವರೆಗಿನ ಟ್ರಾಕ್ಟರ್ ಗಳಿಗೆ ಸಾಮಾನ್ಯ ವರ್ಗದ ರೈತರಿಗೆ ರೂ.75000 ಹಾಗೂ ಪ.ಜಾ/ಪ.ಪಂ ರೈತರಿಗೆ ಶೇ.90ರ ಗರಿಷ್ಠ ರೂ 3ಲಕ್ಷ ಸಹಾಯಧನ ನೀಡಲಾಗುತ್ತಿದೆ.
  • ಸೂಕ್ಷ್ಮ ನೀರಾವರಿ: ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯ ಯೋಜನೆಯ ಮಾರ್ಗಸೂಚಿ ಅನ್ವಯ ಸಣ್ಣ/ ಅತಿ ಸಣ್ಣ ರೈತರಿಗೆ ಶೇ.55 ಮತ್ತು ಇತರೇ ವರ್ಗದ ರೈತರಿಎ ಶೇ.45 ರಷ್ಟು ಸಹಾಯಧನವನ್ನು ಪ್ರತಿಯೊಬ್ಬ ರೈತರಿಗೆ ಗರಿಷ್ಠ 5.0 ಹೆಕ್ಟೇರ್ ಪ್ರದೇಶದವರಿಗೆ ನೀಡಲು ಅವಕಾಶವಿರುತ್ತದೆ ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ರಾಜ್ಯದ ಪಾಲಿನ ಹೆಚ್ಚುವರಿ ಸಹಾಯಧನವನ್ನು ಸೇರಿಸಿ, ಎಲ್ಲಾ ವರ್ಗಾದ ರೈತರಿಗೆ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ ಶೇ. 90ರ ಸಹಾಯಧನವನ್ನು ನೀಡಲಾಗುತ್ತಿದೆ.
  • ಬೆಳೆ ಸಾಲಕ್ಕೆ ಸಹಾಯಧನ: ಈ ಯೋಜನೆಯಡಿಯಲ್ಲಿ ವಾಣಿಜ್ಯ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಅಲ್ಪಾವಧಿ ಸಾಲ ಪಡೆದ ರೈತರಿಗೆ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಮೂಲಕ ಸಾಲದ ಮೊತ್ತ ರೂ1 ಲಕ್ಷ ಮಿತಿಯೊಳಗಿನ ಬೆಳೆ ಸಾಲ/ ಅಲ್ಪಾವಧಿ ಕೃಷಿ ಸಾಲವನ್ನು ಬ್ಯಾಂಕ್ ನಿಗದಿಪಡಿಸಿದ ಅವಧಿಯೊಳಗೆ ಪಾವತಿಸಿದ ರೈತರಿಗೆ ಶೇ.1 ರ ಬಡ್ಡಿ ರಿಯಾಯಿತಿ ನೀಡಲಾಗುವುದು.
  • ಕೃಷಿ ಭಾಗ್ಯ: ಕೃಷಿ ಭಾಗ್ಯ ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ, ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೋದಿಕೆ, ಹೊಂಡದಿಂದ ನೀರು ಎತ್ತಲು ಡೀಸಲ್ ಸೋಲಾರ್ ಪಂಪ್ಸೆಟ್ ಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.80 ಹಾಗೂ ಪ.ಜಾ/ಪ.ಪಂ ರೈತರಿಗೆ ಶೇ.90ರ ಸಹಾಯಧನವನ್ನು ಒದಗಿಸಲಾಗುತ್ತಿದೆ. ಹಾಗೂ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ ಶೇ.90ರ ಸಹಾಯಧನವನ್ನು ಎಲ್ಲಾ ವರ್ಗಾದ ರೈತರಿಗೆ ನೀಡಲಾಗುತ್ತದೆ. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣ ಸಾಮಾನ್ಯ ವರ್ಗದ ರೈತರಿಗೆ ಶೇ.40 ಹಾಗೂ ಪ.ಜಾ/ಪ.ಪಂ ರೈತರಿಗೆ ಶೇ.50ರ ಸಹಾಯಧನ ವನ್ನು ಒದಗಿಸಲಾಗುತ್ತಿದೆ.
  • ಹೈಟಿಕ್ ಹಾರ್ವೇಸ್ಟರ್ ಹವ್-ಹೈಟಿಕ್ ಹಾರ್ವೇಸ್ಟರ್ ಹಬ್ ಗಳ ಸ್ಥಾಪನೆ: ಶೇ.40 ರಿಂದ 70% ಎಷ್ಟು ಸಹಾಯಧನದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳು, ಇತರೆ ಸಂಘ-ಸಂಸ್ಥೆಗಳು ಹಾಗೂ ವೈಯಕ್ತಿಕ ಫಲಾನುಭಿಗಳಿಗೆ ಪ್ರತಿ ಘಟಕಕ್ಕೆ ಗರಿಷ್ಠ ರೂಲಕ್ಷಗಳಿಗೆ ಮೀರದಂತೆ ಅನುದಾನ ನೀಡಲಾಗುತ್ತದೆ.
  • ಬೀಜಗಳ ಪೂರೈಕೆ: ಬೀಜಗಳ ಪೂರೈಕೆ ಯೋಜನೆಯಡಿ ರಾಜ್ಯದ ಎಲ್ಲಾ ವರ್ಗದ ರೈತರಿಗೆ ವಿವಿಧ ಕೃಷಿ ಬೆಳೆಗಳ ಪ್ರಮಾಣಿತ/ ನಿಜ ಚೀಟಿ ಬಿತ್ತನೆ ಬೀಜಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ. 50 ಹಾಗೂ ಪ.ಜಾ/ಪ.ಪಂ ರೈತರಿಗೆ 75% ರ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.
  • ಕೃಷಿ ಸಂಸ್ಕರಣೆ: ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳು, ಟಾರ್ಪಾಲಿನ್ ಮತ್ತು ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಘಟಕಗಳನ್ನು ಸಹಾಯಧನದಡಿ ರೈತರಿಗೆ ವಿತರಿಸಲಾಗುತ್ತಿದೆ. ಸದರಿ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳು ಮತ್ತು ಟಾರ್ಪಾಲಿನ್ ಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನದಡಿ ನೀಡಲಾಗುವುದು.
  • ಕೃಷಿ ಆವರ್ತ: ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಬೆಲೆ ಕುಸಿತವಾದಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಆವರ್ತ ನಿಧಿಯನ್ನು ನಿರ್ವಹಿಸಲಾಗುತ್ತಿದೆ.
  • ರೈತರಿಗೆ ನೇರವಾಗಿ ಸಹಕಾರಿ ಸಂಘಗಳಿಂದ ಸಾಲದ ನೆರವು: ಸಹಕಾರಿ ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಗರಿಷ್ಠ ರೂ 5 ಲಕ್ಷಗಳವರೆಗೆ ಅಲ್ಪಾವಧಿ ಸಾಲ ಮತ್ತು 3% ಬಡ್ಡಿಯಲ್ಲಿ ರೂ15  ಲಕ್ಷಗಳವರೆಗೆ ಮಧ್ಯಮಾವಧಿ ಸಾಲವನ್ನು ನೀಡಲಾಗುತ್ತದೆ.
  • ರಾಷ್ಟ್ರೀಯ ಆಹಾರ ಸುರಕ್ಷಾತ ಅಭಿಯಾನ ಮತ್ತು ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ- ಎಣ್ಣೆ ಕಾಳು: ವಿವಿಧ ಆಹಾರ ಬೆಳೆಗಳು, ದ್ವಿದಳ ಧಾನ್ಯಗಳು, ಹತ್ತಿ ಹಬ್ಬು ಮತ್ತು ಎಣ್ಣೆ ಕಾಳು ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸಲು ಆಧುನಿಕ ತಾಂತ್ರಿಕತೆಗಳ ಆಯೋಜನೆಯ ಜೊತೆಗೆ ಬಿತ್ತನೆ ಬೀಜ, ಲಘ ಪೋಷಕಾಂಶಗಳು, ಜೈವಿಕ ಗೊಬ್ಬರಗಳು, ಸಸ್ಯ ಸಂರಕ್ಷಣಾ ರಾಸಾಯನಿಕಗಳು ಹಾಗೂ ಕೃಷಿ ಉಪಕರಣಗಳನ್ನು ಶೇ.5೦ ರ ಸಹಾಯಧನದಡಿ ನೀಡಲಾಗುತ್ತದೆ.
  • ಅರ್ಜಿ ಸಲ್ಲಿಸುವ ವಿಧಾನ: ಅರ್ಹ ರೈತರು ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಹೊಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಕಚೇರಿಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
    ಅಗತ್ಯ ದಾಖಲೆಗಳು:
    • ಆಧಾರ್ ಕಾರ್ಡ್
    • ರೈತ ಗುರುತಿನ ಚೀಟಿ
    • ಜಮೀನು ದಾಖಲೆಗಳು
    • ಬ್ಯಾಂಕ್ ಪಾಸ್ ಬುಕ್
    • ಪಾಸ್ ಪೋರ್ಟ್ ಗಾತ್ರದ ಪೋಟೋ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ

ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…

2 hours ago

ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..

ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…

2 hours ago

ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ | 2026 ಮಾರ್ಚ್ ವರೆಗೆ ಅವಕಾಶ

ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…

2 hours ago

ಸ್ವಾವಲಂಬಿ ಸಾರಥಿ ಯೋಜನೆ | ಆಟೋ ಗೂಡ್ಸ್ ವಾಹನ ಖರೀದಿಗೆ ರೂ.4 ಲಕ್ಷ ಸಹಾಯಧನ

ಟ್ಯಾಕ್ಸಿ, ಆಟೋ ಟ್ಯಾಕ್ಟರ್, ಗೂಡ್ಸ್ ವಾಹನದ ಡ್ರೈವರ್ ಆಗಿದ್ದರೂ ಸ್ವಂತ ವಾಹನವಿಲ್ಲ ಎಂಬ…

2 hours ago

ಕ್ಯಾನ್ಸರ್ ಗುಣಪಡಿಸಲು ಗೋವಿನ ಉತ್ಪನ್ನಗಳು | ಮಧ್ಯಪ್ರದೇಶ ಸರ್ಕಾರ ಸಂಶೋಧನೆಗೆ 3.5 ಕೋಟಿ ಖರ್ಚು ಮಾಡಿದ ಹಣ ಎಲ್ಲಿ?

ಮಧ್ಯಪ್ರದೇಶ ಸರ್ಕಾರದಿಂದ ಅನುದಾನಿತ ಸಂಶೋಧನಾ ಉಪಕ್ರಮವು, ಸಾಂಪ್ರದಾಯಿಕ ಹಸು ಆಧಾರಿತ ಸಿದ್ಧತೆಗಳನ್ನು ಬಳಸಿಕೊಂಡು…

2 hours ago

ಭಾರತದ 44% ನಗರಗಳು ದೀರ್ಘಕಾಲದ ವಾಯು ಮಾಲಿನ್ಯ ಸಂಕಟದಲ್ಲಿ| CREA ಉಪಗ್ರಹ ಅಧ್ಯಯನದ ಶಾಕಿಂಗ್ ಬಹಿರಂಗ

ಉಪಗ್ರಹ ದತ್ತಾಂಶ ಆಧಾರಿತ CREA ವಿಶ್ಲೇಷಣೆಯ ಪ್ರಕಾರ, ಭಾರತದ 4,041 ನಗರಗಳಲ್ಲಿ 1,787…

2 hours ago