ಹವಾಮಾನ ವೈಪರೀತ್ಯ ಹಾಗೂ ಹವಾಮಾನ ಬದಲಾವಣೆಯ ಸಮಸ್ಯೆಯು ಇಡೀ ಪ್ರಪಂಚದಲ್ಲಿ ಕೃಷಿ ಬೆಳವಣಿಗೆಗೆ ಕಾಡುತ್ತಿದೆ. ಈ ನಡುವೆಯೂ ಭಾರತ ಕೃಷಿಯು ಕಳೆದ ಒಂದು ವರ್ಷದಲ್ಲಿ ಶೇ.4.1 ರಷ್ಟು ಬೆಳವಣಿಗೆ ಕಂಡಿದೆ.
ಕೃಷಿ ಉದ್ಯಮವು ಕಳೆದ ಎರಡು ವರ್ಷಗಳ ಅವಧಿಯಲ್ಲಿ ತೀವ್ರವಾದ ಶಾಖದ ಕಾರಣದಿಂದಾಗಿ ಸಂಕಷ್ಟದ ಸ್ಥಿತಿಯಲ್ಲಿತ್ತು. ಹಾಗಿದ್ದರೂ ಕೂಡಾ ಈ ಹೋರಾಟದ ನಡುವೆ ಕೃಷಿಕರು ಕೃಷಿ ಬೆಳವಣಿಗೆಯತ್ತ ಮುಖ ಮಾಡಿ ಕೃಷಿ ಅಭಿವೃದ್ಧಿ ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಉತ್ಪಾದನೆಯನ್ನು 4.1% ರಷ್ಟು ಹೆಚ್ಚಳವಾಗಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಕೃಷಿ ಮತ್ತು ಸಂಬಂಧಿತ ವಲಯವು 4.1 ಪ್ರತಿಶತದಷ್ಟು ಬೆಳೆದಿದೆ.
ಭಾರತದ ಅರ್ಥಶಾಸ್ತ್ರಜ್ಞ ಕುನಾಲ್ ಕುಂದು ಅವರ ಪ್ರಕಾರ ಉತ್ಪಾದನೆಯು ನಿರೀಕ್ಷೆಯಂತೆ ಹೆಚ್ಚಿಸಿದೆ. ಅದೇ ಪ್ರಮಾಣದಲ್ಲಿ ದಾಸ್ತಾನು ಕೂಡಾ ಹೆಚ್ಚಿಸಿಕೊಂಡಿದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಬೆಳೆಗಳ ಮೇಲೆ ಹವಾಮಾನದ ಪರಿಣಾಮ ತೀವ್ರವಾಗಿ ಕಾಡಿದೆ. ಎಲ್ಲಾ ಕೃಷಿಗಳ ಮೇಲೂ ಹೆಚ್ಚಿನ ಪರಿಣಾಮ ಬೀರಿದೆ. ಇತ್ತೀಚೆಗಿನ ವರ್ಷಗಳಲ್ಲಿ ಹವಾಮಾನದ ಪರಿಣಾಮಗಳು ಕೃಷಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಬೇಸಿಗೆ ಹಾಗೂ ಮಳೆಗಾಲ ಎರಡೂ ಸಂದರ್ಭದಲ್ಲಿ ಹೆಚ್ಚಿನ ಪರಿಣಾಮಗಳು ಎದುರಾಗಿವೆ. ಈ ನಡುವೆಯೂ ಕೃಷಿ ಕ್ಷೇತ್ರದ ಬೆಳವಣಿಗೆ ಆಶಾದಾಯಕವಾಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಹವಾಮಾನ ವೈಪರೀತ್ಯದ ನಡುವೆಯೂ ಭಾರತದ ಕೃಷಿ ಅಭಿವೃದ್ಧಿ | ಕಳೆದ ಮಾರ್ಚ್‌ನಲ್ಲಿ ಶೇ.4.1ರಷ್ಟು ಬೆಳವಣಿಗೆ |"