ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರದೇಶವಾದ ಕೊಲ್ಲಮೊಗ್ರದಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದೆ. ಕೃಷಿ ವ್ಯಾಪಕ ಹಾನಿಯಾಗುತ್ತಿದೆ. ಕೃಷಿಕರ ಈ ಸಮಸ್ಯೆಗೆ ಧ್ವನಿಯಾಗುವವರು ಯಾರು ?
ಕಳೆದ ಹಲಕವು ಸಮಯಗಳಿಂದ ಕೊಲ್ಲಮೊಗ್ರ, ಕಲ್ಮಕಾರು ಪ್ರದೇಶ ಹಲವು ಕಡೆಗಳಲ್ಲಿ ಕಾಡಾನೆ ಹಾವಳಿ ಇದೆ. ಹಗಲು ಹೊತ್ತಿನಲ್ಲಿಯೇ ಕಾಡಾನೆ ಕಾಣ ಸಿಕ್ಕಿದರೆ, ಈಗ ಕೃಷಿಯನ್ನೂ ವ್ಯಾಪಕವಾಗಿ ಹಾನಿ ಮಾಡುತ್ತಿದೆ. ಕಳೆದ ಕೆಲವು ಸಮಯಗಳ ಹಿಂದೆ ಕುಡಿಯುವ ನೀರಿನ ಪೈಪ್ ದುರಸ್ತಿ ಮಾಡಲು ತೆರಳಿದ ಕೃಷಿಕರೊಬ್ಬರಿಗೆ ಆನೆ ಧಾಳಿ ಮಾಡಿ ಗಾಯಗೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೀಗ ಈ ಪ್ರದೇಶದಲ್ಲಿ ಕೃಷಿಗೂ ಹಾನಿ ಮಾಡುತ್ತಿದೆ, ವ್ಯಾಪಕವಾಗಿ ಅಡಿಕೆ, ಬಾಳೆ, ತೆಂಗು ಸಹಿಉತ ಎಲ್ಲಾ ಕೃಷಿ ಹಾನಿಯಾಗುತ್ತಿದೆ. ಆನೆ ಬಂದಾಗ ಈಗ ತೋಟದ ಕಡೆಗೂ ಹೋಗಲು ಕೃಷಿಕರು ಭಯಪಡುತ್ತಿದ್ದಾರೆ. ಆಡಳಿತ, ಜನಪ್ರತಿನಿಧಿಗಳು ಇಷ್ಟಾದರೂ ಯಾವುದೇ ಧ್ವನಿ ಎತ್ತುತ್ತಿಲ್ಲ, ಈಗ ಸುಳ್ಯದ ಸಚಿವರೇ ಅಂದರೆ ಸರಕಾರವೇ ಇದ್ದರೂ ಯಾವುದೇ ಫಲವಿಲ್ಲ ಎಂದು ಕೃಷಿಕರು ಅಸಮಾಧಾನ ತೋಡುತ್ತಿದ್ದಾರೆ. ಆದಷ್ಟು ಶೀಘ್ರದಲ್ಲೇ ಆನೆ ಕಾಟಕ್ಕೆ ಪರಿಹಾರವಾಗಬೇಕಿದೆ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…