ಮಲೆನಾಡು ಹಾಗೂ ಕರಾವಳಿ ಭಾಗ ಸೇರಿದಂತೆ ಎಲ್ಲ ಭಾಗಗಳಲ್ಲೂ ಕಾಡು ಪ್ರಾಣಿಗಳ ಹಾವಳಿ ಕೃಷಿಗೆ ಹೆಚ್ಚಾಗಿದೆ. ಆದರೆ ಸರಕಾರದಿಂದ ಯಾವ ಪರಿಹಾರವೂ ಲಭ್ಯವಾಗುತ್ತಿಲ್ಲ. ಒಂದು ವೇಳೆ ಪರಿಹಾರ ಲಭ್ಯವಾಗುತ್ತಿದ್ದರೂ ರೈತರು ಸಾಕಷ್ಟು ಬಾರಿ ಇಲಾಖೆಗಳಿಗೆ ಅಲೆದಾಟ ಮಾಡಿ ಕಿಂಚಿತ್ ಪರಿಹಾರ ಲಭ್ಯವಾಗುತ್ತಿದೆ. ಹೀಗಾಗಿ ಇದೊಂದು ಸಂಕಷ್ಟದಿಂದ ರೈತರನ್ನು ಪಾರು ಮಾಡಬೇಕಿದೆ. ಸರಿಯಾಗಿ ಬೆಳೆ ಬೆಳೆಯಲು ಆಗದ ಮೇಲೆ ಮಾರಾಟ ಹೇಗೆ ಸಾಧ್ಯ ? ಇಂದು ರೈತ ಮಸೂದೆ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆ ಕಂಡುಬರುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ಬೆಳೆ ಬೆಳೆಯಲೇ ಆಗದೇ ಇದ್ದರೆ ರೈತ ಬದುಕು ಸಾಗಿಸುವುದು ಹೇಗೆ ? ಈ ಬಗ್ಗೆ ಸೂಕ್ತವಾದ ಕ್ರಮಗಳು ಅಗತ್ಯವಾಗಿದೆ.
ಈಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಪ್ರದೇಶದಲ್ಲಿ ರೈತರು ಅವರ ಜಮೀನಿನಲ್ಲಿ ಬೆಳೆದ ಬೆಳೆಗೆ ಕಾಡಾನೆ ಧಾಳಿ ಮಾಡಿದೆ. ಇದರಿಂದ ಕೃಷಿ ನಾಶವಾಗಿದೆ. ಕೊಡಗು ಜಿಲ್ಲೆಯ ಮರಿಕೆಯ ಕುಮುದಿನಿ ಅವರ ಕೃಷಿ ಜಾಗಕ್ಕೆ ಕೂಡಾ ಕಾಡಾನೆ ದಾಳಿ ಮಾಡಿ ಅಪಾರವಾದ ಕೃಷಿ ನಷ್ಟ ಗೊಂಡಿರುತ್ತದೆ. ಕೃಷಿ ಜಾಗದಲ್ಲಿ ಫಸಲು ಬರುತ್ತಿರುವ ತೆಂಗು, ಅಡಿಕೆ, ಬಾಳೆ ಕೃಷಿಯು ನಾಶಗೊಂಡಿರುತ್ತದೆ. ಕಳೆದ ತಿಂಗಳು ಸುಳ್ಯ ತಾಲೂಕಿನ ಮಂಡೆಕೋಲು, ಆಲೆಟ್ಟಿ ಪ್ರದೇಶದಲ್ಲಿ ಕಾಡಾನೆ ಧಾಳಿ ಮಾಡಿದರೆ , ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ, ಪುತ್ತೂರು ತಾಲೂಕಿನ ಗುಂಡ್ಯ ಮೊದಲಾದ ಕಡೆಗಳಲ್ಲೂ ಆನೆ ಹಾವಳಿ ಇದೆ. ಈ ಹಾನಿ ನೋಡುವಾಗ ಯಾವುದೇ ಕೃಷಿಕನಿಗೆ ಕರುಳು ಚುರುಕ್ ಅನ್ನುತ್ತದೆ. ನಿಜವಾಗೂ ಇದನ್ನೊಂದು ಹೋರಾಟ ಅಂಗವಾಗಿ ಮಾಡಬೇಕಿದೆ. ಕಾಡುಪ್ರಾಣಿಗಳಿಂದ ರಕ್ಷಣೆ ಹಾಗೂ ಸೂಕ್ತ ಪರಿಹಾರಗಳು ರೈತರ ಅಲೆದಾಟ ತಪ್ಪಿಸಿ ತಕ್ಷಣವೇ ಪರಿಹಾರ ಸಿಗುವಂತೆ ಮಾಡಬೇಕಿದೆ.
ಇಷ್ಟೇ ಅಲ್ಲ, ರೈತ ಬೆಳೆದ ಬೆಳೆಗಳು ವಿವಿಧ ರೋಗಗಳಿಂದ ನಾಶವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಶಿವಮೊಗ್ಗ, ಕೊಪ್ಪ ಮೊದಲಾದ ಪ್ರದೇಶಗಳಲ್ಲಿ ಅಡಿಕೆಗೆ ಹಳದಿ ರೋಗ ಬಾಧಿಸಿ ಈಗ ವ್ಯಾಪಿಸುತ್ತಲೇ ಇದೆ. ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಅಲ್ಲಲ್ಲಿ ಅಡಿಕೆ ಹಳದಿ ರೋಗ ಕಂಡುಬರುತ್ತಿದೆ. ಇದಕ್ಕೆ ಇದುವರೆಗೂ ಸೂಕ್ತ ಪರಿಹಾರ ಲಭ್ಯವಾಗಿಲ್ಲ. ಯಾವುದೇ ಇಲಾಖೆಗಳಿಂದಲೂ ಸೂಕ್ತವಾದ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂತಹ ರೋಗಗಳಿಗೂ ಸೂಕ್ತ ಪರಿಹಾರ ಹಾಗೂ ನ್ಯಾಯಯುತವಾದ ಪರಿಹಾರ ಮಾರ್ಗಗಳು ರೈತರಿಗೆ ಬೇಕಾಗಿದೆ. ಹೋರಾಟಗಳು ಈ ದಿಸೆಯಲ್ಲಿ ನಡೆಯಬೇಕಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ…
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…