ಭತ್ತದ ನಾಟಿಗೆ ಬಳಸುವ ರಸಗೊಬ್ಬರದ ದರಗಳು ವಿಪರೀತವಾಗಿ ಹೆಚ್ಚಳವಾಗಿರುವುದು ರೈತರಲ್ಲಿ ಆತಂಕ ಮನೆಮಾಡಿದೆ. ರಸಗೊಬ್ಬರ ದರ ಹೆಚ್ಚಳವು ಇತ್ತೀಚಿಗೆ ಕೃಷಿ ವೆಚ್ಚ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದೆ.
ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಡೇಟಾ ಪೋರ್ಟಲ್ ನಡೆಸಿರುವ ಅಧ್ಯಯನದ ಪ್ರಕಾರ 2008 ಮತ್ತು 2018 ರ ನಡುವೆ ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ರಸಗೊಬ್ಬರದ ದರಗಳ ಏರಿಕೆಯಿಂದ ಭತ್ತದ ಬೆಳೆ ವೆಚ್ಚ ಶೇ. 200 ರಷ್ಟು ಏರಿಕೆ ಕಂಡಿದೆ. ಕರ್ನಾಟಕದಲ್ಲಿ 2008 ರಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಭತ್ತದ ಬೆಳೆಗೆ ಅಗತ್ಯವಿದ್ದ ರಸಗೊಬ್ಬರದ ಕಾರ್ಯಕಾರಿ ವೆಚ್ಚ 4,000 ರೂಪಾಯಿಗಿಂತ ಕಡಿಮೆಯಿತು. ಆದರೆ ಅದು 018 ರ ವೇಳೆಗೆ ಬಹುತೇಕ 10,000 ರೂಪಾಯಿ ಗಡಿಯತ್ತ ನುಸುಳಿದೆ. ಗರಿಷ್ಠ ಪ್ರಮಾಣದಲ್ಲಿ ಶೇ. ೦3 ರಷ್ಟು ಭತ್ತದ ಬೆಳೆಗೆ ಬಳಸುವ ರಸಗೊಬ್ಬರ ನಿರ್ವಹಣಾ ದರ ಏರಿಕೆಯಾಗಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಭತ್ತದ ಬೆಳೆಗೆ ಬಳಸುವ ರಸಗೊಬ್ಬ ನಿರ್ವಹಣಾ ದರಗಳು ಹೆಚ್ಚಳವಾಗಿದ್ದ ಕಾರಣದಿಂದ ಬೆಳೆ ಬೆಲೆ ಸಹ ಅಧಿಕವಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.
ಭಾರತವು ಕಾಫಿ ಉತ್ಪಾದನೆಯಲ್ಲಿ ಏಳನೇ ಅತಿ ದೊಡ್ಡ ಮತ್ತು ಜಾಗತಿಕವಾಗಿ ಐದನೇ ಅತಿ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ.…
ಕಳೆದ ಕೆಲವು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ.…
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ…
ಸ್ನಾನದ ಮೂಲಕವೂ ನದಿಯನ್ನು ಆರಾಧಿಸಬಹುದೆಂಬ ಭಾರತೀಯ ಕಲ್ಪನೆ ನಿಜಕ್ಕೂ ಅದ್ಭುತವಾದುದು ಎಂಬುದಾಗಿ ಎರಿಕ್…
ತಾಪಮಾನ ಅಧಿಕವಾಗಿದ್ದರೂ, ರಾತ್ರಿಯ ವೇಳೆ ತಂಪು ವಾತಾವರಣ ಇರುವುದರಿಂದ ಮಳೆಯ ಸಾಧ್ಯತೆ ಕ್ಷೀಣಿಸುತ್ತಿದೆ.