ಮೋಡ ಕವಿದ ವಾತಾವರಣದಿಂದ ಶುಂಠಿ ಸಂಸ್ಕರಣೆಗೆ ಅಡ್ಡಿ | ಆತಂಕದಲ್ಲಿ ರೈತರು

ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಇದೆ. ಆಗಾಗ ಸುರಿಯುತ್ತಿರುವ ಮಳೆಯಿಂದ ಶುಂಠಿ ಸಂಸ್ಕರಣೆಗೆ ಅಡ್ಡಿಯಾಗುತ್ತಿದೆ. ಇದು ರೈತರನ್ನು, ಖರೀದಿದಾರರನ್ನು ಆತಂಕಕ್ಕೆ ತಳ್ಳಿದೆ. ಶಿರಸಿ ತಾಲೂಕಿನ ಪೂರ್ವಭಾಗ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ ಶುಂಠಿ ಬೆಳೆಗಾರರ ಸಂಖ್ಯೆ ಹೆಚ್ಚಿದೆ.

Advertisement
Advertisement

250 ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯ ರೈತರು ಈ ಬೆಳೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಫಸಲು ಕೀಳುವ ಅವಧಿಯಲ್ಲಿ ಅನಿಶ್ಚಿತ ವಾತಾವರಣ ಎದುರಾಗಿದ್ದರಿಂದ ದರದಲ್ಲೂ ಏರುಪೇರು ಉಂಟಾಗುವ ಆತಂಕ ರೈತರನ್ನು ಕಾಡುತ್ತಿದೆ. ಮಾರ್ಚ್ ಬಳಿಕ ರೈತರು ಗದ್ದೆಯಿಂದ ಶುಂಠಿ ಕೀಳುತ್ತಾರೆ. ಕೆಲವರು ಹಸಿ ಶುಂಠಿಯನ್ನೇ ಮಾರಾಟ ಮಾಡಿದರೆ, ಇನ್ನೂ ಹಲವರು ಶುಂಠಿ ಒಣಗಿಸಿ ಮಾರಾಟ ಮಾಡುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹಸಿ ಶುಂಠಿ ಸರಾಸರಿ ಪ್ರತಿ ಕ್ವಿಂಟಲ್‍ಗೆ ₹1,500 ರಿಂದ ₹2,200 ದರಕ್ಕೆ ಮಾರಾಟ ಕಾಣುತ್ತಿದೆ. ಒಣ ಶುಂಠಿ ಕೆಜಿಗೆ ₹120ರ ದರದ ಆಸುಪಾಸಿನಲ್ಲಿದೆ.

Advertisement

ಮೋಡ ಕವಿದ ವಾತಾವರಣ, ಅಕಾಲಿಕ ಮಳೆಯಿಂದ ಶುಂಠಿ ಸಂಸ್ಕರಣೆಗೆ ಅಡ್ಡಿಯಾಗುತ್ತಿದೆ. ಒಣಗಲು ಇಟ್ಟ ಶುಂಠಿ ಮಳೆ ನೀರಿಗೆ ಸಿಲುಕಿ ಹಾಳಾಗುತ್ತಿದೆ. ಹೀಗಾಗಿ ಖರೀದಿದಾರರು ಹಸಿ ಶುಂಠಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ನೆರೆಯ ಸೊರಬ, ಆನವಟ್ಟಿಯಿಂದ ಬರುತ್ತಿದ್ದ ವ್ಯಾಪಾರಿಗಳ ಸಂಖ್ಯೆಯಲ್ಲೀ ಇಳಿಕೆಯಾಗಿದೆ. ರೈತರು ಹಸಿ ಶುಂಠಿ ಮಾರಲಾಗದೆ, ಶುಂಠಿ ಒಣಗಿಸಲಾಗದೆ ಸಂದಿಗ್ಧತೆಗೆ ಸಿಲುಕಿದ್ದಾರೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಮೋಡ ಕವಿದ ವಾತಾವರಣದಿಂದ ಶುಂಠಿ ಸಂಸ್ಕರಣೆಗೆ ಅಡ್ಡಿ | ಆತಂಕದಲ್ಲಿ ರೈತರು"

Leave a comment

Your email address will not be published.


*