ದೇಶದಲ್ಲಿ ಈ ಬಾರಿಯೂ ರಸಗೊಬ್ಬರದ ಕೊರತೆ ಕಾಡುವ ಆತಂಕ ಎದುರಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಹಾಗೂ ಹಣದುಬ್ಬರದಿಂದಾಗಿ ರಸಗೊಬ್ಬರ ಬೆಲೆಯೂ ಹೆಚ್ಚಾಗುವ ಸಾಧ್ಯತೆಯಿದೆ.
ಕಳೆದ ತಿಂಗಳ ಅಂತ್ಯಕ್ಕೆ ಆಹಾರ ಹಣದುಬ್ಬರ ಪ್ರಮಾಣ 17 ತಿಂಗಳ ಗರಿಷ್ಠ ಶೇ.6.95 ರ ವರೆಗೆ ಏರಿಕೆಯಾಗಿರುವಂತೆಯೇ ಹೊಸ ಸಮಸ್ಯೆ ಎದುರಾಗಿದೆ. ಕೃಷಿಗೆ ಮುಖ್ಯವಾಗಿ ಫಾಸ್ಫೇಟ್ ಮತ್ತು ಪೊಟ್ಯಾಶ್ ಕೊರತೆಯಿದೆ. ಬೆಲೆಯೇರಿಕೆ ಆಗಿರುವುದರಿಂದ ಇವನ್ನು ಆಮದು ಮಾಡಿ ಕೊಳ್ಳಲು ಕಂಪೆನಿಗಳು ಹಿಂಜರಿಯುತ್ತಿವೆ. ರೈತರು ಜೂನ್‌ನಿಂದ ಮುಂಗಾರು ಬೆಳೆ ಬಿತ್ತನೆ ಆರಂಭಿಸುತ್ತಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement

ಮಿರರ್ ಡೆಸ್ಕ್ – ಮಿರರ್ ನ್ಯೂಸ್ ನೆಟ್ವರ್ಕ್
Be the first to comment on "ರಸಗೊಬ್ಬರದ ಕೊರತೆ ಆತಂಕದಲ್ಲಿ ರೈತರು"