ಪ್ರಕೃತಿ ವಿಕೋಪದ ನಡುವೆಯೂ ರಾಜ್ಯದಲ್ಲಿ ರೈತರು ಬೆಳೆಸಿದ ಮೆಕ್ಕೆಜೋಳಕ್ಕೆ ಭರ್ಜರಿಯಾದ ಫಸಲು ಬಂದಿರುವುದರಿಂದ ರೈತರೆಲ್ಲರ ಮುಖದಲ್ಲಿ ಮಂದಹಾಸವೂ ಬೀರಿದೆ. ಮುಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆಯಿಂದ ಬೆಳೆ ನೀರಿನಿಂದ ಜಲಾವೃತವಾಗಿ ಹಾಳಾಗಿತ್ತು. ಆದರೀಗ ರಾಯಚೂರು ಜಿಲ್ಲೆಯಾದ್ಯಂತ ಮೆಕ್ಕೆಜೋಳ ಭರ್ಜರಿಯಾಗಿ ಬೆಳೆದಿದ್ದು, ರೈತರಿಗೆ ಈ ಬಾರಿ ಉತ್ತಮ ಆದಾಯ ತಂದು ಕೊಡುವ ನಿರೀಕ್ಷೆಯಿದೆ.
ಈ ಬಾರಿ ರಾಯಚೂರು ಜಿಲ್ಲೆಯಾದ್ಯಂತ ಒಟ್ಟು 71 ಸಾವಿರ ಹೆಕ್ಟೆರ್‌ನಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಉತ್ತಮ ಬೆಲೆಯಿದೆ. ಮಾತ್ರವಲ್ಲ ಬಿಳಿ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ 3500 ಹಾಗೂ ಹೈಬಿಡ್ರ ಜೋಳಕ್ಕೆ 1600 ಇದೆ. ರೈತರಿಗೆ ಮೆಕ್ಕಜೋಳದಿಂದ ಹೆಚ್ಚು ಫಲ ಸಿಕ್ಕಿರುವುದು ಮಾತ್ರವಲ್ಲದೆ ಸರ್ಕಾರ ಖರೀದಿ ಕೇಂದ್ರ ಸ್ಥಾಪನೆ ಮಾಡಿರುವುದರಿಂದ ಈ ಭಾರಿ ಮೆಕ್ಕೆಜೋಳ ಬೆಳೆದ ರೈತರಲ್ಲಿ ನೆಮ್ಮದಿ ತಂದಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel