ಕೃಷಿ ವಿಮೆ | ಶಿವಮೊಗ್ಗದಲ್ಲಿ 1534.04 ಲಕ್ಷಗಳ ವಿಮಾ ಮೊತ್ತ ರೈತರ ಖಾತೆಗೆ ಜಮೆ |

ನೈಸರ್ಗಿಕ ವಿಪತ್ತುಗಳಿಂದಾಗುವ ಸಷ್ಟದಿಂದ ರೈತರನ್ನು ರಕ್ಷಿಸಲು ಕರ್ನಾಟಕ ರೈತ ಸುರಕ್ಷಾ ಪಿಎಂ ಫಸಲ್‌ಬಿಮಾ ಯೋಜನೆಯನ್ನು ಸರ್ಕಾರವು ಜಾರಿಗೊಳಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಗ್ರಿಕಲ್ಚರಲ್ ಇನ್ಯೂರೆನ್ಸ್ ಕಂಪೆನಿಯವರ ಸಹಯೋಗದಿಂದ 2021-22ನೇ ಸಾಲಿನ ಮುಂಗಾರು, ಹಿಂಗಾರು, ಬೇಸಿಗೆಯಲ್ಲಿ ನಷ್ಟವನ್ನು ಅನುಭವಿಸಿದವರಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಕಿರಣ್‌ಕುಮಾರ್ ತಿಳಿಸಿದ್ದಾರೆ.

Advertisement

2019-20 ಸಾಲಿನ ಮುಂಗಾರು ಹಂಗಾಮಿನಲ್ಲಿ 16764 ರೈತರ ಅರ್ಜಿಗಳಿಗೆ ರೂ. 1534.04 ಲಕ್ಷಗಳ ವಿಮಾ ಮೊತ್ತ ರೈತರ ಖಾತೆಗೆ ಪಾವತಿಯಾಗಿದ್ದು, ನೊಂದಾಯಿತ ಬೆಳೆ ಪರಿಶೀಲನೆಗೆ ಬಾಕಿಯಾಗಿರುವ 379 ಸಂಖ್ಯೆ ರೈತರ ಅರ್ಜಿಗಳಿಗೆ ರೂ.31,49 ಲಕ್ಷಗಳ ವಿಮಾ ಮೊತ್ತ ಪಾವತಿಗೆ ಬಾಕಿಯಿರುತ್ತದೆ. ಹಾಗೂ 2019-20 ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ 34 ಅರ್ಜಿಗಳಿಗೆ ರೂ. 245 ಲಕ್ಷಗಳು 1 ಮೊತ್ತ ಪಾವತಿಯಾಗಿರುತ್ತದೆ. ನೋಂದಾಯಿತ ಬೆಳೆ ಪರಿಶೀಲನೆ ಬಾಕಿಯಿರುವ 10 ಸಂಖ್ಯೆ ರೈತರ ಅರ್ಜಿಗಳಿಗೆ ರೂ.049 ಲಕ್ಷಗಳ ವಿಮಾ ಮೊತ್ತ ಪಾವತಿಗೆ ಬಾಕಿಯಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Advertisement

ಬಿತ್ತನೆ ನಾಟಿ ಮಾಡುವುದಕ್ಕಿಂದ ಮುಂಚಿತವಾಗಿಯೇ ನೋಂದಾಯಿಸಲು ಸಹ ಅವಕಾಶವಿರುತ್ತದೆ. ಬೆಳೆ ಸಾಲ ಪಡೆಯುವ ರೈತರು ಬೆಳೆ ವಿಮೆ ಯೋಜನೆಯಡಿ ಕಡ್ಡಾಯವಾಗಿ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಕೃಷಿ ವಿಮೆ | ಶಿವಮೊಗ್ಗದಲ್ಲಿ 1534.04 ಲಕ್ಷಗಳ ವಿಮಾ ಮೊತ್ತ ರೈತರ ಖಾತೆಗೆ ಜಮೆ |"

Leave a comment

Your email address will not be published.


*