ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಎಐ ಚಾಟ್ಬೊಟ್ಗೆ#AI Chat bot ಚಾಲನೆ ನೀಡಿದ್ದಾರೆ. ಕೃಷಿ ಇಲಾಖೆ ಕಾರ್ಯದರ್ಶಿ ಮನೋಜ್ ಅಹುಜಾ, ಹೆಚ್ಚುವರಿ ಕೃಷಿ ಕಾರ್ಯದರ್ಶಿ ಪ್ರಮೋದ್ ಮೆಹೆರ್ದಾ ಉಪಸ್ಥಿತಿಯಲ್ಲಿ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಈ ಚಾಟ್ಬೋಟ್ ಅನಾವರಣಗೊಳಿಸಿದ್ದಾರೆ.
ಪಿಎಂ ಕಿಸಾನ್ ಯೋಜನೆ ವಿಚಾರದಲ್ಲಿ ರೈತರಿಗೆ ಎದುರಾಗುವ ಯಾವ ಸಮಸ್ಯೆ ಮತ್ತು ಗೊಂದಲಕ್ಕೂ ಎಐ ಚಾಟ್ಬೋಟ್ ಉತ್ತರಿಸುತ್ತದೆ. ಪಿಎಂ ಕಿಸಾನ್ ಮೊಬೈಲ್ ಆ್ಯಪ್ನಲ್ಲಿ ಈ ಬೋಟ್ ಅನ್ನು ಅಳವಡಿಸಲಾಗಿದೆ. ವಿವಿಧ ಭಾಷೆಗಳಲ್ಲಿ ಇದರ ಸೇವೆ ಲಭ್ಯ ಇದೆ. ಸದ್ಯಕ್ಕೆ ಇಂಗ್ಲೀಷ್, ಹಿಂದಿ ಅಲ್ಲದೇ, ಬಂಗಾಳಿ, ಒಡಿಯಾ ಮತ್ತು ತಮಿಳು ಭಾಷೆಗಳಲ್ಲಿ ಎಐ ಚಾಟ್ಬೋಟ್ ಸಂವಹನ ಮಾಡಬಲ್ಲುದು. ಮುಂದಿನ ದಿನಗಳಲ್ಲಿ ಎಲ್ಲಾ 22 ಅಧಿಕೃತ ಭಾಷೆಗಳಲ್ಲೂ ಇದು ಲಭ್ಯ ಇರುತ್ತದೆ ಎಂದು ಹೇಳಲಾಗಿದೆ. ಈ ಚಾಟ್ಬೋಟ್ ಅನ್ನು ಭಾಷಿಣಿ ಮತ್ತು ಏಕ್ಸ್ಟೆಪ್ ಫೌಂಡೇಶನ್ ಸಂಸ್ಥೆಗಳ ಸಹಾಯದಿಂದ ಅಭಿವೃದ್ಧಿಪಡಿಸಲಾಗಿದೆ. ‘ಪಿಎಂ ಕಿಸಾನ್ ಸ್ಕೀಮ್ನ ಕ್ಷಮತೆ ಹೆಚ್ಚಿಸಲು ಮತ್ತು ಅದರ ವ್ಯಾಪ್ತಿ ವಿಸ್ತರಿಸಲು ಎಐ ಚಾಟ್ಬೋಟ್ ಸಹಾಯಕವಾಗಲಿದೆ. ರೈತರ ಗೊಂದಲ ಮತ್ತು ಪ್ರಶ್ನೆಗಳಿಗೆ ಈ ಚಾಟ್ಬೋಟ್ನಿಂದ ನಿಖರ ಮತ್ತು ಸ್ಪಷ್ಟ ಉತ್ತರ ಸಿಗುತ್ತದೆ’ ಎಂದು ಕೃಷಿ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ 2019ರಲ್ಲಿ ಆರಂಭವಾದ ಯೋಜನೆ. ಕೃಷಿಕರಿಗೆ ವ್ಯವಸಾಯ ಮಾಡಲು ಅನುಕೂಲವಾಗಲೆಂದು ಸರ್ಕಾರ ಪ್ರತೀ ನಾಲ್ಕು ತಿಂಗಳಿಗೊಮ್ಮೆ 2,000 ರೂ ಧನಸಹಾಯ ಒದಗಿಸುತ್ತದೆ. ವರ್ಷಕ್ಕೆ 6,000 ರೂ ಹಣವು ಫಲಾನುಭವಿಗಳ ಖಾತೆಗೆ ನೇರವಾಗಿ ಬಂದು ಬೀಳುತ್ತದೆ. ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಈವರೆಗೂ 10 ಕೋಟಿಗೂ ಹೆಚ್ಚು ಮಂದಿ ರೈತರು ಪಡೆದುಕೊಂಡಿದ್ದಾರೆ. ಈವರೆಗೆ 2,000 ರೂಗಳ 14 ಕಂತುಗಳನ್ನು ವಿತರಿಸಲಾಗಿದೆ. ಪಿಎಂ ನರೇಂದ್ರ ಮೋದಿ 14ನೇ ಕಂತಿನ ಹಣವನ್ನು ಜುಲೈ 27ರಂದು ಬಿಡುಗಡೆ ಮಾಡಿದ್ದರು. ಒಟ್ಟು 9.54 ಕೋಟಿ ಮಂದಿ ರೈತರ ಖಾತೆಗಳಿಗೆ ಸರ್ಕಾರ ಹಣ ಹಾಕಿತು. ಆಗಸ್ಟ್ನಿಂದ ನವೆಂಬರ್ವರೆಗಿನ ಅವಧಿಯಲ್ಲಿ 15ನೇ ಕಂತಿನ ಹಣ ಬರಲಿದೆ. ನವೆಂಬರ್ ತಿಂಗಳಲ್ಲಿ ಮುಂದಿನ ಕಂತು ಬಿಡುಗಡೆ ಆಗುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…