ಕೃತಕ ಬುದ್ದಿಮತ್ತೆಯಲ್ಲಿ ANAB ಸಂಸ್ಥೆಯಿಂದ ಮಾನ್ಯತೆ ಪಡೆದ ವಿಶ್ವದ ಪ್ರಥಮ ಎಐ ಸುರಕ್ಷತಾ ಪ್ರಮಾಣೀಕರಣ ಕಾರ್ಯಕ್ರಮಕ್ಕೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮಹಾ ನಿರ್ದೇಶಕರಾದ ಡಾ.ಸಂಜಯ್ ಬಾಹ್ಲ್ ಬೆಂಗಳೂರಿನಲ್ಲಿ ಚಾಲನೆ ನೀಡಿದರು.
ಬಳಿಕ ಅವರು, ಮಾಹಿತಿ ತಂತ್ರಜ್ಞಾನ ಬಳಕೆ ಮೂಲಕ ಡಿಜಿಟಲ್ ಸೇವೆ, ಜ್ಞಾನ ಮತ್ತು ಮಾಹಿತಿಯ ಸುರಕ್ಷತೆಯೊಂದಿಗೆ ಪ್ರತಿಯೊಬ್ಬ ನಾಗರಿಕರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಆರಂಭಿಸಿದೆ ಎಂದು ತಿಳಿಸಿದರು. ಇತ್ತೀಚಿಗೆ ಬಿಡುಗಡೆಯಾದ ಜಾಗತಿಕ ಸೈಬರ್ ಸುರಕ್ಷತಾ ಸೂಚ್ಯಂಕ 2024ರಲ್ಲಿ ಭಾರತ 98.49 ಅಂಕ ಪಡೆದಿದ್ದು, ಟೈಯರ್ 1 ಸ್ಥಾನಮಾನ ಪಡೆದಿದೆ. ಆರೋಗ್ಯ ಸೇರಿದಂತೆ ಎಐ ನಲ್ಲಿ ಪ್ರಸ್ತುತ 500 ನವೋದ್ಯಮಗಳಿದ್ದು, ಎಐ ಸುರಕ್ಷತೆ, ಭದ್ರತೆಗಾಗಿ ಸರ್ಕಾರ ಹಲವು ಕ್ರಮ ವಹಿಸಿದೆ ಎಂದು ಹೇಳಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel