ಪ್ರಾಣಕ್ಕೆ ಕುತ್ತು ತರುತ್ತಿರುವ ವಾಯು ಮಾಲಿನ್ಯ | 2021ರಲ್ಲಿ ವಾಯುಮಾಲಿನ್ಯದಿಂದ ಭಾರತದಲ್ಲಿ 21 ಲಕ್ಷ ಜನರ ಸಾವು..! | ಹೆಲ್ತ್ ಎಫೆಕ್ಟ್ಸ್ ಇನ್ ಸ್ಟಿಟ್ಯೂಟ್ ವರದಿ |

June 20, 2024
12:49 PM

ವಾಯುಮಾಲಿನ್ಯದಿಂದ(Air Pollution) 2021ರಲ್ಲಿ ಭಾರತ(India) ಮತ್ತು ಚೀನಾಗಳಲ್ಲಿ(China) ಕ್ರಮವಾಗಿ 21 ಲಕ್ಷ ಮತ್ತು 23 ಲಕ್ಷ ಜನ ಸಾವಿಗೀಡಾಗಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆಯಾದ ವರದಿ(Report) ತಿಳಿಸಿದೆ. ವಿಶ್ವಾದ್ಯಂತ 2021ರಲ್ಲಿ ವಾಯುಮಾಲಿನ್ಯದಿಂದ 8.1 ಮಿಲಿಯನ್ ಜನ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ. ಯುನಿಸೆಫ್(UNISEF) ಸಹಭಾಗಿತ್ವದಲ್ಲಿ ಯುಎಸ್(US) ಮೂಲದ ಸ್ವತಂತ್ರ ಸಂಶೋಧನಾ ಸಂಸ್ಥೆಯಾದ ಹೆಲ್ತ್ ಎಫೆಕ್ಟ್ಸ್ ಇನ್ ಸ್ಟಿಟ್ಯೂಟ್ (HEI) ಪ್ರಕಟಿಸಿದ ವರದಿಯಲ್ಲಿ, ವಾಯುಮಾಲಿನ್ಯವು 2021 ರಲ್ಲಿ ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 1,69,400 ಮಕ್ಕಳ ಸಾವಿಗೆ(Children death) ಕಾರಣವಾಗಿದೆ ಎಂದು ಹೇಳಿದೆ.

Advertisement

1,14,100 ಮಕ್ಕಳ ಸಾವಿನೊಂದಿಗೆ ನೈಜೀರಿಯಾ ನಂತರದ ಸ್ಥಾನದಲ್ಲಿದೆ. ಹಾಗೆಯೇ ಪಾಕಿಸ್ತಾನದಲ್ಲಿ 68,100, ಇಥಿಯೋಪಿಯಾದಲ್ಲಿ 31,100 ಮತ್ತು ಬಾಂಗ್ಲಾದೇಶದಲ್ಲಿ 19,100 ಮಕ್ಕಳು ವಾಯುಮಾಲಿನ್ಯಕ್ಕೆ ಬಲಿಯಾಗಿವೆ. ದಕ್ಷಿಣ ಏಷ್ಯಾದಲ್ಲಿನ ಸಾವುಗಳಿಗೆ ವಾಯುಮಾಲಿನ್ಯವು ಪ್ರಮುಖ ಅಪಾಯಕಾರಿ ಅಂಶವಾಗಿದೆ. ಅಧಿಕ ರಕ್ತದೊತ್ತಡ, ಆಹಾರ ಶೈಲಿ ಮತ್ತು ತಂಬಾಕಿನಿಂದ ಸಂಭವಿಸುವ ಸಾವುಗಳು ನಂತರದ ಸ್ಥಾನದಲ್ಲಿವೆ ಎಂದು ವರದಿ ಹೇಳಿದೆ.

“2021 ರಲ್ಲಿ ವಾಯುಮಾಲಿನ್ಯದಿಂದ ಸಂಭವಿಸಿದ ಸಾವುಗಳ ಸಂಖ್ಯೆ ಈ ಹಿಂದಿನ ಯಾವುದೇ ವರ್ಷಕ್ಕಿಂತ ಹೆಚ್ಚಾಗಿದೆ. ತಲಾ 1 ಬಿಲಿಯನ್ ಜನಸಂಖ್ಯೆಯ ಭಾರತ ಹಾಗೂ ಚೀನಾಗಳಲ್ಲಿ ವಾಯುಮಾಲಿನ್ಯದಿಂದ ಕ್ರಮವಾಗಿ 2.1 ಮಿಲಿಯನ್ ಮತ್ತು 2.3 ಮಿಲಿಯನ್ ಸಾವು ಸಂಭವಿಸಿವೆ. ಇದು ಒಟ್ಟು ಜಾಗತಿಕ ವಾಯುಮಾಲಿನ್ಯದ ಕಾರಣದಿಂದ ಉಂಟಾದ ಸಾವಿನ ಶೇಕಡಾ 54 ರಷ್ಟಿದೆ.” ಎಂದು ವರದಿ ತಿಳಿಸಿದೆ.

ವಾಯುಮಾಲಿನ್ಯದಿಂದ ಹೆಚ್ಚು ಬಾಧೆಗೊಳಗಾದ ಇತರ ದೇಶಗಳು ಹೀಗಿವೆ: ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನ (2,56,000 ಸಾವುಗಳು), ಬಾಂಗ್ಲಾದೇಶ (2,36,300) ಮತ್ತು ಮ್ಯಾನ್ಮಾರ್ (1,01,600 ಸಾವುಗಳು). ಆಗ್ನೇಯ ಏಷ್ಯಾದಲ್ಲಿ ಇಂಡೋನೇಷ್ಯಾ (2,21,600 ಸಾವುಗಳು), ವಿಯೆಟ್ನಾಂ (99,700 ಸಾವುಗಳು) ಮತ್ತು ಫಿಲಿಪೈನ್ಸ್ (98,209); ಮತ್ತು ಆಫ್ರಿಕಾದಲ್ಲಿ ನೈಜೀರಿಯಾ (2,06,700 ಸಾವುಗಳು) ಮತ್ತು ಈಜಿಪ್ಟ್ (1,16,500 ಸಾವುಗಳು).

ಒಟ್ಟಾರೆಯಾಗಿ, ಪಿಎಂ 2.5 ಮತ್ತು ಓಝೋನ್ ನಿಂದ ಉಂಟಾಗುವ ವಾಯುಮಾಲಿನ್ಯದಿಂದ 2021 ರಲ್ಲಿ 8.1 ಮಿಲಿಯನ್ ಸಾವು ಸಂಭವಿಸಿವೆ ಎಂದು ಅಂದಾಜಿಸಲಾಗಿದೆ. ಇದು ಒಟ್ಟು ಜಾಗತಿಕ ಸಾವುಗಳ ಶೇಕಡಾ 12 ರಷ್ಟಿದೆ. ಈ ಜಾಗತಿಕ ವಾಯುಮಾಲಿನ್ಯದ ಸಾವುಗಳಲ್ಲಿ 90 ಪ್ರತಿಶತಕ್ಕೂ ಹೆಚ್ಚು ಅಂದರೆ 7.8 ಮಿಲಿಯನ್ ಜನರು ಪಿಎಂ 2.5 ವಾಯುಮಾಲಿನ್ಯದ ಕಾರಣದಿಂದ ಸಾವಿಗೀಡಾಗಿದ್ದಾರೆ.

  • ಅಂತರ್ಜಾಲ ಮಾಹಿತಿ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಒಂದು ವರ್ಷದಲ್ಲಿ 5600 ಕಿ.ಮೀ. ಹೆದ್ದಾರಿ ನಿರ್ಮಾಣ |
April 3, 2025
7:42 AM
by: The Rural Mirror ಸುದ್ದಿಜಾಲ
81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ
April 3, 2025
7:32 AM
by: The Rural Mirror ಸುದ್ದಿಜಾಲ
ಮೇಷ ರಾಶಿಯವರಿಗೆ ಬಹಳ ಶುಭ ದಿನ
April 3, 2025
7:05 AM
by: ದ ರೂರಲ್ ಮಿರರ್.ಕಾಂ
ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group