ಈ ದಿನಗಳಲ್ಲಿ ನಾವು ಸೇವಿಸುವ ಬಹಳಷ್ಟು ಫಾಸ್ಟ್ ಫುಡ್ ನಲ್ಲಿ ಅಜಿನೋ ಮೋಟೋ ಬಳಸುತ್ತಾರೆ. ಈ ಉಪ್ಪನ್ನು ಭಾರತಕ್ಕೆ ಚೀನಾದಿಂದ ಗೊಬ್ಬರದ ಹೆಸರಿನಲ್ಲಿ ಆಮದು ಮಾಡಿಕೊಳ್ಳಲಾಗುವುದು. ನೀವು ಚೈನೀಸ್ ಫುಡ್ ಪ್ರಿಯರಾಗಿದ್ರೆ.. ಅದನ್ನು ತಿನ್ನುವುದನ್ನು ಇಂದೇ ಬಿಟ್ಟು ಬಿಡಿ. ಸಾಮಾನ್ಯವಾಗಿ ಫಾಸ್ಟ್ ಫುಡ್ಗಳಾ ನೂಡಲ್ಸ್, ಗೋಬಿ, ಫ್ರೈಡ್ ರೈಸ್ ಅಥವಾ ಯಾವುದೇ ಇನ್ನಿತರ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬಾರದು ಎಂದು ಸಲಹೆ ನೀಡುತ್ತಾರೆ. ಆ ಸಲಹೆಗೆ ಅಜಿನೊಮೊಟೊ ಎಂಬ ಉಪ್ಪಿನಂತಹ ಅಂಶವೇ ದೊಡ್ಡ ಕಾರಣ.
ಅಜಿನೊಮೊಟೊ ಅಥವಾ ಟೇಸ್ಟಿಂಗ್ ಪೌಡರ್ ಚೀನೀ ಪಾಕಪದ್ಧತಿಯ ಮೂಲತತ್ವವಾಗಿದೆ. ಏಕೆಂದರೆ ಇದು ಪರಿಮಳವನ್ನು ಹೆಚ್ಚಿಸುವುದಲ್ಲದೆ ವಿಶಿಷ್ಟವಾದ ಸುವಾಸನೆ, ರುಚಿಯನ್ನು ನೀಡುತ್ತದೆ. ತಾಂತ್ರಿಕವಾಗಿ ಹೇಳುವುದಾದರೆ ಅಜಿನೊಮೊಟೊ ಗ್ಲುಟಾಮೇಟ್ ಸೋಡಿಯಂ ಮತ್ತು ಗ್ಲುಟಾಮಿಕ್ ಆಸಿಡ್‌ನಿಂದ ತಯಾರಿಸಲ್ಪಟ್ಟ ಒಂದು ಸಂಯುಕ್ತವಾಗಿದೆ. ಸಸ್ಯ ಆಧಾರಿತ ಪದಾರ್ಥಗಳಾದ ಸಕ್ಕರೆ ಬೀಟ್, ಕಬ್ಬು, ಕಾರ್ನ್ ಅಥವಾ ಕಸಾವದಿಂದ ತಯಾರಿಸಲಾಗುತ್ತದೆ. ಇದು ನೈಸರ್ಗಿಕವಾಗಿ ಕಂಡುಬರುವ ಅಮೈನೊ ಆಸಿಡ್. ಇದನ್ನು ಸಾಮಾನ್ಯವಾಗಿ ಏಷ್ಯನ್ ಆಹಾರಗಳಾದ ನೂಡಲ್ಸ್, ಸೂಪ್ ಮತ್ತು ಫ್ರೈಡ್ ರೈಸ್‌ನಲ್ಲಿ ಹೆಚ್ಚು ಬಳಸಲಾಗುತ್ತದೆ.
ಪೌಷ್ಟಿಕತಜ್ಞ ಮನೀಷಾ ಚೋಪ್ರಾ ಅವರ ಪ್ರಕಾರ, ಅಜಿನೊಮೊಟೊದ ಪೌಷ್ಠಿಕಾಂಶದ ಮೌಲ್ಯ ನೋಡುವುದಾದರೆ 1000 ಗ್ರಾಂ ಅಜಿನೊಮೊಟೊದಲ್ಲಿ 12,300 ಮಿಗ್ರಾಂ ಸೋಡಿಯಂ, 21.2 ಮಿಗ್ರಾಂ ಕ್ಯಾಲ್ಸಿಯಂ ಮತ್ತು 0.4 ಮಿಗ್ರಾಂ ಐರನ್ ಅಂಶವಿದೆ. ಅಂದರೆ ಅಜಿನೊಮೊಟೊದಲ್ಲಿ ಯಾವುದೇ ವಿಟಮಿನ್ಸ್, ಪ್ರೋಟೀನ, ಫ್ಯಾಟ್ ಹಾಗೂ ಇತರೆ ಆರೋಗ್ಯಕರ ಅಂಶಗಳು ಇಲ್ಲ ಎಂದು ತಿಳಿಸಿದ್ದಾರೆ.
ಭಾರತದ ಯುವಕರು ಬಿಪಿ ಮತ್ತು ಮಧುಮೇಹಕ್ಕೆ ತುತ್ತಾಗುವಂತೆ ಮಾಡಲು ಚೀನಾದ ವ್ಯವಸ್ಥಿತ ಯೋಜನೆಯ ಸಂಚು ಇದು ಎಂದು ನಂಬಲಾಗಿದೆ. ಈ ಉಪ್ಪನ್ನು ಇತ್ತೀಚಿನ ದಿನಗಳಲ್ಲಿ ಪ್ರತಿ ಸಮಾರಂಭದಲ್ಲಿ ಅಡುಗೆಗಳ ಮಾಡುವ ಅಡುಗೆಯವರು ನವರು ಸಹ ಬಳಸುತ್ತಾರೆ. ಚೀನಾದಲ್ಲಿ ಇದನ್ನು ಬಳಸಿದರೆ ಮರಣದಂಡನೆಯನ್ನು ವಿಧಿಸುವ ಶಿಕ್ಷೆಯ ಸಾಧ್ಯತೆಯೂ ಇದೆ. ಈ ಉಪ್ಪನ್ನು ಬಳಸಿ ಮಾಡಿದ ಅಡುಗೆಯನ್ನು 40 ದಿನ ತಿಂದರೆ ಜೀವನ ಪರ್ಯಂತ ಬಿಪಿ, ಶುಗರ್ ನಿಂದ ಬಳಲುವುದು ಖಚಿತ. ಮಾಧ್ಯಮಗಳಲ್ಲಿ ಈ ವಿಷಯ ಚರ್ಚಿಸಲ್ಪಟ್ಟು , ಇದರ ವಿರುದ್ಧ ಮಹಾ ಚಳವಳಿ ನಡೆಸದ ಹೊರತು ಈ ದೇಶದಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದು ಕೆಲವು ಸಾಮಾಜಿಕ ಸಂಘಟನೆಗಳು ಚರ್ಚೆಗಳನ್ನೂ ನಡೆಸಿದವು.
ಈ ಉಪ್ಪಿನ ಬಳಕೆಯಿಂದ ಸಾವಿರಾರು ರುಚಿಗಳನ್ನು ಗುರುತಿಸಬಹುದಾದ ನಾಲಿಗೆ ತನ್ನ ಈ ವಿಶೇಷ “ಗುರುತಿಸುವ”ಗುಣವನ್ನು ಕಳೆದುಕೊಳ್ಳುತ್ತದೆ, ಒಂದರ್ಥದಲ್ಲಿ ನಮ್ಮ ನಾಲಿಗೆಯನ್ನೇ ಕೊಲ್ಲುತ್ತದೆ. ಅಲ್ಲದೆ ನಮ್ಮ ಮೇಧೋ ಶಕ್ತಿಯನ್ನು ನಾಶಪಡಿಸುತ್ತದೆ. ಇದನ್ನು ಎಲ್ಲಾ ಭಾರತೀಯರಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಅದು ನಮ್ಮ ಕರ್ತವ್ಯವೂ ಕೂಡ.
ಅಜಿನೊಮೊಟೊ ಸಣ್ಣ ಪ್ರಮಾಣದಲ್ಲಿ ಬಳಸಲು ಸುರಕ್ಷಿತವಾಗಿದೆ. ಏಕೆಂದರೆ ಅತಿಯಾದ ಬಳಕೆಯು ದೇಹಕ್ಕೆ ಹಾನಿಕಾರಕವಾಗಿದೆ. ವಾಸ್ತವವಾಗಿ, ಗ್ಲುಟಮೇಟ್ ಮೆದುಳಿನಲ್ಲಿ ನರಪ್ರೇಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ. ರುಚಿಯಾದ ಅಜಿನೊಮೊಟೊದಲ್ಲಿ ಗ್ಲುಟಮೇಟ್ ಅಂಶವನ್ನು ಹೊಂದಿರುವ ಕಾರಣ ಇದು ಹಾನಿಕಾರಕ ಎಂದು ಅನೇಕ ಜನರು ಭಾವಿಸುತ್ತಾರೆ. ಏಕೆಂದರೆ ಗ್ಲುಟಮೇಟ್ ನಿಮ್ಮ ದೇಹಕ್ಕೆ ವಿಷಕಾರಿಯಾಗಬಹುದು. ಇದು ನರ ಕೋಶಗಳನ್ನು ಸಹ ಹಾನಿಗೊಳಿಸುತ್ತದೆ. ಆದರೆ ಯಾವುದೇ ಸಂಶೋಧನೆಗಳು ಈ ಕುರಿತು ವರದಿ ಮಾಡಿಲ್ಲ.
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…