Advertisement
Opinion

ಭಾರತೀಯರೆಲ್ಲಾ ಮೂಲತಃ ಹಿಂದುಗಳು : ಕಾಶ್ಮೀರಿ ಪಂಡಿತರು ಇಸ್ಲಾಂ ಧರ್ಮಕ್ಕೆ ಮತಾಂತಗೊಂಡರು- ಗುಲಾಂ ನಬಿ ಆಜಾದ್

Share

ಸಮಾಜವು ರಾಷ್ಟ್ರೀಯತೆಯನ್ನು ಪೋಷಿಸಿದಾಗ ಇತಿಹಾಸಗಳು ಸಮೃದ್ಧವಾಗುತ್ತವೆ. ಹಾಗೆ ಧರ್ಮದ ವಿಚಾರ ಬಂದಾಗಲು ಸಮಾಜ ಇದೇ ತಳಹದಿಯ ಮೇಲೆ ನಿಂತರೆ ದೇಶದಲ್ಲಿ ಜನ ಸಾಮರಸ್ಯದಿಂದ ಬದುಕಬಹುದು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಎಲ್ಲವೂ ಜಾತಿ, ಧರ್ಮದ ಮೇಲೆ ದೇಶ ನಡೆಯುತ್ತಿದೆ. ಎಲ್ಲದಕ್ಕೂ ಧರ್ಮವೇ ಮುಖ್ಯ. ಹಿಂದೂ, ಇಸ್ಲಾಂ ಧರ್ಮದ ಮಧ್ಯೆ ದೊಡ್ಡ ಕಂದಕವೇ ಬೆಳದಿದೆ. ಆದರೆ ಇಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ  ಗುಲಾಂ ನಬಿ ಆಜಾದ್ ಹೇಳಿದ ಮಾತು ಎಲ್ಲರೂ ಯೋಚನೆಗೆ ಹಚ್ಚುವಂತೆ ಮಾಡಿದೆ.

Advertisement
Advertisement
Advertisement

ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು, ಮೊದಲು ಮುಸ್ಲಿಮರು ಹಿಂದೂಗಳಾಗಿದ್ದರು ಎಂಬ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ  ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಇಸ್ಲಾಂ ಹುಟ್ಟಿದ್ದು 1500 ವರ್ಷಗಳ ಹಿಂದೆ, ಭಾರತದ ಯಾರೂ ಹೊರಗಿನವರಲ್ಲ, ನಾವೆಲ್ಲರೂ ಈ ದೇಶಕ್ಕೆ ಸೇರಿದವರು, ಭಾರತದ ಮುಸ್ಲಿಮರು ಮೂಲತಃ ಹಿಂದೂಗಳು, ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು ಎಂದಿದ್ದಾರೆ.

Advertisement

600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಮಾತ್ರ ಇದ್ದರು ಎಂದು ಹೇಳುತ್ತಾರೆ, ನಂತರ ಜನರು ಮತಾಂತರಗೊಂಡು ಮುಸ್ಲಿಮರಾದರು. ಜನರು ಸಹೋದರತೆ, ಶಾಂತಿ, ಐಕ್ಯತೆಯನ್ನು ಕಾಪಾಡುವಂತೆ ಮನವಿ ಮಾಡಿದ ಆಜಾದ್ ಅವರು, ರಾಜಕೀಯದೊಂದಿಗೆ ಧರ್ಮವನ್ನು ಬೆರೆಸಬಾರದು, ಜನರು ಧರ್ಮದ ಹೆಸರಿನಲ್ಲಿ ಮತ ಹಾಕಬಾರದು ಎಂದು ಕಿವಿ ಮಾತು ಹೇಳಿದರು.

ಹಿಂದೂ-ಮುಸ್ಲಿಂ ಎನ್ನುವ ಬೇಧಭಾವವೇಕೆ? ಎಂದು ಆಜಾದ್ ಭಾರತೀಯ ಮುಸ್ಲಿಮರ ಬಗ್ಗೆ ಮಾತನಾಡಿದರು.  ಹಿಂದೂಗಳಂತೆಯೇ ಮುಸ್ಲಿಮರು ಕೂಡ ಈ  ಭಾರತದ ಮಣ್ಣಿನಲ್ಲೇ ಬೆರೆಯುತ್ತಾರೆ, ಹಾಗಾಗಿ ಮುಸ್ಲಿಮರ ದೇಹ ಹಾಗೂ ಎಲುಬುಗಳು ಕೂಡ ಭಾರತ ಮಾತೆಯ ಭಾಗವಾಗುತ್ತದೆ, ಹಾಗಿದ್ದಾಗ ಹಿಂದೂ-ಮುಸ್ಲಿಂ ಎನ್ನುವ ಬೇಧಬಾವ ಏಕೆ ಎಂದರು.

Advertisement

ಗುಲಾಂ ನಬಿ ಆಜಾದ್ ಕಳೆದ ವರ್ಷ ಕಾಂಗ್ರೆಸ್ ತೊರೆದು ತಮ್ಮದೇ ಆದ ಹೊಸ ಪಕ್ಷವನ್ನು ಕಟ್ಟಿದ್ದರು. ಇದು ಕಾಂಗ್ರೆಸ್​ ಪಕ್ಷಕ್ಕೆ ದೊಡ್ಡ ಹೊಡೆತ ಎಂದೇ ಹೇಳಬಹುದು. ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ರಾಜೀನಾಮೆ ನೀಡಿದ್ದರು. ಆಜಾದ್ ಅಬರ ಮಾತು ಎಷ್ಟು ಮಂದಿಗೆ ಇಷ್ಟವಾಗುತ್ತೊ ಇಲ್ವೋ ಗೊತ್ತಿಲ್ಲ. ಆದರೆ ನಾವು ಭಾರತೀಯರು, ನಾವೆಲ್ಲರೂ ಒಂದೇ ಎನ್ನುವ ಮಾತು ಒಪ್ಪಲೇ ಬೆಕಾದ್ದು.

Source: Digital Media

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆಯ ಔಷಧೀಯ ಗುಣ | “we made” ಅಡಿಕೆಯ ಲಿಕ್ವಿಡ್‌ ಸೋಪು | ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ |

ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…

10 hours ago

ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಜಯಪ್ರಸಾದ ಆನೆಕಾರ

ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…

12 hours ago

ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |

ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…

21 hours ago

ಗುಬ್ಬಚ್ಚಿ ಸಂಕುಲ ರಕ್ಷಣೆಗೆ ಪ್ರಧಾನಿ ಕರೆ | ಬೇಲೂರಿನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ

ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…

21 hours ago

ಮಹಿಳಾ ಉದ್ಯಮಿಗಳಿಗೆ  ಎನ್‍ಆರ್ ಎಲ್‍ಎಮ್ ಯೋಜನೆ ಸ್ಪೂರ್ತಿಯ ಸೆಲೆಯಾಗಿದೆ

ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ  ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…

22 hours ago

ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ,  ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ  ಹಾಕಲು ಜಿಲ್ಲಾಡಳಿತ ಸೂಚನೆ

ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…

22 hours ago