ಅಡಿಕೆಯ ಬಗ್ಗೆ ಹಲವು ಸಂದೇಹಗಳು ನಮ್ಮ ಬೆಳೆಗಾರರಲ್ಲಿ ಇದ್ದವು. ಬರೀ ಧಾರಣೆ, ಮಾರುಕಟ್ಟೆ ಸುತ್ತಲೂ ಸುತ್ತುವುದನ್ನು ಬಿಟ್ಟು ಅಡಿಕೆಯ ಪರ್ಯಾಯ ಬಳಕೆಯ ಬಗ್ಗೆ ಯೋಚನೆ ನಡೆಸಬೇಕಿತ್ತು. ವಿದೇಶದಲ್ಲಿ ಅಡಿಕೆಯನ್ನು ವಿವಿಧ ರೀತಿಯಲ್ಲಿ ಬಳಕೆ ಮಾಡುತ್ತಾರೆ. ಭಾರತದಲ್ಲಿ ಅಡಿಕೆ ನಿತ್ಯ ಬಳಕೆ ಆಗುತ್ತಿದ್ದರೂ ತಿಂದು ಉಗುಳುವುದು ಎಂಬ ಭಾವನೆ ಇತ್ತು. ಆದರೆ ಅಷ್ಟೇ ಅಲ್ಲ, ಭಾರತಲ್ಲೂ ಅಡಿಕೆ ವಿವಿಧ ರೂಪದಲ್ಲಿ ಬಳಕೆಯಾಗುತ್ತಿದೆ. ಈ ಬಗ್ಗೆ ಪರಿಚಯದ ಮೊದಲ ಪ್ರಯತ್ನ ಪುತ್ತೂರಿನಲ್ಲಿ ನಡೆಯಿತು. ಅಡಿಕೆ ಹೊಸ ಬಳಕೆಯ ವಿಚಾರಗೋಷ್ಟಿಯಲ್ಲಿ ಅಡಿಕೆಯ ಬಳಕೆಯ ಮಜಲುಗಳು ತೆರೆದುಕೊಂಡವು.
ಅಡಿಕೆಯನ್ನು ವಿವಿಧ ದೇಶಗಳಲ್ಲಿ ಬಳಕೆ ಮಾಡಲಾಗುತ್ತದೆ. ತಿಂದು ಉಗುಳುವುದಕ್ಕೆ ಮಾತ್ರಾ ಅಡಿಕೆಯನ್ನು ಬಳಕೆ ಮಾಡುವುದಲ್ಲ, ಅಡಿಕೆಯನ್ನು ಔಷಧ ಸೇರಿದಂತೆ ವಿವಿಧ ರೂಪದಲ್ಲಿ ವಿದೇಶದಲ್ಲೂ ಬಳಕೆ ಮಾಡಲಾಗುತ್ತಿದೆ. ನಮ್ಮಲ್ಲಿ ಮಾತ್ರಾ ಅಡಿಕೆ ಹಾನಿಕಾರಕ ಎಂದು ಏಕೆ ಪರಿಗಣನೆಯಾಗಬೇಕು ?. ಅಡಿಕೆಯಿಂದಲೂ ಹಲವು ಉತ್ಪನ್ನಗಳ ತಯಾರಿ ಸಾಧ್ಯವಿದೆ. ಅಡಿಕೆ ಬಣ್ಣದದ ವ್ಯಾಪಕತೆಯೂ ದೊಡ್ಡದಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಹೇಳಿದರು.
Advertisement
Advertisement
Advertisement
Advertisement
Advertisement
ಸಂಪನ್ಮೂಲ ವ್ಯಕ್ತಿಗಳ ಮಾಹಿತಿ ಬಳಿಕ ಸಹಕಾರಿ ಸಂಘಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳು ಅಡಿಕೆಯ ಉತ್ಪನ್ನಗಳ ತಯಾರಿ ಹಾಗೂ ಮಾರುಕಟ್ಟೆಯ ಅವಕಾಶಗಳ ಬಗ್ಗೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ದೇವಿಪ್ರಸಾದ್ ಪುಣಚ ಮಾತನಾಡಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.
Advertisement
ಇದೇ ಸಂದರ್ಭ ಅಡಿಕೆಯ ಬಣ್ಣದಿಂದ ತಯಾರಿಸಿದ ಬಟ್ಟೆಗಳು, ಅಡಿಕೆಯಿಂದ ತಯಾರಾದ ವಿವಿಧ ಉತ್ಪನ್ನಗಳು, ಅಡಿಕೆಯಿಂದ ತಯಾರಿಸಿದ ಹೋಳಿಗೆ, ಐಸ್‌ಕ್ರೀಂ ಪ್ರದರ್ಶನ ಹಾಗೂ ಮಾರಾಟ ನಡೆದವು.
Advertisement
This slideshow requires JavaScript.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement