ಅಡಿಕೆ ಪರ್ಯಾಯ ಬಳಕೆ ವಿಚಾರಗೋಷ್ಠಿ | ಕೃಷಿಕ ಎ ಪಿ ಸದಾಶಿವ ಹೇಳಿದ್ದು… ಸೆಮಿನಾರ್ ಬಳಿಕ ನಾನು ವೀಳ್ಯದೆಲೆ ಬಳ್ಳಿ ನಾಟಿ ಮಾಡಿದೆ |

December 22, 2022
12:30 PM
ಈಚೆಗೆ ಅಡಿಕೆ ಹೊಸಬಳಕೆಯ ವಿಚಾರಗೋಷ್ಠಿ ಪುತ್ತೂರಿನಲ್ಲಿ  ನಡೆಯಿತು. ಅಡಿಕೆಯ ಪರ್ಯಾಯ ಬಳಕೆಯನ್ನು ಕೇಂದ್ರೀಕರಿಸಿ ಇದ್ದ ವಿಚಾರಗೋಷ್ಠಿಯಲ್ಲಿ ಅಡಿಕೆಯ ಬಳಕೆ, ಅಡಿಕೆಯ ಹಲವು ಉತ್ಪನ್ನಗಳ ಪರಿಚಯ ಮಾಡಲಾಯಿತು. ಡಿಕೆ ಉತ್ಪನ್ನ ತಯಾರು ಮಾಡಿದ ಹಲವು ಮಂದಿ ಇದ್ದರು. ಈ ಗೋಷ್ಠಿಯ ಬಳಿಕ ಕೃಷಿಕ ಎ ಪಿ ಸದಾಶಿವ ಅವರ ಅಭಿಪ್ರಾಯ ಹೀಗಿತ್ತು….

ಅಡಿಕೆ ಪರ್ಯಾಯ ಬಳಕೆಯ ಸೆಮಿನಾರ್‌ ನಲ್ಲಿ ಕುತೂಹಲಿಗನಾಗಿ ಭಾಗವಹಿಸಿದವರಲ್ಲಿ ನಾನೂ ಒಬ್ಬ. ತುಂಬಾ ದೀರ್ಘ ಅಂತ ಅನಿಸಿದರೂ, ಸಂಶೋಧಕರೆಲ್ಲರ ಸಂಶೋಧನೆ ಮತ್ತು ವಿವರಣೆ ತುಂಬಾ ಚೆನ್ನಾಗಿತ್ತು. ಅವರೆಲ್ಲರ ಸಾಧನೆಗೆ ಅಭಿನಂದನೆಗಳು. ಎಲ್ಲಾ ಸಂಶೋಧಕರಿಗೂ ಮೂಲ ಪ್ರೇರಣೆ ಬದನಾಜೆ ಶಂಕರ ಭಟ್ಟರೆ ಎಂಬುದು ಬಹಳ ಕುತೂಹಲದ ಮತ್ತು ಆಶ್ಚರ್ಯದ ಸಂಗತಿ. ಇದು ಶಂಕರ ಭಟ್ಟರ ಅಸಾಧಾರಣ ಸಂಶೋಧನಾ ಸಾಮರ್ಥ್ಯಕ್ಕೆ ನಿದರ್ಶನ.

ಹೆಚ್ಚಿನ ಉತ್ಪನ್ನಗಳು ಅಡಿಕೆಯ ಮಾರುಕಟ್ಟೆಯ ದೃಷ್ಟಿಯಿಂದ ತುಂಬಾ ಪ್ರಯೋಜನವಾಗಬಹುದು ಎಂದು ನನಗೆ ಅನ್ನಿಸಲಿಲ್ಲ. ಎಲ್ಲಾ ಉತ್ಪನ್ನಗಳು ಅಡಿಕೆಯ ಉಪ ಉತ್ಪನ್ನಗಳಿಂದ ತಯಾರು ಮಾಡಿದಂತವುಗಳು. ಅದು ಮಾರುಕಟ್ಟೆಗೆ ಪೂರಕವೇ ಹೊರತು ಅಡಿಕೆ ಮೂಲವಸ್ತುವಾಗಿ ಬಳಕೆಯಲ್ಲಿ ತುಂಬಾ ಪ್ರಯೋಜನಕಾರಿ ಆಗಲಾರದು ಎಂದು ನನ್ನ ಅನಿಸಿಕೆ.

ಶಂಕರ ಭಟ್ಟರು ತಮ್ಮೆಲ್ಲ ಉತ್ಪನ್ನಗಳ ಬಗ್ಗೆ ವಿವರಿಸುತ್ತಾ, 1450 ವರ್ಷಕ್ಕೂ ಹಿಂದೆ ಬರೆದಿಟ್ಟ ಶ್ಲೋಕ ಒಂದನ್ನು ಉದ್ಧರಿಸಿ ಅಡಿಕೆ ಮತ್ತು ವೀಳ್ಯದೆಲೆ ಎಂಬುದು ಸಂಸಾರದಲ್ಲಿ ಪತಿ ಪತ್ನಿ ಇದ್ದಂತೆ. ಎರಡೂ ಇದ್ದಾಗ ಬಲು ಆರೋಗ್ಯದಾಯಕ ಎಂಬ ಮಾತು ಬಲು ಕುತೂಹಲಕರ. ಅದಕ್ಕೆ ಪೂರಕವಾಗಿ ಅಡಿಕೆಯಿಂದ ಮಾಡಿದ ಔಷಧಿಗಳ ಧನಾತ್ಮಕ ಅಂಶಗಳನ್ನು ಡಾಕ್ಟರ್ ಗಳು ಪ್ರಸ್ತುತಪಡಿಸಿದ್ದರು. ಈ ಮೇಲಿನ ಪೂರಕ ಮಾತುಗಳನ್ನು ಪ್ರಚುರಪಡಿಸುತ್ತಾ ತಂಬಾಕು ರಹಿತ ವೀಳ್ಯದ ಬಳಕೆಗೆ ಒತ್ತುಕೊಟ್ಟಲ್ಲಿ ಅಡಿಕೆ ಮಾರುಕಟ್ಟೆಯ ಹಿತದೃಷ್ಟಿಯಿಂದ ಪ್ರಯೋಜನವಾಗಬಹುದು ಎಂದು ಅನಿಸಿತು.

ನಾವು ಗಮನಿಸಬೇಕಾದ ಅಂಶ, ಅಡಿಕೆ ಬಳಕೆಯಿಂದ ಕ್ಯಾನ್ಸರ್ ನಾಶವಾಗುತ್ತದೆ, ಗ್ಯಾಂಗ್ರಿನ್ ಗುಣವಾಗುತ್ತದೆ, ಮಲಬದ್ಧತೆಯ ಸಮಸ್ಯೆ ಪರಿಹಾರವಾಗುತ್ತದೆ ಎಂಬ ವಿಷಯಗಳನ್ನೆಲ್ಲ ಒಪ್ಪಿಕೊಂಡರೂ, ಅದನ್ನು ಸಂಶೋಧಿಸಿದವರಿಂದ ಹಿಡಿದು ನನ್ನವರೆಗೆ ಅಲ್ಲಿ ಯಾರೂ ಅಡಿಕೆ ಬಳಸುವವರು ಇರಲಿಲ್ಲ.

ಇಲ್ಲಿಯವರೆಗೆ ತಾಂಬೂಲವನ್ನು ಬಳಸದ ನಾನು, ಬಳಸುವಲ್ಲಿ ಆರಂಭ ನನ್ನಿಂದಲೇ ಸುರುವಾಗಲಿ ಎಂಬ ದೃಷ್ಟಿಯಿಂದ ವೀಳ್ಯದೆಲೆ ಬಳ್ಳಿಯ ತುಂಡೊಂದನ್ನು ಅಡಿಕೆ ಮರಕ್ಕೆ ನೆಟ್ಟು ಉದ್ಘಾಟನೆ ಮಾಡಿಕೊಂಡೆ.
ಬರಹ :
ಎ ಪಿ ಸದಾಶಿವ , ಮರಿಕೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ
ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?
September 12, 2026
7:08 AM
by: ದ ರೂರಲ್ ಮಿರರ್.ಕಾಂ
ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror