ಅಡಿಕೆಯ ಹೊಸಬಳಕೆಯ ಬಗ್ಗೆ ನಡೆದಿರುವ ಪ್ರಯತ್ನ ಹಾಗೂ ಅಡಿಕೆ ಬಳಕೆಯ ಹೊಸ ಸಾಧ್ಯತೆಗಳ ವಿಚಾರಗೋಷ್ಠಿಯು ಪುತ್ತೂರಿನಲ್ಲಿ ಮಂಗಳವಾರ ನಡೆಯಿತು.
ಪುತ್ತೂರಿನ ಚುಂಚಶ್ರೀ ಸಭಾಭವನದಲ್ಲಿ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಹಾಗೂ ಅಡಿಕೆ ಪತ್ರಿಕೆಯ ಆಶ್ರಯದಲ್ಲಿ ನಡೆದ ಅಡಿಕೆ ಹೊಸ ಬಳಕೆ ವಿಚಾರಗೋಷ್ಠಿಯನ್ನು ಕೃಷಿಕ ಹಾಗೂ ಸಂಶೋಧಕ ಬದನಾಜೆ ಶಂಕರ ಭಟ್ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬದನಾಜೆ ಶಂಕರ ಭಟ್ ಅವರು, ಅಡಿಕೆಯು ಪರಂಪರಾಗತವಾದ ಔಷಧಿಯೂ ಹೌದು. ಅನೇಕ ವರ್ಷಗಳಿಂದ ಅಡಿಕೆ ಬಳಕೆ ಮಾಡಲಾಗುತ್ತಿದೆ. ವೀಳ್ಯದೆಲೆ ಹಾಗೂ ಅಡಿಕೆ ಸೇವನೆಯು ಆರೋಗ್ಯದ ಮೇಲೆಯೂ ಉತ್ತಮ ಪರಿಣಾಮ ಬೀರುತ್ತದೆ. ಪ್ರಸ್ತುತ ಅಡಿಕೆ ಹಾನಿಕಾರಕ ಎನ್ನುವ ಆತಂಕ ಅಡಿಕೆ ಬೆಳೆಗಾರರಲ್ಲಿದೆ. ಅಂತಹ ಯಾವ ಆತಂಕವೂ ಅಗತ್ಯ ಇಲ್ಲ. ಈಗ ಅಡಿಕೆ ಬೆಳೆಗಾರರು ಈ ಎಲ್ಲಾ ಕಳಂಕ ನಿವಾರಣೆಗೆ ತಮ್ಮ ಅಡುಗೆ ಮನೆಯನ್ನೇ ಪ್ರಯೋಗಾಲಯ ಮಾಡಬೇಕು, ಅಡಿಕೆಯನ್ನು ಮಿತವಾಗಿ ಬಳಕೆ ಮಾಡುವ ಮೂಲಕ ಉತ್ತರಿಸಬೇಕಿದೆ ಎಂದರು. ಅಡಿಕೆಯನ್ನು ಕ್ಯಾನ್ಸರ್ ನಿವಾರಣೆಯ ಔಷಧಿಯಾಗಿ, ಜೀರ್ಣಕ್ರಿಯೆಗೆ, ಮಧುಮೇಹಕ್ಕೆ ಸೇರಿದಂತೆ ವಿವಿಧ ಕಡೆಗಳಲ್ಲಿ ಔಷಧಿವಾಗಿಯೂ ಬಳಕೆಯಾಗುತ್ತದೆ. ಇನ್ನೊಂದು ಕಡೆ ಅಡಿಕೆ ವೈನ್, ಅಡಿಕೆಯ ಗಂ ಸೇರಿದಂತೆ ಹಲವು ಉತ್ಪನ್ನಗಳನ್ನು ಮಾಡಲು ಸಾಧ್ಯವಿದೆ ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ದೇವಿಪ್ರಸಾದ್ ಪುಣಚ ವಹಿಸಿದ್ದರು. ವೇದಿಕೆಯಲ್ಲಿ ಸಿಪಿಸಿಆರ್ಐ ವಿಜ್ಞಾನಿ ಡಾ.ವಿನಾಯಕ ಹೆಗ್ಡೆ, ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರ ನಾರಾಯಣ ಖಂಡಿಗೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ, ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಪಡಾರು ರಾಮಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು.
ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಸ್ವಾಗತಿಸಿ ಪ್ರಸ್ತಾವನೆಗೈದರು. ಸರಸ್ವತಿ ಸೌಹಾರ್ದ ಸಹಕಾರಿ ಸಂಘದ ಜನರಲ್ ಮ್ಯಾನೇಜರ್ ವಸಂತ ವಂದಿಸಿದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿಚಾರಗೋಷ್ಟಿ ನಡೆಯಿತು. ವಿವಿಧ ಪ್ರಮುಖರು ಅಡಿಕೆಯ ಉತ್ಪನ್ನಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಡಿಕೆಯಿಂದ ತಯಾರಿಸಿದ ವಿವಿಧ ಉತ್ಪನ್ನಗಳು ಪ್ರದರ್ಶನಗೊಂಡವು. ಅಡಿಕೆ ಮರ ಹಾಗೂ ಅಡಿಕೆಯಿಂದ ತಯಾರಿಸಿದ ವಿವಿಧ ಉತ್ಪನ್ನಗಳಾದ ಕೀ ಚೈನ್, ಅಡಿಕೆ ಬಣ್ಣ, ಅಡಿಕೆ ಚೊಗರು, ಅಡಿಕೆ ಬಣ್ಣದಿಂದ ತಯಾರಿಸಿದ ಬುಗುರಿ, ಅಡಿಕೆ ಬಣ್ಣದ ರ್ಯಾಟ್ಲರ್, ಟೀದರ್, ಅಡಿಕೆ ಸಿಪ್ಪೆಯ ಸೊಳ್ಳೆಬತ್ತಿ, ಪೂಗ ಸಿಂಗಾರ್ , ಸಾಬೂನು, ಪೂಗಸ್ವಾದ ಸಿರಪ್, ಸತ್ವಮ್ ಸಾಬೂನು, ಪೂಗ ಟೈಮರ್ ವೈಟ್‍ಲಾಸ್ ಸಿರಪ್ ಮುಂತಾದ ಹಲವಾರು ಉತ್ಪನ್ನಗಳ ಇದ್ದವು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಅಡಿಕೆಯ ಹೊಸಬಳಕೆ | ಪುತ್ತೂರಿನಲ್ಲಿ ನಡೆದ ವಿಚಾರಗೋಷ್ಠಿ | ಅಡಿಕೆಯ ಬಗ್ಗೆ ಆತಂಕ ಬೇಡ- ಅಡಿಕೆಯ ಮಿತ ಬಳಕೆ ಔಷಧಿ – ಬದನಾಜೆ ಶಂಕರ ಭಟ್ |"