ಮೂಡಬಿದಿರೆ ಆಳ್ವಾಸ್ ವಿದ್ಯಾಗಿರಿಯಲ್ಲಿ ಬುಧವಾರದಿಂದ ನಡೆಯಲಿರುವ 25ನೇ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ಪಾಲ್ಗೊಳ್ಳಲಿರುವ ಲಕ್ಷ ಲಕ್ಷ ಮಂದಿಯ ಆತಿಥ್ಯಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.
50,000 ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳೂ, 10,000 ಶಿಕ್ಷಕರು, 3,000 ಸಿಬ್ಬಂದಿಗಳಿಗೆ ಇಲ್ಲಿರುವ ಹಾಸ್ಟೆಲ್‌ಗಳಲ್ಲಿ ಅನ್ನದಾಸೋಹಕ್ಕೆ ವ್ಯವಸ್ಥೆ ನಡೆದಿದ್ದು, ಕೃಷಿ ಮೇಳದ ಪರಿಸರದಲ್ಲಿ ಸುಮಾರು 50,000 ಚದರಡಿಯ ಎರಡು ಪೆಂಡಾಲ್‌ಗಳಲ್ಲಿ 60 ಕೌಂಟರ್‌ಗಳಲ್ಲಿ ಹೊತ್ತು ಹೊತ್ತಿಗೆ ಲಕ್ಷ ಮಂದಿಯ ಊಟೋಪಚಾರಕ್ಕೆ ಎಲ್ಲ ವ್ಯವಸ್ಥೆ ಆಗುತ್ತಿವೆ.
ಹಾಸ್ಟೆಲ್‌ಗಳ ಹೊರತು ಪಡಿಸಿ ಇತರೆಡೆ ಸಾರ್ವಜನಿಕರಿಗಾಗಿ ಅಡುಗೆ ಸಿದ್ಧಪಡಿಸಲು 300 ಮಂದಿ ಬಾಣಸಿಗರು, 1,200 ಮಂದಿ ಸ್ವಯಂ ಸೇವಕರು ಆಗಮಿಸಿದ್ದಾರೆ.
ಭಾರೀ ಹೊರೆ ಕಾಣಿಕೆ ಹರಿದು ಬರುತ್ತಿದ್ದು, ಉಗ್ರಾಣವೇ ಸುಮಾರು 40,000 ಚದರಡಿ ಪ್ರದೇಶದಲ್ಲಿ ಹರಡಿ ಕೊಂಡಿದೆ. ವಿಜಯಾನಂದ ಜೋಗಿ ಕಾನಡ್ಕ ಇವರ ಮೇಲುಸ್ತುವಾರಿಯಲ್ಲಿ, ಆಳ್ವಾಸ್ ಎಫ್‌ಓ ರಾಜೇಶ್ ನಾಯಕ್, ರಾಜಗೋಪಾಲ ಶೆಟ್ಟಿ, ಭರತೇಶ್, ಮೋಹನ್ ಕುಮಾರ್, ಸುಂದರ ಶೆಟ್ಟಿ ಸಹಿತ 75 ಮಂದಿಯ ತಂಡ, 200 ಕಾರ್ಮಿಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490