ಒಬ್ಬ ಮಗ(Son) ತನ್ನ ವಯಸ್ಸಾದ ತಂದೆಯನ್ನು(Old Father) ರಾತ್ರಿ ಊಟಕ್ಕಾಗಿ(Dinner) ಉತ್ತಮ ರೆಸ್ಟೋರೆಂಟ್‌ಗೆ(Restaurant) ಕರೆದೊಯ್ದ. ಅಪ್ಪ ನಡುಗುವ ಕೈಯಿಂದ ಊಟಮಾಡುವಾಗ ತನ್ನ ಬಟ್ಟೆಗಳ ಮೇಲೆ ಹಲವಾರು ಬಾರಿ ಆಹಾರವನ್ನು(Food)ಚೆಲ್ಲಿಕೊಂಡ. ಬಾಯಿ, ಗಲ್ಲ, ಕುತ್ತಿಗೆ ಮೇಲೆಲ್ಲಾ ಆಹಾರದ ತುಣುಕುಗಳು ಕಾಣುತ್ತಿದ್ದವು. ರೆಸ್ಟೋರೆಂಟ್‌ನಲ್ಲಿ ಊಟಮಾಡಲು ಕುಳಿತಿದ್ದ ಇತರ ಜನರು ಆ ವೃದ್ಧನನ್ನು ಅಸಹ್ಯದಿಂದ ನೋಡುತ್ತಿದ್ದರು. ಆದರೆ ಅವರ ಮಗನು ಶಾಂತವಾಗಿ ಕುಳಿತು ಅಪ್ಪನೊಡನೆ ಊಟಮಾಡುತ್ತಿದ್ದ.
ಊಟವಾದ ನಂತರ ಮಗ ಯಾವುದೇ ಮುಜಗರ, ನಾಚಿಕೆಯಿಲ್ಲದೆ ತನ್ನ ತಂದೆಯನ್ನು ವಾಶ್ ರೂಂಗೆ ಕರೆದೊಯ್ದ. ಅವರ ಬಾಯಿ ಮುಖ ಕುತ್ತಿಗೆಗಳಿಂದ ಆಹಾರದ ತುಣುಕುಗಳನ್ನು ಮೆಲ್ಲಗೆ ಒರಸಿ ತೆಗೆದು ಅವರ ಬಟ್ಟೆಗಳನ್ನು ತನ್ನ ಕರವಸ್ತ್ರಕ್ಕೆ ನೀರು ಹಾಕಿಕೊಂಡು ಚನ್ನಾಗಿ ಸ್ವಚ್ಛಗೊಳಿಸಿದ. ಅವರ ತಲೆಗೂದಲನ್ನು ಬಾಚಿ , ಕನ್ನಡಕದ ಗಾಜುಗಳನ್ನು ತೊಳೆದು ಬಟ್ಟೆಯಿಂದ ಒರಸಿ ಮತ್ತೆ ಹಾಕಿದನಂತರ ಅವರನ್ನು ಹೊರಗೆ ಕರೆತಂದ. ರೆಸ್ಟೋರೆಂಟ್‌ನಲ್ಲಿ ಎಲ್ಲರೂ ಮೌನವಾಗಿ ಅವನತ್ತಲೇ ನೋಡುತ್ತಿದ್ದರು. ಅನಂತರ ಅವನು ಬಿಲ್ ಪಾವತಿಸಿ ಅಪ್ಪನೊಂದಿಗೆ ಹೊರಗೆ ಹೊರಟನು. ಅಲ್ಲಿ ಊಟ ಮಾಡುತ್ತಿದ್ದ ಮತ್ತೊಬ್ಬ ವೃದ್ಧರು ಅವನನ್ನು ಕರೆದು ಕೇಳಿದರು – ನೀನು ಇಲ್ಲಿ ಏನನ್ನಾದರೂ ಬಿಟ್ಟು ಹೋಗುತ್ತಿದ್ದೀಯೆಂದು ನಿನಗೆ ಅನ್ನಿಸುತ್ತಿಲ್ಲವೇ? ಎಂದು ಕೇಳಿದರು
ಅದಕ್ಕೆ ಅವನು ಉತ್ತರಿಸಿದ – ಇಲ್ಲ ಸರ್, ನಾನು ಏನನ್ನೂ ಬಿಟ್ಟಿಲ್ಲ ಎಲ್ಲವನ್ನೂ ತೆಗೆದುಕೊಂಡಿದ್ದೇನೆ ಎಂದನು.
ವೃದ್ಧರು ಹೇಳಿದರು – ಮಗೂ , ನೀನು ಇಲ್ಲಿ ಪ್ರತಿಯೊಬ್ಬ ಮಗನಿಗೂ ಒಂದು ಶಿಕ್ಷಣವನ್ನು ಪಾಠವನ್ನು ಮತ್ತು ಪ್ರತಿಯೊಬ್ಬ ತಂದೆಗೂ ಒಂದು ಭರವಸೆಯನ್ನು ಬಿಟ್ಟುಹೋಗುತ್ತಿರುವೆ ಎಂದರು. ಸಾಮಾನ್ಯವಾಗಿ ನಮ್ಮಂತಹಾ ವಯಸ್ಸಾದ ಹೆತ್ತವರನ್ನು ತಮ್ಮೊಂದಿಗೆ ಹೊರಗೆ ಕರೆದೊಯ್ಯಲು ಮಕ್ಕಳು ಇಷ್ಟಪಡುವುದಿಲ್ಲ, ಮತ್ತು ಅವರು ಹೇಳುತ್ತಾರೆ – ನೀವು ಅಲ್ಲಿಗೆ ಬಂದು ಏನು ಮಾಡುತ್ತೀರಿ? ನಿಮಗೆ ಅಷ್ಟು ದೂರ ಬರಲು ಶಕ್ತಿಯಿಲ್ಲ, ಬಂದರೂ ಸರಿಯಾಗಿ ತಿನ್ನುವುದಿಲ್ಲ. ನೀವು ಮನೆಯಲ್ಲೇ ಇರಿ, ಅದು ನಿಮಗೇ ಒಳ್ಳೆಯದು ಎನ್ನುತ್ತಾರೆ.
ಆದರೆ ನೀವು ಚಿಕ್ಕವರಿದ್ದಾಗ ನಿಮ್ಮ ಅಪ್ಪ ನಿಮ್ಮನ್ನು ತಮ್ಮ ಹೆಗಲುಮೇಲೆ ಹೊತ್ತು , ತೋಳುಗಳಲ್ಲಿ ಅವಚಿಕೊಂಡು ಕರೆದುಕೊಂಡು ಹೋಗುತ್ತಿದ್ದರು ಎಂಬುದನ್ನು ಮರೆತುಬಿಡುತ್ತಾರೆ. ಮಗುವಾಗಿದ್ದಾಗ ನಿಮಗೆ ಸರಿಯಾಗಿ ತಿನ್ನಲು ಸಾಧ್ಯವಾಗದಿದ್ದಾಗ, ತಂದೆತಾಯಿ ತಮ್ಮ ಕೈಯಿಂದ ನಿಮಗೆ ಆಹಾರವನ್ನು ತಿನ್ನಿಸುತ್ತಿದ್ದರು ಮತ್ತು ನಿಮ್ಮ ಬಾಯಿಂದ ಆಹಾರವು ಶರೀರ, ಬಟ್ಟೆಗಳ ಮೇಲೆ ಬಿದ್ದಾಗ, ಅವರು ನಿಮ್ಮನ್ನು ಬೈಯದೆ ಪ್ರೀತಿಯಿಂದ ಸ್ವಚ್ಛ ಗೊಳಿಸುತ್ತಿದ್ದರು. ಹಾಗಾದರೆ ಅದೇ ಹೆತ್ತವರು ವೃದ್ಧಾಪ್ಯದಲ್ಲಿ ಮಕ್ಕಳಿಗೆ ಹೊರೆಯಾಗಿರುವುದು ಏಕೆ? ಪೋಷಕರು ದೇವರ ರೂಪ. ಅವರಿಗೆ ಸೇವೆ ಮಾಡಿ, ಮತ್ತು ಪ್ರೀತಿಯನ್ನು ನೀಡಿ ನೆನಪಿಡಿ , ನಿಮಗೂ ವಯಸ್ಸಾಗುತ್ತದೆ. ನೀವೂ ವೃದ್ಧರಾಗುತ್ತೀರಿ.
ನಿಮ್ಮ ತಂದೆತಾಯಿಯರನ್ನು ಯಾವಾಗಲೂ ಗೌರವಿಸಿ
ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್ 14 ಅಥವಾ 15ರಿಂದ ಹಲವೆಡೆ…
ದೇಶದ ಹಲವು ನಗರಗಳಲ್ಲಿ ವಾಣಿಜ್ಯ LPG ಕೊರತೆಯಿಂದ ಹೋಟೆಲ್ ಮತ್ತು ಆಹಾರ ವಿತರಣೆ…
ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…
Bio Innovations APAC 2026 ಸಮಾವೇಶದಲ್ಲಿ ಗೋಡಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ…
ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…
ರಾಜ್ಯದಲ್ಲಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವ…