ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅವಕಾಶ ಮತ್ತು ಹೊಸ ಆಂಬುಲೆನ್ಸ್ ವಾಹನ ಒದಗಿಸುವಲ್ಲಿ ಉತ್ತಮ ಸೇವೆ ನೀಡಿದ ಮಾಂಡವಿ ಮೋಟಾರ್ಸ್ ಸುಳ್ಯ ಸಂಸ್ಥೆಯನ್ನು ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.
ನಿರಂತರ 38ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿ ತೊಡಗಿಸಿಕೊಂಡು 3500ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿ ಕರ್ತವ್ಯವನ್ನು ಸೇವಾ ಕಾರ್ಯವೆಂದು ಪರಿಗಣಿಸಿ ಮುಂದುವರೆಯುತ್ತಿರುವ ಮಾಂಡವಿ ಮೋಟಾರ್ಸ್ ಸುಳ್ಯ ಸಂಸ್ಥೆ ಯನ್ನು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ವತಿಯಿಂದ ಗೌರವಿಸಲಾಯಿತು.
ಹಿಂದೆ ಟ್ರಸ್ಟ್ ಆಂಬುಲೆನ್ಸ್ ವಾಹನ ಅಪಘಾತಗೊಂಡು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಮತ್ತೆ ಟ್ರಸ್ಟ್ ಗೆ ಹೊಸ ಆಂಬುಲೆನ್ಸ್ ವಾಹನ ಬರುವಲ್ಲಿ ನಿಸ್ವಾರ್ಥ ಸೇವೆ ನೀಡಿ ಪ್ರತ್ಯಕ್ಷ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಈ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಮಾಂಡವಿ ಮೋಟಾರ್ಸ್ ಸಂಸ್ಥೆಯ ಮಾರ್ಕೆಟಿಂಗ್ ಮೆನೇಜರ್ ಸುರೇಶ್ ಭಟ್, ಸೇವಾ ಮುಖ್ಯಸ್ಥ ಸುದೇಶ್ ಜೈನ್, ದುರ್ಗಾದಾಸ್ ಕಡ್ಲಾರು, ಪುನೀತ್ ಹಾಲೇಮಜಲ್,ವಿಮಾ ವಿಭಾಗ ಪ್ರಮುಖ ಸಂದೀಪ್, ಭರತ್, ಹರೀಶ್,ಹಾಗೂ ಸರ್ವ ಸಿಬ್ಬಂದಿಗಳು,ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ,ಕಾರ್ಯದರ್ಶಿ ಯತೀಂದ್ರ ಕಟ್ಟೆಕೋಡಿ, ಉಪಾಧ್ಯಕ್ಷ ಮೋಹನ್ ದಾಸ್ ಶಿರಾಜೆ, ಪದ್ಮನಭ ಹಲ್ಲಡ್ಕ ಉಪಸ್ಥಿತರಿದ್ದರು
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…