ಪುತ್ತೂರು | ಅಂಬಿಕಾದಲ್ಲಿ ಗಣಪತಿ ಹವನ- ಶಾರದಾ ಪೂಜೆ |

Advertisement
Advertisement

ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ನವರಾತ್ರಿ ಪೂಜಾ ಸಮಯದಲ್ಲಿ ನಡೆಯುವ ಶ್ರೀ ಮಹಾಗಣಪತಿ ಹವನ, ಶಾರದಾ ಪೂಜೆ, ಪುಸ್ತಕ ಪೂಜೆ ನಡೆಯಿತು.

Advertisement

ಈ ಸಂದರ್ಭ ಮಾತನಾಡಿದ ವೇದಮೂರ್ತಿ ಜಗದೀಶ ಭಟ್, ಧರ್ಮವನ್ನು ಯಾರು ರಕ್ಷಿಸುತ್ತಾರೋ ಅವರನ್ನು ಧರ್ಮ ಎಂದೂ ಕೈ ಬಿಡುವುದಿಲ್ಲ. ದೇವರ ಕೃಪೆಗೆ ಖಂಡಿತಾ ಅಂತಹವರು ಪಾತ್ರರಾಗುತ್ತಾರೆ. ವಿದ್ಯಾವಂತರಿಗೆ ವಿನಯವು ಭೂಷಣವಾಗಿರುತ್ತದೆ. ಮುಖ್ಯವಾಗಿ ಬುದ್ಧಿಯ ಜೊತೆಗೆ ಸದ್ಗುಣಗಳನ್ನು ಪ್ರಾಪ್ತಿ ಮಾಡಿಕೊಳ್ಳಬೇಕು. ಅಂಬಿಕಾ ಸಂಸ್ಥೆ ಸ್ಥಾಪನೆಯಾದಂದಿನಿಂದ ಭಗವಂತನಿಗೆ ಸಲ್ಲಬೇಕಾದ ಎಲ್ಲಾ ಪೂಜೆ, ಹವನಗಳು ನೆರವೇರುತ್ತಾ ಬರುತ್ತಿದೆ. ಈ ವಿದ್ಯಾಲಯ ಪುಣ್ಯಸ್ಥಳ, ಈ ಕರ್ಮವೃಕ್ಷದಲ್ಲಿ ಸತ್ಫಲಗಳು ಲಭಿಸುತ್ತಿರುತ್ತದೆ ಎಂದರು.

Advertisement
Advertisement

ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಅವರ ಧರ್ಮಪತ್ನಿ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಪೂಜಾಕಾರ್ಯದಲ್ಲಿ ಭಾಗಿಗಳಾದರು. ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ, ಉಪನ್ಯಾಸಕ ವೃಂದ, ಉಪನ್ಯಾಸಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಪುತ್ತೂರು | ಅಂಬಿಕಾದಲ್ಲಿ ಗಣಪತಿ ಹವನ- ಶಾರದಾ ಪೂಜೆ |"

Leave a comment

Your email address will not be published.


*