Advertisement
MIRROR FOCUS

ಗ್ರಾಮೀಣ ಭಾಗದಲ್ಲಿ ಅಂಬುಲೆನ್ಸ್ ಸೇವೆ ನೀಡುವ ಕನಸು ಹೊತ್ತ ಅಟೋ ಚಾಲಕ |

Share

ಗ್ರಾಮೀಣ ಭಾಗದ ಜನರಿಗೂ ಉತ್ತಮ ಆರೋಗ್ಯ ಸೇವೆ ಸಿಗಬೇಕು. ಅದರಲ್ಲೂ ಆರೋಗ್ಯದ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್‌ ಸೇವೆ ಅಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಅಂತಹದ್ದೊಂದು ಸೇವೆಯ ಕನಸನ್ನು ಅಟೋ ಚಾಲಕರೊಬ್ಬರು ಹೊತ್ತಿದ್ದಾರೆ. ಈಗ ಯುವಕರ ತಂಡ ಮನೆ ಮನೆ ಭೇಟಿ ಮಾಡಿ ಅಂಬುಲೆನ್ಸ್‌ ಯೋಜನೆಯನ್ನು ತಲಪಿಸುತ್ತಿದ್ದಾರೆ. ಗ್ರಾಮೀಣ ಭಾಗದ ಜನರ ಸಹಕಾರವನ್ನೂ ಕೋರುತ್ತಿದ್ದಾರೆ. ಜನವರಿ 14  ರಂದು ಲೋಕಾರ್ಪಣೆ ಮಾಡುವ ಉದ್ದೇಶವನ್ನೂ ಹೊಂದಿದ್ದಾರೆ.

Advertisement
Advertisement
Advertisement
Advertisement
Advertisement

ಗ್ರಾಮೀಣ ಭಾಗದಲ್ಲಿ ಯಾವತ್ತೂ ಆರೋಗ್ಯದ ಸಮಸ್ಯೆಯಾದರೆ ಸಂಕಷ್ಟವೇ. ಒಂದು ಕಡೆ ರಸ್ತೆ ಸಮಸ್ಯೆ, ಇನ್ನೊಂದು ಕಡೆ ಸೇತುವೆ, ಕಾಲುಸಂಕಗಳ ಸಮಸ್ಯೆ. ಇದೆಲ್ಲದರ ನಡುವೆ ಸೂಕ್ತ ರೀತಿಯಲ್ಲಿ ರೋಗಿಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಸವಾಲು. ಈ ಕಾರಣದಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಯಾವತ್ತೂ ಸಂಕಷ್ಟ. ಇಂತಹದ್ದರ ನಡುವೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಅಟೋ ಚಾಲಕ ಚಂದ್ರಶೇಖರ ಕಡೋಡಿ ಹಾಗೂ ಅವರ  ಜೊತೆಗಿನ ಸಮಾನ ಮನಸ್ಕ ಯುವಕರ ತಂಡ ಇದೀಗ ಅಂಬುಲೆನ್ಸ್‌ ಸೇವೆ ನೀಡುವ ಕನಸು ಹೊತ್ತಿದ್ದಾರೆ. ಅವರು ಅಂಬುಲೆನ್ಸ್‌ ಸೇವೆ ನೀಡಬೇಕು ಎಂದು ಸಂಕಲ್ಪ ಮಾಡಲೂ ಕಾರಣ ಇದೆ. ಸ್ವತ: ಗ್ರಾಮೀಣ ಭಾಗದಲ್ಲಿರುವ ಚಂದ್ರಶೇಖರ್‌ ಅವರು ಅನುಭವಿಸಿದ ಸಮಸ್ಯೆಯೇ ಅಂಬುಲೆನ್ಸ್‌ ಸೇವೆ ಸಮಾಜಕ್ಕೆ ನೀಡಬೇಕು ಎಂಬ ಕನಸು ಕಾಣಲು ಸಾಧ್ಯವಾಯಿತು. ಅದಕ್ಕೆ ಯುವಕರ ಸಹಕಾರ ಲಭ್ಯವಾಗಲೂ ಕಾರಣವಾಯಿತು.

ಚಂದ್ರಶೇಖರ್‌ ಅವರ ತಂದೆ ಕೆಲಸಕ್ಕೆ ಹೋಗಿದ್ದ ಕಡೆಯಲ್ಲಿ  ಆರೋಗ್ಯ ಸಮಸ್ಯೆಗೆ ಒಳಗಾದಾಗ ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಪರದಾಟ ನಡೆಸಿದರು. ಅಂದೇ ಸಮಾಜಕ್ಕೆ ಅಂಬುಲೆನ್ಸ್‌ ಸೇವೆ ನೀಡಬೇಕು ಎಂದು ನಿರ್ಧರಿಸಿದ್ದರು. ಈಚೆಗೆ ಕೊರೋನಾ ಸಮಯದಲ್ಲೂ ಅಂತಹದ್ದೇ ಅನುಭವಗಳು ಸಾಕಷ್ಟ ಆಗಿದ್ದವು. ಈ ಸಂದರ್ಭ ತನ್ನ ಅಟೋವನ್ನೇ ಕೊರೋನಾ ಪೀಡಿತರ ಸೇವೆಗಾಗಿ ಉಪಯೋಗಿದಿದ್ದರು. ಆ ಬಳಿಕ ಅಂಬುಲೆನ್ಸ್‌ ಸೇವೆಗಾಗಿ ಯೋಚನೆ ಮಾಡಿ ಸುಮಾರು  7  ಜನರ ತಂಡ ಮಾಡಿ ಟ್ರಸ್ಟ್‌ ರಚನೆ ಮಾಡಿ ಊರ ಹಾಗೂ ಪರವೂರ ದಾನಿಗಳಿಂದ ಹಣ ಸಂಗ್ರಹ ಮಾಡಿ ಅಂಬುಲೆನ್ಸ್‌ ಖರೀದಿಗೆ ಮುಂದಾಗಿದ್ದಾರೆ. ಜ.14  ರಂದು ಅಂಬುಲೆನ್ಸ್‌ ಖರೀದಿ ಮಾಡಲು ಈಗಾಗಲೇ ನಿರ್ಧರಿಸಿದ್ದಾರೆ. ಈ ನೆಲೆಯಲ್ಲಿ ಮನೆ ಮನೆಗೆ ಭೇಟಿ ನೀಡಿ ಸಂಗ್ರಹ ಮಾಡುತ್ತಿದ್ದಾರೆ. 7 ಗ್ರಾಮಗಳನ್ನೊಳಗೊಂಡು ಈ ಯೋಜನೆ ಹಮ್ಮಿಕೊಂಡಿದ್ದಾರೆ.

Advertisement

ಹೀಗಾಗಿ ಅಂಬುಲೆನ್ಸ್‌ ಸೇವೆಗೆ ಈಗ ಎಲ್ಲರ ಸಹಾಯ ಅಗತ್ಯವಿದೆ. ಗ್ರಾಮೀಣ ಭಾಗದಲ್ಲೂ ಉತ್ತಮ ಆರೋಗ್ಯ ಸೇವೆಗೆ ಇಂತಹ ಅಂಬುಲೆನ್ಸ್‌ ಸೇವೆಗಳೂ ಕಾರಣವಾಗುತ್ತದೆ. ಚಂದ್ರಶೇಖರ್‌ ಅವರ ಸಂಪರ್ಕ ಹೀಗಿದೆ….9480199711

ಟ್ರಸ್ಟ್‌ ರಚನೆ ಮಾಡಿ ಅಂಬುಲೆನ್ಸ್‌ ಸೇವೆಗೆ ಜನರ ಮುಂದೆ ಹೋಗಿದ್ದೇವೆ. ಈಗಾಗಲೇ ಹಲವಾರು ಮಂದಿ ಸಹಾಯ ಮಾಡಿದ್ದಾರೆ. ಕನಿಷ್ಟ ಒಂದು ದಿನದ ಸಂಬಳವನ್ನೂ ನೀಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರಿಗೆ ಆರೋಗ್ಯ ಸೇವೆ ನೀಡುವುದು ನಮ್ಮ ಉದ್ದೇಶವಾಗಿದೆ.
ಪುನೀತ್‌ ಗುಡ್ಡೆಮನೆ, ಕೋಶಾಧಿಕಾರಿ , ಅಮರ ಚಾರಿಟೇಬಲ್‌ ಟ್ರಸ್ಟ್‌ , ಗುತ್ತಿಗಾರು
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ

ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…

13 hours ago

ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…

13 hours ago

ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು

ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…

13 hours ago

ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |

ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…

21 hours ago

ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಅಭಿಯಾನ | ರಾಜ್ಯಸಭಾ ಸಂಸದೆ ಸುಧಾಮೂರ್ತಿ ಸೇರಿದಂತೆ 10 ಮಂದಿ ನಾಮನಿರ್ದೇಶನ

ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…

22 hours ago

ಸಹಕಾರಿ ಪಾಠ | ಆರ್ಥಿಕ ಶಿಸ್ತು ಹಾಗೂ ಸಣ್ಣ ಸಣ್ಣ ಮೊತ್ತವೂ ಬ್ಯಾಂಕಿಗೆ ಏಕೆ ಬರಬೇಕು…?

ತೀರಾ ಸಣ್ಣ ಮಟ್ಟಿನ‌ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?

22 hours ago