ದೇಶದಲ್ಲಿ ಸಹಕಾರಿ ಶಕ್ತಿಯನ್ನು ನಾವು ಗಮನಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರದ ಮೂಲಕ ರೈತರ ಸೇವೆ ಮಾಡಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿಯೇ ಈ ಬಾರಿಯ ಬಜೆಟ್ ನಲ್ಲಿ ಸಹಕಾರಿ ಕ್ಷೇತ್ರಕ್ಕೂ ಅನುದಾನ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ, ಸಹಕಾರಿ ಸಚಿವ ಅಮಿತ್ ಶಾ ಹೇಳಿದರು.
ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಸಹಕಾರಿ ಕ್ಷೇತ್ರದ ಶಕ್ತಿ ಅಪಾರವಾಗಿದೆ. ನೀವಿಲ್ಲಿ ಬೆಳೆದ ಅಡಿಕೆಯನ್ನ ಗುಜರಾತಿನ ನಾವು ತಿನ್ನುತ್ತೇವೆ. ಸಹಕಾರಿ ಕ್ಷೇತ್ರವು ಈ ಕೊಂಡಿಯನ್ನು ಸೃಷ್ಟಿಸಿದೆ. ಸಹಕಾರಿ ಕ್ಷೇತ್ರಕ್ಕೆ ಕ್ಯಾಂಪ್ಕೋ ಮಾದರಿಯಾಗಿದೆ. ಕ್ಯಾಂಪ್ಕೋ ಬೆಳವಣಿಗೆ ನೋಡಿ ಈ ದೇಶದಲ್ಲಿ ಸಹಕಾರಿ ಕ್ಷೇತ್ರದ ಶಕ್ತಿಯನ್ನು ನಾನು ಗಮನಿಸಿದ್ದೇನೆ, ಈ ಮೂಲಕ ಸಹಕಾರಿ ಶಕ್ತಿ ತಿಳಿಯುತ್ತದೆ ಎಂದು ಅಮಿತ್ ಶಾ ಹೇಳಿದರು. ವಾರಣಾಸಿ ಸುಬ್ರಾಯ ಭಟ್ ನೇತೃತ್ವದಲ್ಲಿ ಈ ಸಂಸ್ಥೆಯು 3000 ಸದಸ್ಯರಿಂದ ಆರಂಭವಾಗಿದೆ, ಇಂದು ಒಂದು ಲಕ್ಷ ಸದಸ್ಯರನ್ನು ಹೊಂದಿದೆ, ಮೂರು ಸಾವಿರ ಕೋಟಿ ವ್ಯವಹಾರ ಆಗುತ್ತದೆ ಎನ್ನುವುದು ಸಹಕಾರಿ ಶಕ್ತಿಯನ್ನು ನೆನೆಪಿಸುತ್ತದೆ ಎಂದರು. ಸರ್ಕಾರವು ಸಹಕಾರಿ ಸಂಘದ ಮೂಲಕ ರೈತರ ಸೇವೆ ಮಾಡಲು ಸಿದ್ಧವಾಗಿದೆ. ಇದಕ್ಕಾಗಿಯೇ ಈ ಬಜೆಟ್ ನಲ್ಲಿ ಮೋದಿ ಅವರು ಪಂಚಾಯತ್ ಮಟ್ಟದಲ್ಲಿ ಸಹಕಾರಿ ಪ್ಯಾಕ್ಸ್ ಸ್ಥಾಪನೆಗೆ ಸಿದ್ದವಾಗಿದೆ ಎಂದರು. ಕ್ಯಾಂಪ್ಕೋ ಕೃಷಿ ಮಾಲ್‌ಗೆ ಶಂಕುಸ್ಥಾಪನೆಯಾಗಿದೆ, ಈ ಮೂಲಕ ಕೃಷಿ ವಸ್ತು, ಗೊಬ್ಬರ, ಯಂತ್ರಗಳು ಇಲ್ಲಿ ಲಭ್ಯವಾಗಲಿದೆ, ದೇಶದ ಎಲ್ಲಾ ಕಡೆಗಳಲ್ಲೂ ಇದೇ ಮಾದರಿಯಲ್ಲಿ ಸಂಸ್ಥೆ ತೆರೆಯುವ ಯೋಜನೆ ಇದೆ ಎಂದರು. ಅಡಿಕೆ ಮತ್ತು ಕೋಕೋ ಸಂಸ್ಥೆಗೆ 50 ವರ್ಷ ತುಂಬಿದೆ ಎನ್ನುವುದೇ ಈ ಸಂಘದ ಪ್ರಾಮಾಣಿಕತೆಗೆ ನೀಡಿದ ಸರ್ಟಿಫಿಕೇಟ್ ಎಂದು ಅಮಿತ್ ಶಾ ಹೇಳಿದರು.
ಬಿಜೆಪಿ ಸರ್ಕಾರವು ಬಡವರಿಗೆ ನೆರವಾಗುತ್ತಿದೆ, ಹಲವು ಯೋಜನೆ ತಂದಿದೆ. ಸಮಗ್ರ ದೇಶದ ಅಭಿವೃದ್ಧಿಗೆ ಬಿಜೆಪಿ ಕೆಲಸ ಮಾಡುತ್ತಿದೆ, ದೇಶದ ಸುರಕ್ಷತೆ ಕಡೆಗೂ ಗಮನಹರಿಸಿದೆ ಎಂದರು. ಬಿಜೆಪಿಗೆ ಮತ ನೀಡಿದರೆ ದೇಶ ಭಕ್ತರಿಗೆ, ರಾಣಿ ಅಬ್ಬಕ್ಕ ಮತ ನೀಡಿದಂತೆ. ಕಾಂಗ್ರೆಸ್ ಗೆ ಮತ ನೀಡಿದರೆ ಟಿಪ್ಪುವಿಗೆ ಮತ ನೀಡಿದಂತೆ. ಕಾಂಗ್ರೆಸ್ ಭ್ರಷ್ಟ ಸರ್ಕಾರವಾಗಿದೆ, ಜನತಾದಳ – ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬಾರದು ಎಂದು ಸಂಕಲ್ಪಿಸಬೇಕು ಎಂದು ಅಮಿತ್ ಶಾ ಹೇಳಿದರು.
ಕೃಷಿ ಹೊರತುಪಡಿಸಿ, ವಾಣಿಜ್ಯ, ಕೈಗಾರಿಕೆ ಹಾಗೂ ಗಣಿಗಾರಿಕೆ ಸಂಬಂಧಿಸಿದ ಸ್ಥಳಗಳಲ್ಲಿ ಕೊಳವೆ ಬಾವಿ…
5G ಮತ್ತು 6G ಮೊಬೈಲ್ ಸಂವಹನಕ್ಕಾಗಿ ಸಕ್ರಿಯ ಮತ್ತು ನಿಷ್ಕ್ರಿಯ ಆಂಟೆನಾ ವ್ಯವಸ್ಥೆಗಳಲ್ಲಿ…
ಅಡಿಕೆಯ ಬಗ್ಗೆ WHO ವರದಿಯನ್ನು ಸರ್ಕಾರ ನೇರವಾಗಿ ಪ್ರಶ್ನಿಸಲು ಸಾಧ್ಯವಿದೆಯೇ..?
30.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ ಮಾರಾಟಕ್ಕೆ ರೈತರ ನೋಂದಣಿ ಕಾರ್ಯವನ್ನು ಶೀಘ್ರವೇ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೇ 30 ರಿಂದ ಡಿಸೆಂಬರ್ 3 ರವರೆಗೆ ಸಾಧಾರಣ…