ರಾಜ್ಯಕ್ಕೆ ಆಗಮಿಸಿದ ಬಿಜೆಪಿ ನಾಯಕ ಅಮಿತ್‌ ಶಾ | ನಾಯಕತ್ವ ಬದಲಾವಣೆಯ ಬಗ್ಗೆ ಭಾರೀ ಚರ್ಚೆ | ದಕ್ಷಿಣ ಕನ್ನಡ ಜಿಲ್ಲೆಯ ಕಡೆಗೂ ನಿಗಾ ? |

Advertisement

ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಮುಖಂಡ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಇದೀಗ ಅಮಿತ್‌ ಶಾ ಆಗಮನದ ಜೊತೆಗೆ ರಾಜ್ಯ ರಾಜಕೀಯಲ್ಲಿ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ಈ ನಡುವೆಯೇ ಸಚಿವ ಸಂಪುಟ ವಿಸ್ತರಣೆ, ಸಚಿವರ ಕೈ ಬಿಡುವ ಉದ್ದೇಶ, ನೂತನ ನಾಯಕತ್ವದ ಬಗ್ಗೆಯೂ ಕುತೂಹಲ ಮೂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡೆಗೂ ನಿಗಾ ಇದ್ದು.  ಈ ಬೆಳವಣಿಗೆಯು ಇದೀಗ ಎಲ್ಲರಲ್ಲೂ ಕುತೂಹಲ ಹೆಚ್ಚಾಗುವಂತೆ ಮಾಡಿದೆ.

Advertisement

ಈ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು, ಮುಂದಿನ ಚುನಾವಣೆಯ ಅಭ್ಯರ್ಥಿ ಆಯ್ಕೆ ಹಾಗೂ ವಂಶಾಡಳಿತ ರಾಜಕಾರಣದ ಕುರಿತಂತೆ ನೀಡಿದ್ದ ಹೇಳಿಕೆಯೊಂದು ರಾಜ್ಯ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.  ಇದೀಗ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ, ಮುಂಬರುವ ಚುನಾವಣೆಗೆ ಸಂಘಟನಾತ್ಮಕ ಸಿದ್ಧತೆ ಸೇರಿದಂತೆ ಬಿಜೆಪಿಯಲ್ಲಿ ಸಾಕಷ್ಟು ಸಿದ್ಧತೆ ನಡೆಯುತ್ತಿರುವಾಗಲೇ ಸಂತೋಷ್ ಅವರ ಹೇಳಿಕೆಗೆ ಪುಷ್ಟಿ ನೀಡಿತ್ತು.

Advertisement
Advertisement
Advertisement

ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಚರ್ಚೆಯೂ ಬಹುದಿನಗಳಿಂದ ಇದೆ. ಸದ್ಯ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಪ್ರಭಾವ ಸಾಕಷ್ಟಿಲ್ಲ ಎನ್ನುವ ಅಭಿಪ್ರಾಯ ಇದ್ದು. ಇದೀಗ ಈ ಸ್ಥಾನಕ್ಕೆ ಹಿಂದೂವಾದಿಯನ್ನೇ ಆಯ್ಕೆ ಮಾಡುವ ಬಗ್ಗೆ ಬಿಜೆಪಿ ವರಿಷ್ಟರು ಚಿಂತನೆ ನಡೆಸಿದ್ದರು ಎನ್ನುವುದು  ಮಾಧ್ಯಮಗಳ ವರದಿ. ಇದರ ಜೊತೆಗೆ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪ್ರಮುಖ ಹುದ್ದೆ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.  ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ವೇಳೆಯೂ ಕೆಲವು ಸಚಿವರ ಕೈಬಿಡುವುದು  ಹಾಗೂ ಹೊಸಬರಿಗೆ ಅವಕಾಶ ನೀಡುವ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ. ಭ್ರಷ್ಟಾಚಾರ, ಬೆಂಬಲಿಗರಿಗೆ ಮಣೆ, ಸ್ವಜನ ಪಕ್ಷಪಾತ ಸೇರಿದಂತೆ ಇತರ ಸಂಗತಿಗಳ ಬಗ್ಗೆ ವರಿಷ್ಠರು ಗುಪ್ತವಾಗಿ ಮಾಹಿತಿ ಸಂಗ್ರಹಿಸಿದ್ದು ಇದೆಲ್ಲಾ ಈಗ ಪ್ರಮುಖ ಪಾತ್ರ ವಹಿಸುತ್ತಿದೆ. ಮುಂದಿನ ಚುನಾವಣೆಯನ್ನು ಗುರಿಯಾಗಿಸಿ ಈ ಬದಲಾವಣೆಗಳು ಆರಂಭವಾಗಿದೆ.

 

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ರಾಜ್ಯಕ್ಕೆ ಆಗಮಿಸಿದ ಬಿಜೆಪಿ ನಾಯಕ ಅಮಿತ್‌ ಶಾ | ನಾಯಕತ್ವ ಬದಲಾವಣೆಯ ಬಗ್ಗೆ ಭಾರೀ ಚರ್ಚೆ | ದಕ್ಷಿಣ ಕನ್ನಡ ಜಿಲ್ಲೆಯ ಕಡೆಗೂ ನಿಗಾ ? |"

Leave a comment

Your email address will not be published.


*