ನಸ್ಯಕರ್ಮ ಚಿಕಿತ್ಸೆ.. ಅನೇಕ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿಯಾಗಿರುತ್ತದೆ ಅಂತಹ ಚಿಕಿತ್ಸೆಯಲ್ಲಿ ನಸ್ಯ ಕರ್ಮ ಚಿಕಿತ್ಸೆ ಕೂಡ ಒಂದಾಗಿದೆ ನಸ್ಯಕರ್ಮ ಚಿಕಿತ್ಸೆ ಎನ್ನುವುದು ಪಂಚಕರ್ಮ ಚಿಕಿತ್ಸೆಯ ಒಂದು ಭಾಗವಾಗಿದೆ. ಇದು ದೇಹದಲ್ಲಿನ ಅತಿಯಾದ ಕಫವನ್ನು ಹೊರ ಹಾಕುವ ಮೂಲಕ ದೇಹದ ಶ್ವಾಸೆಂದ್ರೀಯ ಮಾರ್ಗವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
ನಸ್ಯ ಎಂದರೆ ಮೂಗಿನ ದ್ವಾರದ ಮೂಲಕ ಔಷಧೀಯ ತೈಲ, ತುಪ್ಪ, ಪುಡಿ, ಕಚ್ಚಾ ಗಿಡ ಮೂಲಿಕೆಗಳ ರಸಗಳು, ಹಾಲು ಇತ್ಯಾದಿಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ವೈದ್ಯರ ಸಮ್ಮುಖದಲ್ಲಿ ಬಳಸಿ ಚಿಕಿತ್ಸೆ ನೀಡುವಂತದ್ದು. ಮೂಗಿನ ಮೂಲಕ ಮೆದುಳು ಹಾಗೂ ಶರೀರಕ್ಕೆ ತಲುಪಿ ಈ ಚಿಕಿತ್ಸೆ ಪರಿಣಾಮಕಾರಿ ಆಗುವುದು. (ನಾಸೋ ಹಿ: ಶಿರಸೋದ್ವಾರಂ )
ಸಾಮಾನ್ಯವಾಗಿ ಸೈನಸೈಟಿಸ್ ಇರುವವರಿಗೆ ಈ ಉಸಿರಾಟದ ಸಮಸ್ಯೆ ಕಾಡುತ್ತದೆ. ಇದರಿಂದ ಮೂಗು ಕಟ್ಟಿಕೊಳ್ಳುವುದು, ತಲೆನೋವು,ವಾಸನೆ ಮತ್ತು ರುಚಿಯ ಅನುಭವ ಕಡಿಮೆ ಆಗುವುದು, ಗಂಟಲು ಕೆರೆತ, ಶೀತ ಮೊದಲಾದ ವಿವಿಧ ರೀತಿಯ ಸಮಸ್ಯೆಗಳು ಉಂಟಾಗುವುದು. ಮೂಗಿನ ಮೂಲಕ ಔಷದವನ್ನು ಹಾಕಿದಾಗ ಲೋಳೆಪೊರೆಯ ಒಳಪದರವನ್ನು ನಿವಾರಿಸಿ ಉಸಿರಾಟಕ್ಕೆ ನಿರಾಳತೆಯನ್ನು ಉಂಟು ಮಾಡುವುದು. ಹೀಗಾಗಿ ಸೈನಸ್ ಸಮಸ್ಯೆಗಳಿಗೆ ನಸ್ಯಕರ್ಮ ಉತ್ತಮ ಚಿಕಿತ್ಸೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಕೂಡ ನಿವಾರಣೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ.
ಕೂದಲು ಉದುರುವಿಕೆಯನ್ನು ತಡೆಗಟ್ಟಲು ಸಹ ಈ ನಸ್ಯ ಚಿಕಿತ್ಸೆಯನ್ನು ಬಳಸಲಾಗುತ್ತದೆ. ಇದು ಚರ್ಮದ ಬಣ್ಣವನ್ನು ಸುಧಾರಿಸುತ್ತದೆ ಹಾಗೂ ಕೂದಲಿನ ರಚನೆಯನ್ನು ಸರಿಪಡಿಸುವುದು ಮಾತ್ರವಲ್ಲದೇ ಬಿಳಿಕೂದಲಿನ ಸಮಸ್ಯೆಯನ್ನು ತಡೆಗಟ್ಟುತ್ತದೆ. ನಸ್ಯಕರ್ಮ ಒಟ್ಟಾರೆಯಾಗಿ ಕುತ್ತಿಗೆ ಮತ್ತು ಮೇಲ್ಭಾಗದ ಅಂಗಗಳನ್ನು ಆರೋಗ್ಯವಾಗಿಡಲು ಸಹಾಯಕಾರಿ ಆಗುತ್ತದೆ ಹೀಗಾಗಿ ಕುತ್ತಿಗೆ ನೋವು ನಿವಾರಣೆಗೆ ನಸ್ಯ ಕರ್ಮ ಚಿಕಿತ್ಸೆ ಉತ್ತಮವಾಗಿದೆ ಸಾಮಾನ್ಯವಾಗಿ ಕುತ್ತಿಗೆ ನೋವು ಬಿಗಿತಕ್ಕೆ ಕಾರಣ ಇಂಟರ್ ವರ್ಟಿಬ್ರಲ್ ಡಿಸ್ಕ್ ಗಳ ನಿರ್ಜಲೀಕರಣ. ನಸ್ಯ ಚಿಕಿತ್ಸೆಯ ಮೂಲಕ ಡ್ರೈ ಆಗಿರುವ ಕುತ್ತಿಗೆ ಭಾಗಕ್ಕೆ ಆರಾಮದಾಯಕ ಅನುಭವ ಸಿಗುತ್ತದೆ ಈ ಮೂಲಕ ಕುತ್ತಿಗೆ ನೋವು ನಿವಾರಿಸಬಹುದು.
ನಸ್ಯ ಚಿಕಿತ್ಸೆ ತೆಗೆದು ಕೊಳ್ಳುವಾಗ ಪಥ್ಯವನ್ನು ಅನುಸರಿಸ ಬೇಕು ಹಾಗೂ ಸಾಮಾನ್ಯವಾಗಿ 7 ದಿನ ಈ ಚಿಕಿತ್ಸೆಯನ್ನು ವೈದ್ಯರ ಸಮ್ಮುಖದಲ್ಲಿ ಮಾಡಲಾಗುತ್ತದೆ. ಇದನ್ನು ಸರಿಯಾದ ಕ್ರಮದಲ್ಲಿ ನೀಡದೆ ಹೋದಲ್ಲಿ ಅಡ್ಡಪರಿಣಾಮ ಉಂಟಾಗುವುದು. ಆದ ಕಾರಣ ರೋಗಕ್ಕನುಸರವಾಗಿ ಯಾವ ರೀತಿಯ ನಸ್ಯ ಕರ್ಮ ಚಿಕಿತ್ಸೆ ಉತ್ತಮ ಎಂದು ಆಯ್ದು ಸರಿಯಾದ ಕ್ರಮದಲ್ಲಿ ನುರಿತ ವೈದ್ಯರೊಂದಿಗೆ ಸಮಾಲೋಚನೆ ಮಾಡಿ ತೆಗೆದುಕೊಳ್ಳುವುದು ಉತ್ತಮ.
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…