ನಮ್ಮ ಭಾರತ(India) ವಿಶ್ವದ ಅತ್ಯಂತ ದೊಡ್ಡ, ಹಾಗೂ ಬಲಿಷ್ಠವಾದ, ಪ್ರಜಾಪ್ರಭುತ್ವವುಳ್ಳ ರಾಷ್ಟ್ರ(Democratic county). ನಮ್ಮ ರಾಷ್ಟ್ರದ ಸಂವಿಧಾನ(Constitution), ಬದ್ಧವಾಗಿ ಚುನಾವಣೆ(Election) ಘೋಷಣೆಯಾಗಿದೆ. ಮುಂದಿನ ಕೆಲವು ದಿನಗಳ ಪರ್ಯಂತ ನಡೆಯುವ ಈ ಕಾರ್ಯಕ್ರಮ. ಈ ಚುನಾವಣೆಯಲ್ಲಿ ಸರಿಸುಮಾರು 56 ರಾಜಕೀಯ ಪಕ್ಷಗಳು(Political parties) ಹಾಗೂ ಈ ಚುನಾವಣೆಯಲ್ಲಿ, ಸರಿಸುಮಾರು 98 ಕೋಟಿ ಜನ ಮತದಾರರು(Voters) ತಮ್ಮ ಮತದಾನದ, ಹಕ್ಕನ್ನು ಚಲಾಯಿಸುತ್ತಾರೆ.
ಚುನಾವಣೆ ಎಂಬುದು ಶತ್ರುವಿನ ಜೊತೆ ಮಾಡುವ ಯುದ್ಧವಲ್ಲ, ಬಾಹ್ಯ ಶಕ್ತಿಗಳ ನಡುವಿನ ಹೋರಾಟವಲ್ಲ. ಅದು ನಮ್ಮದೇ ಜನಗಳ ನಡುವಿನ ಒಂದು ಸಾಮಾನ್ಯ ಸ್ಪರ್ಧೆ. ಯಾರೋ ಒಬ್ಬರು ಗೆಲ್ಲುತ್ತಾರೆ ಮತ್ತೊಬ್ಬರು ಸೋಲುತ್ತಾರೆ. ಅದರಿಂದ ಅಂತಹ ದೊಡ್ಡ ವ್ಯತ್ಯಾಸವೇನು ಆಗುವುದಿಲ್ಲ, ಈ ಚುನಾವಣೆ ಎಂಬುದು ಒಂದು, ಸ್ಪರ್ಧೆ. ಅನಾವಶ್ಯಕವಾಗಿ ನಾವುಗಳು ಏಕೆ ಮನಸ್ತಾಪ ಮಾಡಿಕೊಳ್ಳಬೇಕು. ನಾವುಗಳು ಏಕೆ ಶತ್ರುಗಳಾಗಬೇಕು. ನಾವುಗಳು ಏಕೆ ಒಬ್ಬರಿಗೊಬ್ಬರು ನಿಂದಿಸಿಕೊಳ್ಳಬೇಕು, ಸಮಯ ಚಿತ್ತವನ್ನು ಹಾಗೂ ಸೌಮ್ಯವನ್ನು, ಕಾಪಾಡಿಕೊಳ್ಳುವ ಮೂಲಕ ಆರೋಗ್ಯಕರ ಅಭಿಪ್ರಾಯಗಳನ್ನು, ಮುಕ್ತವಾಗಿ ಹಂಚಿಕೊಳ್ಳುತ್ತಾ ಸಂಬಂಧಗಳನ್ನು ಸಹಜವಾಗಿಯೇ, ಕಾಪಾಡಿಕೊಳ್ಳಬಹುದಲ್ಲವೇ, ನಮ್ಮ ಗೆಳೆತನದ ಘನತೆಯನ್ನು ಕಾಪಾಡಿಕೊಳ್ಳೋಣ.
ಈ ಸಂದರ್ಭದಲ್ಲಿ ನಮ್ಮ ಜವಾಬ್ದಾರಿ ಮುಖ್ಯವಾಗಿ ಸೋಷಿಯಲ್ ಮೀಡಿಯಗಳಲ್ಲಿ ಬರುವ ಹಲವಾರು ವಿಷಯಗಳು ಅದನ್ನು ಸಹಜವಾಗಿ ಸ್ವೀಕರಿಸೋಣ.
ಚುನಾವಣೆ ಒಂದು ಗುಪ್ತ ಮತದಾನ. ಒಂದಷ್ಟುಯೋಚಿಸಿ ಅದರಲ್ಲಿ ಭಾಗವಹಿಸಿ. ಯಾರೋ ಅನಾಗರಿಕರಂತೆ , ಜೈಕಾರ ಹಾಕುವುದು ಪುಡಾರಿಗಳಂತೆ ವರ್ತಿಸುವುದು ಬೇಡ, ಹಾಗೂ ನಮ್ಮ ಓಟಿನ ಮಹತ್ವವನ್ನು ಅರಿತು ಸಾಧ್ಯವಾದಮಟ್ಟಿಗೆ ಒಳ್ಳೆಯ ಅಭ್ಯರ್ಥಿಗಳನ್ನೇ, ಆರಿಸಲು ಮತ ಚಲಾಯಿಸೋಣ. ನಮ್ಮ ಮುಂದಿನ ಪೀಳಿಗೆಗೆ ಸದೃಢ ರಾಷ್ಟ್ರದ ಕನಸು ಕಟ್ಟೋಣ. ಹಾಗೂ ಎಂದಿನಂತೆ ಗೆಳೆತನದ ಘನತೆಯನ್ನುಕಾಪಾಡೋಣ.
ಈಗಿನಂತೆ ಎಪ್ರಿಲ್ 29 ಅಥವಾ 30ರಿಂದ ಕರಾವಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ…
ಬದುಕಿನ ಯಾನಕ್ಕೆ ಪಾಲಕರು ರೇಖೆಯನ್ನು ಎಳೆದು ತೋರಿಸುತ್ತಾರೆ. ಅದು ಭವಿಷ್ಯದ ಕೈತಾಂಗು. ರಕ್ಷಣೆ…
ಹನುಮಸಾಗರ ಗ್ರಾಮದ ಏಳು ವರ್ಷದ ಪ್ರದ್ವಿಕಾ ಕಣ್ಣಿಗೆ ಬಟ್ಟೆ ಕಟ್ಟಿ6 ನಿಮಿಷದಲ್ಲಿ 112…
ಸಾರ್ವಜನಿಕರಲ್ಲಿ ಮಲೇರಿಯಾ ಕಾಯಿಲೆ ಕುರಿತು ಅರಿವು ಮೂಡಿಸಬೇಕೆಂಬುವುದು ಜಾಥದ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬರೂ…
ಜಾಗತಿಕರಣದ ಆಕ್ರಮಣದಿಂದ ಜನಸಮುದಾಯಗಳ ಪಾರಂಪರಿಕ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಪರಿಣಾಮಕಾರಿ ಪ್ರಯತ್ನ…