MIRROR FOCUS

ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ | ಮುಂದಿನ ಆದೇಶದವರೆಗೆ ಈರುಳ್ಳಿ ರಪ್ತು ನಿಷೇಧ ವಿಸ್ತರಣೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಈರುಳ್ಳಿ ಬೆಲೆ ಏರಿಕೆ ತಡೆಗಾಗಿ ಸಾರ್ವತ್ರಿಕ ಚುನಾವಣೆ(General election) ವೇಳೆ ಕೇಂದ್ರ ಸರ್ಕಾರ (Central Government) ಈರುಳ್ಳಿ ರಫ್ತಿನ (Onion Export) ಕುರಿತು ಮಹತ್ವದ ನಿರ್ಧಾರ ಕೈಗೊಂಡಿತ್ತು. ಮುಂದಿನ ಆದೇಶದವರೆಗೆ ಈರುಳ್ಳಿ ರಫ್ತು ಮೇಲಿನ ನಿಷೇಧ(Ban) ಮುಂದುವರಿಯಲಿದೆ ಎಂದು ವಾಣಿಜ್ಯ ಸಚಿವಾಲಯ(Ministry of Commerce) ಸ್ಪಷ್ಟಪಡಿಸಿದೆ. ಈರುಳ್ಳಿ ಬೆಲೆ(Onion Price) ಹೆಚ್ಚಾಗಬಹುದಾದ ಕಾರಣದಿಂದ ರಪ್ತು ನಿಷೇಧವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ. ಈರುಳ್ಳಿ ರಫ್ತಿನ ಮೇಲಿನ ನಿಷೇಧವನ್ನು ಮುಂದಿನ ಆದೇಶದವರೆಗೆ ಮಾರ್ಚ್ 31, 2024 ರವರೆಗೆ ವಿಸ್ತರಿಸಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ(Directorate of Foreign Trade) ಮಾರ್ಚ್ 22 ರಂದು ಅಧಿಸೂಚನೆಯಲ್ಲಿ ತಿಳಿಸಿದೆ.

Advertisement

ದೇಶಿ ಮಾರುಕಟ್ಟೆಯಲ್ಲಿ ಕುಸಿದ ಬೆಲೆ: ಸರ್ಕಾರದಿಂದ ರಫ್ತು ನಿಷೇಧ ಜಾರಿಗೆ ಬಂದ ನಂತರ ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಗಳು ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಕೇಂದ್ರದ ಈ ನಿರ್ಧಾರಕ್ಕೆ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೊಸ ಬೆಳೆ ಬಂದರೂ ರಫ್ತು ನಿಷೇಧಿಸುವುದು ಸಮಂಜಸವಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.

ವಿದೇಶಗಳಲ್ಲಿ ಬೆಲೆ ಹೆಚ್ಚಳ: ಬಾಂಗ್ಲಾದೇಶ, ಮಲೇಷ್ಯಾ, ನೇಪಾಳ, ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಈರುಳ್ಳಿಗಾಗಿ ಭಾರತವನ್ನು ಅವಲಂಬಿಸಿವೆ. ಈರುಳ್ಳಿ ರಫ್ತಿನ ಮೇಲೆ ಭಾರತದ ನಿಷೇಧವು ಆ ದೇಶಗಳಲ್ಲಿ ಈರುಳ್ಳಿ ಬೆಲೆಯನ್ನು ಹೆಚ್ಚಿಸಿದೆ. ಏಷ್ಯಾದ ದೇಶಗಳ ಒಟ್ಟು ಈರುಳ್ಳಿ ಆಮದುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಭಾರತದಿಂದ ಆಮದು ಮಾಡಿಕೊಳ್ಳುತ್ತವೆ. ಮಾರ್ಚ್ 31, 2023 ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಭಾರತವು 2.5 ಮಿಲಿಯನ್ ಮೆಟ್ರಿಕ್ ಟನ್ ಈರುಳ್ಳಿಯನ್ನು ರಫ್ತು ಮಾಡಿದೆ ಎಂದು ವರದಿಯಾಗಿದೆ.

ಹೆಚ್ಚಿನ ಈರುಳ್ಳಿ ಬಾಂಗ್ಲಾದೇಶಕ್ಕೆ ರಫ್ತು: ಭಾರತದಿಂದ ಬಾಂಗ್ಲಾದೇಶಕ್ಕೆ ಗರಿಷ್ಠ ಈರುಳ್ಳಿ ರಫ್ತಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, ಏಪ್ರಿಲ್​ನಿಂದ ಜನವರಿವರೆಗೆ, ಭಾರತವು ಒಟ್ಟು $ 431.7 ಮಿಲಿಯನ್ ಮೌಲ್ಯದ ಈರುಳ್ಳಿಯನ್ನು ರಫ್ತು ಮಾಡಿದೆ. ಈ ಪೈಕಿ 187 ಮಿಲಿಯನ್ ಡಾಲರ್ ಮೌಲ್ಯದ ಈರುಳ್ಳಿಯನ್ನು ಬಾಂಗ್ಲಾದೇಶಕ್ಕೆ ಮಾತ್ರ ರಫ್ತು ಮಾಡಲಾಗಿದೆ. ಇದರ ನಂತರ, $48.1 ಮಿಲಿಯನ್ ಮೌಲ್ಯದ ಈರುಳ್ಳಿಯನ್ನು ಶ್ರೀಲಂಕಾಕ್ಕೆ ರಫ್ತು ಮಾಡಲಾಗಿದೆ. ಡಿಸೆಂಬರ್ 2023 ರಿಂದ ಈರುಳ್ಳಿ ರಫ್ತು ನಿಷೇಧಿಸಲಾಗಿದೆ. ಆದರೆ, ಬಾಂಗ್ಲಾದೇಶ ಮತ್ತು ಯುಎಇ ಕೋರಿಕೆಯ ಮೇರೆಗೆ ಕಳೆದ ತಿಂಗಳು ಬಾಂಗ್ಲಾದೇಶಕ್ಕೆ 50 ಸಾವಿರ ಟನ್ ಮತ್ತು ಯುಎಇಗೆ 14,400 ಟನ್ ಈರುಳ್ಳಿ ರಫ್ತು ಮಾಡಲು ಸರ್ಕಾರ ಅನುಮೋದನೆ ನೀಡಿತ್ತು.

ಚುನಾವಣೆ ಹಿನ್ನಲೆ ರಫ್ತು ಮೇಲೆ ನಿಷೇಧ: ಇತ್ತೀಚೆಗಷ್ಟೇ ದೇಶಾದ್ಯಂತ ಸಾರ್ವತ್ರಿಕ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ಆರಂಭವಾಗಲಿದೆ. ಅಂತಿಮ ಕಂತು ಜೂನ್ 1 ರಂದು ಕೊನೆಗೊಳ್ಳಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾದರೆ ಅದರ ಪರಿಣಾಮ ಚುನಾವಣೆ ಮೇಲೆ ಬೀಳಲಿದೆ. ಹಾಗಾಗಿಯೇ ಈರುಳ್ಳಿ ಬೆಲೆ ಹೆಚ್ಚಾಗಬಾರದೆಂದು ರಫ್ತು ನಿಲ್ಲಿಸಿದಂತಿದೆ. ಒಂದು ವೇಳೆ ಚುನಾವಣೆ ವೇಳೆ ಬೆಲೆ ಹೆಚ್ಚಾದರೆ ಸರ್ಕಾರದ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುವ ಉದ್ದೇಶವೂ ಇದೆ. ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಬೆಲೆಯೂ 2 ರೂಪಾಯಿ ಇಳಿಕೆ ಮಾಡಿರುವುದು ಕೂಡ ಚುನಾವಣೆಗಾಗಿಯೇ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. – ಅಂತರ್ಜಾಲ ಮಾಹಿತಿ

Advertisement

India has extended its ban on onion exports indefinitely – a surprise move that comes ahead of a general election and is set to exacerbate high prices in some overseas markets. Imposed by India – the world’s biggest exporter of the vegetable – in December, the ban was due to expire on March 31. Traders had anticipated it would be lifted as local prices have more than halved since the export restrictions were implemented and this season’s crop is yielding fresh supplies.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 09-07-2025 | ಇಂದು ಸಾಮಾನ್ಯ ಮಳೆ | ಜುಲೈ 16 ರಿಂದ ಮುಂಗಾರು ದುರ್ಬಲಗೊಳ್ಳಬಹುದಾ ? |

ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ಸಣ್ಣ ಪ್ರಮಾಣದ ತಿರುಗುವಿಕೆಯು ಅಷ್ಟೇನು ಪರಿಣಾಮ ಬೀರುವ ಸಾಧ್ಯತೆಗಳು…

15 minutes ago

ಜೋಯಿಡಾದ ಗ್ರಾಮದಲ್ಲಿ ಸೇತುವೆ ಕುಸಿತ | ತಾತ್ಕಾಲಿಕ ಕಾಲು ಸಂಕ ನಿರ್ಮಾಣ |

ಜೋಯಿಡಾ ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೀಸೈ ಗ್ರಾಮದಲ್ಲಿ ಭಾರೀ ಮಳೆಯಿಂದ…

3 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶಿಖರ್ ಬಿ.ಕೆ.

ಶಿಖರ್ ಬಿ.ಕೆ. 6ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆಸುಬ್ರಹ್ಮಣ್ಯ | - ದ…

6 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕ್ರಿಶನ್ ಎಸ್ ಭಟ್

ಕ್ರಿಶನ್ ಎಸ್ ಭಟ್, ಮೇರಿ ಹಿಲ್, 1ನೇ ತರಗತಿ, ಎಸ್‌ಡಿಎಂ ಶಾಲೆ, ಮಂಗಳೂರು…

7 hours ago

ಕೃಷಿ ವಲಯದಲ್ಲಿ ರೈತ ಕಲ್ಯಾಣಕ್ಕೆ ಒತ್ತು | ರಾಷ್ಟ್ರ ನಿರ್ಮಾಣದಲ್ಲಿ ರೈತರ ಕೊಡುಗೆ ಅಪಾರ

ರೈತರು ಹೊಲಗಳಲ್ಲಿ ಬಳಕೆ ಮಾಡುತ್ತಿರುವ ರಸಗೊಬ್ಬರಗಳು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ವೈಜ್ಞಾನಿಕ…

7 hours ago