ಅಡಿಕೆ ಹಾನಿಕಾರಕ ಎಂಬ ಗುಮ್ಮ ಕಳೆದ ಹಲವು ಸಮಯಗಳಿಂದ ಇದೆ. ಅಡಿಕೆ ಜಗಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಆರೋಪ ಇದೆ. ಇದಕ್ಕಾಗಿ ಕಳೆದ ಹಲವಾರು ಸಮಯಗಳಿಂದ ಚರ್ಚೆ ನಡೆಯುತ್ತಲೇ ಇದೆ. ಇದೀಗ ಸಿಪಿಸಿಆರ್‌ಐ ಈ ಬಗ್ಗೆ ಬೆಳೆಗಾರರಿಗೆ ಪ್ರಯೋಜನವಾಗುವ ಹೆಜ್ಜೆಯೊಂದಕ್ಕೆ ಇಳಿದಿದೆ.
ಅಡಿಕೆ ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈಗ ಧಾರಣೆಯ ಕಾರಣದಿಂದ ವಿಸ್ತರಣೆಯೂ ಆಗುತ್ತಿದೆ. ಅಡಿಕೆ ಬೆಳೆಯುವ ಶೇ.90 ರಷ್ಟು ಜಗಿಯಲು ಬಳಕೆಯಾಗುತ್ತದೆ. ಅಡಿಕೆ ಮಾರಾಟ ನಂತರ ಏನಾಗುತ್ತದೆ ಎನ್ನುವುದೂ ಬೆಳೆಗಾರರಿಗೆ ತಿಳಿಯುತ್ತಿಲ್ಲ. ಆದರೆ ಬಹುಪಾಲು ಅಡಿಕೆ ಜಗಿಯಲೇ ಬಳಕೆಯಾಗುತ್ತದೆ. ಅಡಿಕೆಯ ಪರ್ಯಾಯ ಬಳಕೆಯ ಬಗ್ಗೆ ಇನ್ನೂ ಅಧ್ಯಯನಗಳು ಸಾಕಾಗಿಲ್ಲ. ಆದರೆ ಇದಕ್ಕೆಲ್ಲಾ ಅಡ್ಡಿ ಇರುವುದು ಅಡಿಕೆ ಹಾನಿಕಾರಕ ಎಂಬ ಗುಮ್ಮ.
ಈ ನಿಟ್ಟಿನಲ್ಲಿ ಕಳೆದ ಹಲವು ಸಮಯಗಳಿಂದ ಚರ್ಚೆ ಆಗುತ್ತಿದೆ. ಇದೀಗ ಸಿಪಿಸಿಆರ್‌ಐ ವಿಜ್ಞಾನಿಗಳು ಈ ಭಯ ನಿವಾರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದ್ದಾರೆ. ಇದೇ ತಿಂಗಳಲ್ಲಿ ಅಡಿಕೆಯ ಬಗ್ಗೆ ಉನ್ನತ ಮಟ್ಟದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರಮುಖರು ಭಾಗವಹಿಸುತ್ತಾರೆ. ಪ್ರಮುಖ ಸಂಸ್ಥೆಗಳಿಂದ ಸುಮಾರು 25 ವೈದ್ಯರು ಆಗಮಿಸುತ್ತಾರೆ. ಅಡಿಕೆ ಮಾತ್ರವೇ ತಿಂದರೆ ಏನಾಗುತ್ತದೆ..? ಅಡಿಕೆ ಜೊತೆಗೆ ಇತರ ವಸ್ತುಗಳನ್ನು ಬಳಕೆ ಮಾಡಿದರೆ ಏನಾಗುತ್ತದೆ..? ಇತ್ಯಾದಿಗಳ ಬಗ್ಗೆ ಚರ್ಚೆ ಹಾಗೂ ಅಧ್ಯಯನ ನಡೆಸಲಾಗುತ್ತದೆ. ಅಡಿಕೆಯ ಸಾಧ್ಯತೆಗಳ ಬಗ್ಗೆ ಕ್ಲಿನಿಕಲ್ ಆಗಿರುವ ಮಾಹಿತಿಯನ್ನು ಪಡೆಯಲಾಗುತ್ತದೆ.
ಕೇವಲ ಅಡಿಕೆಯನ್ನು ಜಗಿದರೆ ಯಾವುದೇ ಹಾನಿಯಾಗುವುದಿಲ್ಲ ಎನ್ನುವ ವರದಿಯ ಮೂಲಕ ಅಡಿಕೆಯ ಬೇರೆ ಬೇರೆ ಉತ್ಪನ್ನಗಳು ತಯಾರಾಗಬೇಕಿದೆ. ಅಡಿಕೆ ಜಗಿಯುವುದಕ್ಕಿಂತಲೂ ಅಡಿಕೆಯ ಪರ್ಯಾಯ ಉತ್ಪನ್ನಗಳು ತಯಾರಾಗಬೇಕಿದೆ. ಇದಕ್ಕಾಗಿ ಅಡಿಕೆ ಹಾನಿಕಾರಕ ಎಂಬ ಅಂಶ ದೂರವಾಗಬೇಕಿದೆ. ಈ ಹೆಜ್ಜೆ ಇದೀಗ ಮಹತ್ವದ್ದಾಗಿದೆ. ಸಿಪಿಸಿಆರ್ ಐ ಈ ಕ್ರಮ ಕೈಗೊಳ್ಳುತ್ತಿದೆ.
ಅಡಿಕೆ ಎಷ್ಟೇ ಉತ್ಪಾದನೆಯಾದರೂ ಅಡಿಕೆಯ ಬಳಕೆ ಅದೇ ಪ್ರಮಾಣದಲ್ಲಿ ಆಗಬೇಕಿದೆ. ಅದು ಜಗಿಯುವುದು ಮಾತ್ರಾ ಅಲ್ಲ, ಅದರ ಹೊರತಾದ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ವಿಜ್ಞಾನಿಗಳು ವೈದ್ಯರು ಜೊತೆಯಾಗಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದು ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ ಬಾಲಚಂದ್ರ ಹೆಬ್ಬಾರ್ ಹೇಳುತ್ತಾರೆ.
ಮೈಸೂರಿನಲ್ಲಿ ಕಾರ್ಯಾಚರಿಸುತ್ತಿರುವ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕಾ ಕಂಪನಿ "ಬ್ರಿವೆರಾ"ದಲ್ಲಿ ಉದ್ಯೋಗಾವಕಾಶಗಳು ಇವೆ. ಐಟಿಐ,…
ಕೊಂಕಣ, ಗೋವಾ, ಮಹಾರಾಷ್ಟ್ರ, ಕೇರಳ, ಕರ್ನಾಟಕ, ಚಂಡೀಗಢ, ಬಿಹಾರ ಸೇರಿದಂತೆ ಹಲವು ರಾಜ್ಯಗಳ…
ರಾತ್ರಿ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ಮೂವರು ಹೊಟ್ಟೆ ನೋವಿನಿಂದ ಸಾವನಪ್ಪಿದ …
ಇಂದು ವಿಶ್ವ ಮಾವು ದಿನಾಚರಣೆ. ಪ್ರತೀ ವರ್ಷ ಜುಲೈ 22 ರಂದು ಮಾವಿನಹಣ್ಣಿನ…
ಪ್ರತಿಯೊಂದು ಜನನ ಮರಣದ ನೋಂದಣಿ ಕಡ್ಡಾಯವಾಗಿದ್ದು, ಘಟನೆ ಸಂಭವಿಸಿದ 21 ದಿನಗಳೊಳಗೆ ನಗರ/…
ಈ ಗಿಡದ ಸಸ್ಯ ಶಾಸ್ತ್ರೀಯ ಹೆಸರು Andrographis Paniculata. ಕಿರಾತಕಡ್ಡಿಗೆ ನೆಲಬೇವು ಎಂಬ…