Advertisement
MIRROR FOCUS

#AgriTourism | ಕೃಷಿ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಕೃಷಿ ಆಶ್ರಮದ ಮತ್ತೊಂದು ಕಾರ್ಯಕ್ರಮ | ಕೃಷಿಯ ಆಸಕ್ತರಿಗಾಗಿ ವಿಶೇಷ ಕಾರ್ಯಗಾರ |

Share

ಮಹಾರಾಷ್ಟ್ರದಲ್ಲಿ ಈಗಾಗಲೇ ಪ್ರಸಿದ್ಧಿಯಾಗಿರುವ ಅಗ್ರಿ ಟೂರಿಸಂ (Agri Tourism)  ಅನ್ನು ಕರ್ನಾಟಕದಲ್ಲಿಯೂ ಬೆಳೆಸುವ ಇಚ್ಛೆ ಇದೆ. ಕೃಷಿ ಪ್ರವಾಸೋದ್ಯಮ, (ಹಳ್ಳಿ ಪ್ರವಾಸ, ಆಶ್ರಮ) ಕೃಷಿ ಆಶ್ರಮದ ಮೊಗದೊಂದು ಕಾರ್ಯಕ್ರಮ, ಅಕ್ಟೋಬರ್ 1 (ಭಾನುವಾರ) ಹಾಗೂ 2 (ಸೋಮವಾರ) ರಂದು ಸಾಗರದ ಬಳಿ ಆಯೋಜಿಸಲಾಗಿದೆ.

ಸಾವಯವ ಕೃಷಿಕರಿಗಾಗಿ ಮತ್ತು ಸಾವಯವ ಕೃಷಿಯ ಆಸಕ್ತರಿಗಾಗಿ ಕಾರ್ಯಕ್ರಮ ನಡೆಯುವ ಸ್ಥಳಗಳು: 01.10.2023: ಸಾರ ಸಂಸ್ಥೆ. ಬಟ್ಟೆಮಲ್ಲಪ್ಪ. ಹೊಸನಗರ ತಾ. ಶಿವಮೊಗ್ಗ ಜಿಲ್ಲೆ.

02.10.2023 ರಂದು ಸಾಗರ ಬಳಿಯ ಪ್ರಕಾಶ ಮಂಚಾಲೆ ಅವರ ಔಷಧೀಯ ಸಸ್ಯಗಳ ತೋಟದಲ್ಲಿ ಗೆಳೆಯರೇ “ಕೃಷಿ ಆಶ್ರಮ” ಎಂದರೆ ಅಗ್ರಿ ಟೂರಿಸಂ. ಈ ಯೋಜನೆಯ ಉದ್ದೇಶ ಜನರು ಮತ್ತೆ ಪಟ್ಟಣಗಳಿಂದ ಹಳ್ಳಿಗಳತ್ತ ಮುಖ ಮಾಡಬೇಕು ಹಳ್ಳಿಗಳು ಉಳಿಯಬೇಕು, ಹಳ್ಳಿಗಳ ಆರ್ಥಿಕತೆ ಸದೃಢವಾಗಬೇಕು. ಕೃಷಿಕ ಮತ್ತು ಕೃಷಿ ಮತ್ತೆ ಚಿಗುರಬೇಕು. ಭಾರತ ಮತ್ತೆ ಕೃಷಿ ಪ್ರಧಾನ ದೇಶವಾಗಬೇಕು. ಇಲ್ಲಿನ ಜನರು ಹೆಚ್ಚು ಆರೋಗ್ಯವಂತರು, ಸಂಸ್ಕೃತಿವಂತರಾಗಬೇಕು. ಈ ಉದ್ದೇಶದಿಂದ ಈ ಎರಡು ದಿನಗಳ “ಕೃಷಿ ಆಶ್ರಮ ತರಬೇತಿ ಶಿಬಿರ” ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿವರ:
ಕೃಷಿ ಆಶ್ರಮಕ್ಕೆ ಭವಿಷ್ಯವಿದೆಯೇ? ಅಲ್ಲಿ ಇರಬೇಕಾದ ವಸ್ತುಗಳೇನು? ಇರಬಾರದ ವಸ್ತುಗಳಾವುವು? ಕೃಷಿ ಆಶ್ರಮ ಎಂದರೇನು?  ಕೃಷಿ ಆಶ್ರಮ ಪರಿಕಲ್ಪನೆ, ಉದ್ದೇಶ ಮತ್ತು ಅಗತ್ಯಗಳೇನು?  ಅದರ ಸ್ಥಾಪನೆಗೆ ಸಿದ್ಧತೆ ಹೇಗೆ?  ಆಶ್ರಮ ತೆರೆಯಲು ಎಷ್ಟು ವೆಚ್ಚ ಬಂದೀತು ?  ಅಲ್ಲಿ ಯಾವ ಯಾವ ಚಟುವಟಿಕೆಗಳು ನಡೆಯಬೇಕು?  ನಿಬಂಧನೆಗಳು ಯಾವುವು?  ಕೃಷಿ ಆಶ್ರಮದ ಲಾಭಗಳೇನು?

“ಹಳ್ಳಿಯ ಸಂಪನ್ಮೂಲಗಳಿಂದ ಮೌಲ್ಯವರ್ಧನೆಯ ಸಾಧ್ಯತೆಗಳು”, ” ಕೃಷಿ ಆಶ್ರಮದಲ್ಲಿ ಆರೋಗ್ಯಕರ ದಿನಚರಿ ಹೇಗೆ ಇರಬೇಕು ಮತ್ತು ಯಾಕೆ?” , ಸಣ್ಣ ರೈತರು ಕೃಷಿಯಲ್ಲಿ ಹೇಗೆ ಬದುಕನ್ನು ಕಟ್ಟಿಕೊಳ್ಳಬಹುದು? , ಸಣ್ಣ ಜಾಗದಲ್ಲಿ ವಾರ್ಷಿಕ ದ್ವಿವಾರ್ಷಿಕ, ತ್ರಿವಾರ್ಷಿಕ & ಬಹುವಾರ್ಷಿಕ ಬೆಳೆಗಳನ್ನು ಜೋಡಿಸುವ ಕ್ರಮವನ್ನು ವೀಕ್ಷಿಸುವುದು , ಶತಮೂಲಿಕ ವನ ನಿರ್ಮಾಣದ ಬಗ್ಗೆ ತಿಳಿಯುವುದು , ಕಾಡು ಮಾದರಿಯ ತೋಟದ ನಿರ್ಮಾಣದ ಬಗ್ಗೆ ವಿವರವಾದ ನೋಟ , ನೀರಿಲ್ಲದೆ, ಸ್ವಲ್ಪ ನೀರಿದ್ದಾಗ ಮತ್ತು ನೀರು ಅವಲಂಬಿತ ಕೃಷಿ ಹೇಗೆ ಮಾಡುವುದು ಎಂದು ತಿಳಿಯಲು , ದೀರ್ಘಾವಧಿ ಬೆಳೆಗಳ ಮಧ್ಯದಲ್ಲಿ ಆಯುರ್ವೇದ ಅಥವಾ ಔಷಧೀಯ ಸಸ್ಯಗಳ ಸಂಯೋಜನೆ , ಔಷಧೀಯ ಸಸ್ಯಗಳ ಬಳಕೆ ಮತ್ತು ಉತ್ಪನ್ನಗಳ ತಯಾರಿಕೆ , ಮಣ್ಣು ಹವಾಮಾನ ತಾಪಮಾನದ ಅನುಗುಣವಾಗಿ ಕೃಷಿ ವಿಧಾನಗಳು ಇತ್ಯಾದಿ ಸಂಗತಿಗಳ ಬಗ್ಗೆ ಮಾತುಕತೆ ನಡೆಯಲಿದೆ.

ಆಸಕ್ತರು ಮತ್ತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಫೋನ್ ನಂಬರ್ ಗೆ ಸಂಪರ್ಕಿಸಿ ನೊಂದಣಿ ಮಾಡಿಸಿಕೊಳ್ಳಿ . ಕೇವಲ 50 ಮಂದಿಗೆ ಮಾತ್ರ ಅವಕಾಶ (ಇಷ್ಟು ಮಂದಿಗೆ ರಾತ್ರಿ ತಂಗಲು ವ್ಯವಸ್ಥೆ ಇದೆ). ಮೊದಲು ಪ್ರತಿಕ್ರಿಯೆ ನೀಡಿದವರಿಗೆ ಆದ್ಯತೆ. ನೊಂದಾಯಿತರಿಗೆ ಮಾತ್ರ ಅವಕಾಶ ಶುಲ್ಕ: 900/- 2 ದಿನಗಳಿಗೆ ವಸತಿ ಸಹಿತ 7259588743 ಫೋನ್ ಪೇ / ಗೂಗಲ್ ಪೇ ಸಂಪರ್ಕಿಸಿ: 7259588743 9916030272 .

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ

ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…

8 hours ago

ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು

ಒಡಿಶಾದ ಬಾಲಸೋರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…

8 hours ago

ಹವಾಮಾನ ವರದಿ | 19-09-2026 | ಸೆ.22 ರಿಂದ ಮಳೆ ಹೆಚ್ಚಳದ ಸೂಚನೆ – ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…

9 hours ago

ಗೋಮಯದಿಂದ ಗಣೇಶನ ಮೂರ್ತಿ – ದೇಶದಾದ್ಯಂತ ಸಾವಿರಾರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿತರಣೆ

ತಂದೆಯ ನೆನಪಿಗಾಗಿ ಇಂದೋರ್‌ನ ವ್ಯಕ್ತಿಯೊಬ್ಬರು ಗೋಮಯದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ…

12 hours ago

ಹವಾಮಾನ ವರದಿ | 17-09-2026 | ಕರ್ನಾಟಕದಲ್ಲಿ ಇಂದಿನಿಂದ ಮಳೆ ಚುರುಕು ಸಾಧ್ಯತೆ

ಸೆ.18ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಚುರುಕಾಗುವ ಸೂಚನೆ ಇದ್ದು, ಸೆ.19ರಿಂದ ಉತ್ತರ…

2 days ago

ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ

ಬರಪೀಡಿತ ಎಂದು ಘೋಷಿಸಿರುವ ರಾಜ್ಯದ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿ ಅವಧಿಯನ್ನು…

3 days ago