ಕಳೆದ 15 ವರ್ಷಗಳಿಂದ ನೈಸರ್ಗಿಕ ನಾರಿನ ನೇಯ್ಗೆ ಉದ್ಯಮದಲ್ಲಿ ಅನಕಪುತ್ತರ್ ನೇಕಾರರು ಕ್ರಾಂತಿಯನ್ನೇ ಉಂಟು ಮಾಡುತ್ತಿದ್ದಾರೆ.ತಮಿಳುನಾಡಿನಲ್ಲಿ ಬೆಳೆದಿರುವ ಈ ಉದ್ಯಮ ಇದೀಗ ನಶಿಸುತ್ತಿರುವ ಕೈಮಗ್ಗ ಉದ್ಯಮವಾಗಿದೆ. ಇದೀಗ ಈ ಉದ್ಯಮ ಉಳಿಸಲು ಸರ್ಕಾರಗಳು ಸಹಾಯ ಹಸ್ತ ನೀಡಬೇಕು, ಅದರ ಜೊತೆಗೇ ಗ್ರಾಹಕರು ಹೆಚ್ಚಿನ ಆಸಕ್ತಿ ವಹಿಸಬೇಕಿದೆ. ಈ ಉದ್ಯಮ ಬೆಳೆಯುವುದರಿಂದ ದೇಶೀಯತೆ ಹಾಗೂ ಕೃಷಿ ಕ್ಷೇತ್ರಕ್ಕೂ, ಗ್ರಾಮೀಣ ಅಭಿವೃದ್ಧಿಗೂ ನೆರವಾಗಲಿದೆ.
ಕಳೆದ 15 ವರ್ಷಗಳಿಂದ ನೈಸರ್ಗಿಕ ನಾರಿನ ನೇಯ್ಗೆ ಉದ್ಯಮದಲ್ಲಿ ತಮಿಳುನಾಡಿನ ಅನಕಪುತ್ತರ್ ನೇಕಾರರು ಕ್ರಾಂತಿಯನ್ನೇ ಉಂಟು ಮಾಡುತ್ತಿದ್ದಾರೆ. 25 ರೀತಿಯ ನೈಸರ್ಗಿಕ ನಾರುಗಳಲ್ಲಿ ಅನೇಕ ರೀತಿಯ ಉಡುಪುಗಳನ್ನು ಇವರು ತಯಾರಿಸಿದ್ದಾರೆ. ಇವರು ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಿದ್ದಾರೆ.
ಇಲ್ಲಿನ ಕೈಮಗ್ಗದ ಸಂಘದ ಶೇಖರ್ ಕೇವಲ ಹತ್ತಕ್ಕಿಂತ ಕಡಿಮೆ ಜನರಿರುವ ಪುಟ್ಟ ಮನೆಯಲ್ಲಿ ಇಟ್ಟುಕೊಂಡು ಬಾಳೆ ನಾರಿನಿಂದ ಸೀರೆ ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಳೆ ನಾರಿನಿಂದ ಆರಂಭಿಸಿದ ಈ ಉದ್ಯಮವನ್ನು ಇಂದು ಇವರು ತೆಂಗಿನ ನಾರಿನ ಸೀರೆ, ಬಿದಿರು ನಾರಿನ ಸೀರೆ, ಅಕ್ಕಿ ಕಳ್ಳಿ ಸೀರೆ, ಅನಾನಸ್ ಗಿಡದ ಸೀರೆ, ಕೊಂಗೂರ ಸೀರೆ ನೇಯಲು ಆರಂಭಿಸಿದ್ದಾರೆ. ಕಾಟನ್ ನೂಲಿನಿಂದ ಮಾಡಿದ ಕಾಟನ್ ಸೀರೆಗಿಂತ ಬಾಳೆ ನಾರಿನ ಕಾಟನ್ ಸೀರೆ ಹೆಚ್ಚು ಬಳಕೆಯಾಗುತ್ತಿದೆಯಂತೆ. ಏಕೆಂದರೆ ಇದು ದೇಹಕ್ಕೆ ಹೆಚ್ಚು ತಂಪು ಸಹ ನೀಡುತ್ತದೆ.
ಈ ಬಗ್ಗೆ ಮಾಹಿತಿ ನೀಡುವ ಶೇಖರ್, ನಮ್ಮ ಉದ್ಯಮಗಳಿಗೆ ಸಾಕಷ್ಟು ಜಾಗ ಮಂಜೂರು ಮಾಡುವಂತೆ ಎಂಟು ವರ್ಷಗಳಿಂದ ಕೇಂದ್ರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ ಇದುವರೆಗೂ ನೀಡಿಲ್ಲ. ಇದು ಬೆಳವಣಿಗೆಯಾದರೆ ನೇಕಾರರಿಗೆ ಸಾಕಷ್ಟು ಆದಾಯ ಸಿಗಲಿದ್ದು, ಯುವಕರಿಗೆ ಸಹ ಉದ್ಯೋಗ ಸಿಗಲಿದೆ ಎಂದು ಹೇಳುತ್ತಾರೆ.
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…