Advertisement
MIRROR FOCUS

ಗುವಾಹಟಿಯಲ್ಲಿ ಸಾವಯವ ಉತ್ಪನ್ನ ಖರೀದಿದಾರರು ಹಾಗೂ ಮಾರಾಟಗಾರರ ಸಮಾವೇಶ : ಕೃಷಿ ರಪ್ತಿಗೆ ಬಲ

Share

ಭಾರತದ ಆರ್ಗ್ಯಾನಿಕ್‌ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ವಿಸ್ತರಣೆ ಗುರಿಯೊಂದಿಗೆ APEDA (ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ)ವು ಗುವಾಹಟಿಯಲ್ಲಿ ಆರ್ಗ್ಯಾನಿಕ್‌ ಕಾಂಕ್ಲೇವ್‌-ಕಮ್‌ ಬೈಯರ್‌–ಸೆಲ್ಲರ್‌ ಮೀಟ್‌  ಆಯೋಜಿಸಿದೆ.

ಈ ಕಾರ್ಯಕ್ರಮವನ್ನು ಅಸ್ಸಾಂ ಸರ್ಕಾರದ ಸಹಯೋಗದಲ್ಲಿ ನಡೆಸಲಾಗಿದ್ದು, ಅಸ್ಸಾಂ ರಾಜ್ಯದ ಸಾವಯವ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳಿಗೆ ಹೊಸ ರಫ್ತು ಅವಕಾಶಗಳನ್ನು ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.  ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ 30ಕ್ಕೂ ಹೆಚ್ಚು ರಫ್ತುದಾರರು, 9 ಅಂತರರಾಷ್ಟ್ರೀಯ ಆಮದುದಾರರು ಹಾಗೂ 50ಕ್ಕೂ ಹೆಚ್ಚು ರೈತ ಉತ್ಪಾದಕ ಕಂಪನಿಗಳು (FPOs) ಭಾಗವಹಿಸಿ ನೇರ ವ್ಯಾಪಾರ ಸಂವಾದ ನಡೆಸಿದರು. ಇದರಿಂದ ರೈತರು ಮತ್ತು ಉತ್ಪಾದಕ ಸಂಘಗಳಿಗೆ ಮಾರುಕಟ್ಟೆ ಸಂಪರ್ಕ ಬಲವಾಗುವ ನಿರೀಕ್ಷೆ ಇದೆ.

ಅಸ್ಸಾಂನ ಸಾವಯವ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ :  ಅಸ್ಸಾಂನ ವೈವಿಧ್ಯಮಯ ಹವಾಮಾನದಿಂದ ಉತ್ಪಾದನೆಯಾಗುವ ಜೋಹಾ ಅಕ್ಕಿ, ವಿಶೇಷ ಅಕ್ಕಿ ತಳಿಗಳು, ಬಾಳೆ, ಅನಾನಸ್‌, ಮಂಡರಿನ್‌ ಕಿತ್ತಳೆ, ಅಸ್ಸಾಂ ಲಿಂಬೆ, ಜೊತೆಗೆ ಶುಂಠಿ, ಅರಿಶಿನ, ಕರಿಮೆಣಸು ಮೊದಲಾದ ಆರ್ಗ್ಯಾನಿಕ್‌ ಮಸಾಲೆಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿವೆ ಎಂದು ತಜ್ಞರು ಅಭಿಪ್ರಾಯಪಟ್ಟರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಪ್ರಮಾಣೀಕರಣ ಮತ್ತು ಮಾನದಂಡಗಳ ಕುರಿತು ಜಾಗೃತಿ :  ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಸಾವಯವ ಉತ್ಪಾದನಾ ಕಾರ್ಯಕ್ರಮ (NPOP) – 8ನೇ ಆವೃತ್ತಿ ಕುರಿತು ಜಾಗೃತಿ ಸತ್ರವನ್ನು ಆಯೋಜಿಸಲಾಗಿದ್ದು, ಲೇಬಲಿಂಗ್‌, ಪ್ರಮಾಣೀಕರಣ ಹಾಗೂ ಅಂತರರಾಷ್ಟ್ರೀಯ ಮಾನದಂಡಗಳ ಕುರಿತು ರಫ್ತುದಾರರು ಮತ್ತು ರೈತ ಸಂಘಗಳಿಗೆ ಮಾಹಿತಿ ನೀಡಲಾಯಿತು.

ಅಸ್ಸಾಂ ಕೃಷಿ ಸಚಿವರು ರಾಜ್ಯದ ಸಾವಯವ ಕೃಷಿ ಸಾಮರ್ಥ್ಯವನ್ನು ಉಲ್ಲೇಖಿಸಿ, ಸಂಗ್ರಹಣೆ, ಪ್ರಮಾಣೀಕರಣ ಮತ್ತು ಮೌಲ್ಯ ಸರಪಳಿ ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. APEDA ಅಧಿಕಾರಿಗಳು ಹೊಸ ವ್ಯಾಪಾರ ಒಪ್ಪಂದಗಳ ಮೂಲಕ ಸಾವಯವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಇನ್ನಷ್ಟು ತೆರೆದಿದೆ ಎಂದು ತಿಳಿಸಿದರು. ಈ ಸಮಾವೇಶ ಅಸ್ಸಾಂನ ರೈತರಿಗೆ ಮಾತ್ರವಲ್ಲದೆ, ದೇಶದ ಆರ್ಗ್ಯಾನಿಕ್‌ ಕೃಷಿ ರಫ್ತು ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆಯಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!

ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…

17 hours ago

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ

ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…

2 days ago

ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!

ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…

3 days ago

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…

3 days ago

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…

3 days ago